ಧಾರ್ಮಿಕ ಆಚರಣೆಯಿಂದ ಮನಸ್ಸಿಗೆ ನೆಮ್ಮದಿ

ತಲ್ಲೂರ ಗ್ರಾಮದಲ್ಲಿ ಹನುಮಂತ ದೇವರ ಜಾತ್ರಾ ಮಹೋತ್ಸವಕ್ಕೆ ನಂದಿಮಠದ ಬಾಳಯ್ಯಜ್ಜ ಓಕುಳಿ ಹೊಂಡಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಅನಿಲಕುಮಾರ ದೇಸಾಯಿ, ಬಸವರಾಜ ಪೂಜೇರ, ನೀಲಕಂಠ ಶಿವಪೂಜಿ, ಬಸವರಾಜ ಈಟಿ ಇತರರಿದ್ದರು.
ತಲ್ಲೂರ ಗ್ರಾಮದಲ್ಲಿ ಹನುಮಂತ ದೇವರ ಜಾತ್ರಾ ಮಹೋತ್ಸವಕ್ಕೆ ನಂದಿಮಠದ ಬಾಳಯ್ಯಜ್ಜ ಓಕುಳಿ ಹೊಂಡಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಅನಿಲಕುಮಾರ ದೇಸಾಯಿ, ಬಸವರಾಜ ಪೂಜೇರ, ನೀಲಕಂಠ ಶಿವಪೂಜಿ, ಬಸವರಾಜ ಈಟಿ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ತಲ್ಲೂರ
ಧಾರ್ಮಿಕ ಆಚರಣೆಗಳಿಂದ ಮಾತ್ರ ಮನಸ್ಸಿಗೆ ಶಾಂತಿ ದೊರಕುತ್ತದೆ. ಹಣ, ಅಧಿಕಾರ ಯಾವುದರಿಂದಲೂ ನೆಮ್ಮದಿ ಸಿಗಲಾರದು ಎಂದು ಸ್ಥಳೀಯ ನಂದಿಮಠದ ಬಾಳಯ್ಯಜ್ಜ ಹೇಳಿದರು.
ಹನುಮಂತ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿ, ಮಠ ಮಾನ್ಯಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯುವಕರು ಶ್ರದ್ಧೆಯಿಂದ ಭಾಗವಹಿಸಬೇಕು ಎಂದು ಹೇಳಿದರು.
ಪಿಕೆಪಿಎಸ್ ಮಾಜಿ ಅಧ್ಯಕ್ಷ ಶ್ರೀಮಂತ ಅನಿಲಕುಮಾರ ದೇಸಾಯಿ ಮಾತನಾಡಿ, ಪ್ರತಿಯೊಬ್ಬರೂ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮನೆ ಮನೆಗೆ ಭೇಟಿ ನೀಡುವ ಬಿಎಲ್‌ಒಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಹನುಮಂತ ದೇವರಿಗೆ ಅಭಿಷೇಕ, ಎಲೆ ಪೂಜೆ, ಶ್ರೀರಾಮ ಜಪ ಹಾಗೂ ಹನುಮಾನ ಚಾಲೀಸ್ ಪಠಣ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೆರವೇರಿದವು. ಗ್ರಾಮಸ್ಥರು ಓಕುಳಿ ಹೊಂಡಕ್ಕೆ ಪೂಜೆ ಸಲ್ಲಿಸಿದರು. ಸಂಜೆ ಯುವಕರು ಪರಸ್ಪರ ನೀರು ಎರಚಿ ಸಂಭ್ರಮಿಸಿದರು.
ಮುಖಂಡ ಬಸವರಾಜ ಪೂಜೇರ, ನೀಲಕಂಠ ಶಿವಪೂಜಿ, ಬಸವರಾಜ ಈಟಿ, ವಿಠ್ಠಲ ಕಲ್ಲನ್ನವರ, ಪರಶುರಾಮ ಜಾಧವ, ಶಿವಪ್ಪ ನಡುವಿನಮನಿ, ಶಿವಾಜಿ ಬೋಯಿಟೆ, ಬಸವಣ್ಣೆಪ್ಪ ಕಲಬಸಪ್ಪನವರ, ಕೀರಪ್ಪ ಉಪ್ಪಾರ, ಬಸವರಾಜ ಕಲ್ಲನ್ನವರ, ಹನಮಂತ ಮನ್ನಿಕೇರಿ, ಬಸವರಾಜ ಕಟ್ಟೀಮನಿ, ಸಂಗಪ್ಪ ಕಾಜಗಾರ, ಲಕ್ಷಣ ಈರಗಾರ, ಕೀರಪ್ಪ ಭಜಂತ್ರಿ, ನಿಂಗಪ್ಪ ದೊಡವಾಡ, ಶಿವಯೋಗಿ ಬಡಿಗೇರ, ಗುಡೂಸಾಬ್ ಸಾಬರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net