ನೇಪಾಳದ ಝೆನ್​&ಜಿ ಹೋರಾಟದ ನೆನಪಿರಲಿ / HOSAKOTE

ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್​ ಖಂಡಿಸಿ ಹೊಸಕೋಟೆ ವಿದ್ಯಾರ್ಥಿಗಳು, ಜನಪರ ಸಂಟನೆಗಳು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್​ ಖಂಡಿಸಿ ಹೊಸಕೋಟೆ ವಿದ್ಯಾರ್ಥಿಗಳು, ಜನಪರ ಸಂಟನೆಗಳು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
Published on
ಹೊಸಕೋಟೆ : ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್​ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್​ ರಾಜೀನಾಮೆಗೆ ಆಗ್ರಹಿಸಿ ಹೊಸಕೋಟೆ ನಗರದಲ್ಲಿ ವಿದ್ಯಾರ್ಥಿ ಸಂಟನೆ, ಪ್ರಜಾಪ್ರಭುತ್ವ ರಣಾ ಒಕ್ಕೂಟ, ಸಿಜೆಪಿ, ಡಿವೈಎ್​ಐ, ಸಿಐಟಿಯು, ಎಸ್​ಎ್​ಐ, ತಾಲೂಕು ವಕೀಲರ ಸಂ, ದಲಿತಪರ, ರೈತಪರ, ಕಾರ್ಮಿಕ ಸಂಟನೆಗಳ ಸಹಯೋಗದಲ್ಲಿ ಬೃಹತ್​ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಸಾಗಿದ್ದು, ಕೇಂದ್ರ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಅಖಿಲ ಭಾರತ ವಕೀಲರ ಸಂಗಳ ಒಕ್ಕೂಟದ ರಾಜ್ಯಾಧ್ಯ ಹರೀಂದ್ರ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ಇಷ್ಟು ವರ್ಷಗಳಲ್ಲಿ 12 ಬಾರಿ ನೀಟ್​ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿರುವ ಕಿಂಗ್​ಪಿನ್​ಗಳ ವಿರುದ್ಧ ಕ್ರಮ ಕೈಗೊಳ್ಳುವುದಿರಲಿ ಅದರ ಜಾಲ ಪತ್ತೆ ಹಚ್ಚುವ ಗೊಜಿಗೂ ಹೋಗಿಲ್ಲ ಎಂದರೆ ಮೋದಿಗೆ ದೇಶದ ಯುವ ಪೀಳಿಗೆ ಮೇಲೆ ಕಾಳಜಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.
2.5 ಲ ವಿದ್ಯಾರ್ಥಿಗಳು ನೀಟ್​ಗಾಗಿ ಪೂರ್ವ ತಯಾರಿ ನಡೆಸಿಕೊಂಡಿದ್ದರು. ಆದರೆ ಕೇಂದ್ರ ಸರ್ಕಾರ ಪ್ರಶ್ನೆಪತ್ರಿಕೆಗಳನ್ನೇ ಸೋರಿಕೆ ಮಾಡಿ ವಿದ್ಯಾರ್ಥಿಗಳ ಆತ್ಮಸ್ಥೆರ್ಯ ಕುಗ್ಗಿಸುತ್ತಿದೆ. ಇದರಿಂದ ಮನನೊಂದು 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇದು ನಿಜವಾಗಿ ಆತ್ಮಹತ್ಯೆಯಲ್ಲ ಕೇಂದ್ರ ಮಾಡಿದ ಸಂಚಿನ ಹತ್ಯೆ. ಇದೆಲ್ಲದರ ವಿರುದ್ಧ ವಿದ್ಯಾರ್ಥಿಗಳು ಧ್ವನಿ ಎತ್ತಿದರೆ ಕೇಂದ್ರವು ಪೊಲೀಸ್​ ಶಕ್ತಿ ಬಳಸಿ ಗೂಂಡಾಗಿರಿಗೆ ಮುಂದಾಗುತ್ತಿದೆ. ಶ್ರೀವೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೇ, ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್​ ರಾಜೀನಾಮೆ ನೀಡದಿದ್ದರೇ ನೇಪಾಳದಲ್ಲಾದ ದುಸ್ಥಿತಿ ನಿಮಗೂ ಆಗುತ್ತೆ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಸಿದರು.
ಡಿಎಸ್​ಎಸ್​ (ಅಂಬೇಡ್ಕರ್​ವಾದ) ತಾಲೂಕು ಅಧ್ಯ ಚಿನ್ನಸ್ವಾಮಿ ಮಾತನಾಡಿ, 21 ವಿದ್ಯಾರ್ಥಿಗಳ ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚಿ ದೇಶದಿಂದ ಗಡಿಪಾರು ಪಾಡಬೇಕು. ಇದರ ಹೊಣೆ ಹೊತ್ತು ಧಮೇರ್ಂದ್ರ ಪ್ರಧಾನ್​ ಕೂಡಲೇ ರಾಜೀನಾಮೆ ಸಲ್ಲಿಸಬೇಕು. ವಿದ್ಯಾರ್ಥಿಗಳ ಶಾಂತಿಯುತ ಹೋರಾಟ ನಡೆಸುತ್ತಿದ್ದರೆ ಲಾಠಿ ಪ್ರಹಾರ ನಡೆಸಿದ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಬೇಕು. ಮೋದಿ ಅವರು ದೇಶದ ಜನತೆಗೆ ಬಹಿರಂಗವಾಗಿ ಮೆಯಾಚಿಸಬೇಕು ಎಂದರು.
ಸಿಐಟಿಯು ತಾಲೂಕು ಕಾರ್ಯದರ್ಶಿ, ಖಜಾಂಚಿ ಮೋಹನ್​ ಬಾಬು, ದಲಿತ ಹಕ್ಕುಗಳ ಸಮಿತಿ ಕಾರ್ಯದರ್ಶಿ ಎಂ.ಮುನಿರಾಜು, ವಕೀಲರಾದ ರವಿಂದ್ರ, ಗಣೇಶ್​, ವಿವಿಧ ದಲಿತ ಸಂಟನೆಗಳ ಮುಖಂಡರು, ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net