ಮಾನಸಿಕ ಶಾಂತಿಗೆ ಧರ್ಮಾಚರಣೆ ಅಗತ್ಯ

 ಗೊಣಗಿ ಗ್ರಾಮದಲ್ಲಿ ನೂತನ ಹನುಮಾನ ದೇವಸ್ಥಾನದ ಲೋಕಾರ್ಪಣೆ ಹಾಗೂ ಕಳಸಾರೋಹಣ ಸಮಾರಂಭ ನಿಮಿತ್ತ ಮಂಗಳವಾರ ನಡೆದ ಧರ್ಮ ಸಭೆಯ ಸಾನ್ನಿದ್ಯವನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ವಹಿಸಿದ್ದರು. ಶ್ರೀ ಚಂದ್ರಗುಂಡ ಶಿವಾಚಾರ್ಯ, ಶ್ರೀ ರಾಜೇಶ್ವರ ಶಿವಾಚಾರ್ಯರು, ಶ್ರೀ ಡಾ. ಶಾಂತಸೋಮನಾಥ ಶಿವಾಚಾರ್ಯ,ಶಿವಕುಮಾರ ಶಿವಾಚಾರ್ಯ, ಸಿದ್ಧಲಿಂಗ ಶಿವಾಚಾರ್ಯರು, ಶ್ರೀ ಬಸವಲಿಂಗ ಶಿವಾಚಾರ್ಯ ಇತರರಿದ್ದರು.
ಗೊಣಗಿ ಗ್ರಾಮದಲ್ಲಿ ನೂತನ ಹನುಮಾನ ದೇವಸ್ಥಾನದ ಲೋಕಾರ್ಪಣೆ ಹಾಗೂ ಕಳಸಾರೋಹಣ ಸಮಾರಂಭ ನಿಮಿತ್ತ ಮಂಗಳವಾರ ನಡೆದ ಧರ್ಮ ಸಭೆಯ ಸಾನ್ನಿದ್ಯವನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ವಹಿಸಿದ್ದರು. ಶ್ರೀ ಚಂದ್ರಗುಂಡ ಶಿವಾಚಾರ್ಯ, ಶ್ರೀ ರಾಜೇಶ್ವರ ಶಿವಾಚಾರ್ಯರು, ಶ್ರೀ ಡಾ. ಶಾಂತಸೋಮನಾಥ ಶಿವಾಚಾರ್ಯ,ಶಿವಕುಮಾರ ಶಿವಾಚಾರ್ಯ, ಸಿದ್ಧಲಿಂಗ ಶಿವಾಚಾರ್ಯರು, ಶ್ರೀ ಬಸವಲಿಂಗ ಶಿವಾಚಾರ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗೊಣಗಿ ಹನುಮಾನ ದೇವಸ್ಥಾನದ ಲೋಕಾರ್ಪಣೆ
  • ರಂಭಾಪುರಿ ಶ್ರೀಗಳ ಅಭಿಮತ
ಕಾಳಗಿ: ಹೆತ್ತ ತಾಯಿ, ಹೊತ್ತ ಭೂಮಿ ಎಷ್ಟು ಮುಖ್ಯವೋ ಅಷ್ಠೇ ಧರ್ಮವೂ ಮುಖ್ಯ. ಭೌತಿಕ ಸಂಪತ್ತು ಎಷ್ಟಿದ್ದರೇನು ಮಾಸಿಕ ಶಾಂತಿಗಾಗಿ ಧರ್ಮಾಚರಣೆ ಮಾಡಬೇಕು ಅಂದಾಗ ಜೀವನದಲ್ಲಿ ಶಾಂತಿ ಲಭಿಸುತ್ತದೆ ಎಂದು ಬಾಳೆಹೊನ್ನೂರ ರಂಭಾಪುರಿ ಜಗದ್ಗುರು ಶ್ರೀ ವೀರ ಸೋಮೇಶ್ವರ ಶಿವಾಚಾರ್ಯರು ಅಭಿಪ್ರಾಯಟ್ಟರು.
ಕಮಲಾಪೂರ ತಾಲೂಕಿನ ಗೊಣಗಿ ಗ್ರಾಮದ ಹನುಮಾನ ದೇವಸ್ಥಾನದ ಲೋಕಾರ್ಪಣೆ ಹಾಗೂ ಕಳಸಾರೋಹಣ ಸಮಾರಂಭದ ನಿಮಿತ್ತ ಮಂಗಳವಾರ ನಡೆದ ಧರ್ಮಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು ಶ್ರೀ ಜಗದ್ಗುರು ರೇಣುಕಾಚಾರ್ಯರು ಹಾಗೂ ಶ್ರೀ ಜಗದ್ಗುರು ರೇವಣಸಿದ್ಧೇಶ್ವರು ಮಾಡಿದ ಧಾರ್ಮಿಕ ಮತ್ತು ಸಾಮಾಜಿಕ ಸತ್ಕಾಂತಿ ಎಲ್ಲ ಕ್ರಾಂತಿಗಳ ಮೂಲ ಗಂಗೋತ್ರಿಯಾಗಿದೆ. ಅವರು ಬೋಧಿಸಿದ ದಶವಿಧಿ ಸೂತ್ರಗಳು ಬದುಕಿನ ವಿಕಾಸಕ್ಕೆ ದಾರಿದೀಪವಾಗಿವೆ. ಸತ್ಯದ ತಳಹದಿ ಮೇಲೆ ಜೀವನ ರೂಪುಗೋಳ್ಳಬೇಕು ಎಂದು ಸಲಹೆ ನೀಡಿದರು.
ಹೊನ್ನಕಿರಣಗಿ ಪೂಜ್ಯ ಶ್ರೀ ಚಂದ್ರಗುಂಡ ಶಿವಾಚಾರ್ಯರು ಮಾತನಾಡಿ, ವೀರಶೈವ ಧರ್ಮದ ಸಂಸ್ಕೃತಿಕ ಆಚರಣೆಗಳು ಮಾನವರ ಬದುಕಿಗೆ ಮಾರ್ಗದರ್ಶಿಯಾಗಿವೆ. ಎಲ್ಲರೂ ಧರ್ಮಪಾಲನೆ ಮಾಡಬೇಕು ಎಂದರು.
ಮೇಹಕರ ಹಿರೇಮಠದ ಪೂಜ್ಯ ಶ್ರೀ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ದೇಶದ ನಾನಾ ಭಾಗದ ದೇವಾಲಯಗಳು ತನ್ನದೇ ಆದ ಪ್ರಾಮುಖ್ಯತೆ ಹೊಂದಿವೆ. ದೇವಾಲಯಗಳು ಸಂಸ್ಕೃತಿಕ ಕೇಂದ್ರವಾಗಿದ್ದು , ಜೀವನದಲ್ಲಿ ಸಕಾರಾತ್ಮಕ ಪರಿಣಾಮ ನೀಡುತ್ತವೆ ಎಂದು ತಿಳಿಸಿದರು.
ಕಾರ್ಯಕ್ರದಲ್ಲಿ ನರನಾಳ ಪೂಜ್ಯ ಶ್ರೀ ಶಿವಕುಮಾರ ಶಿವಾಚಾರ್ಯರು, ಆಂದೋಲಾ ಪೂಜ್ಯ ಶ್ರೀ ಸಿದ್ಧಲಿಂಗ ಶಿವಾಚಾರ್ಯರು, ಮಂಗಲಗಿ ಪೂಜ್ಯ ಶ್ರೀ ಡಾ.ಶಾಂತಸೋಮನಾಥ ಶಿವಾಚಾರ್ಯರು, ಕೊಡ್ಲಿ ಪೂಜ್ಯ ಶ್ರೀ ಬಸವಲಿಂಗ ಶಿವಾಚಾರ್ಯರು, ರಟಕಲ್​ ಪೂಜ್ಯ ಶ್ರೀ ರೇವಣಸಿದ್ಧ ಶಿವಾಚಾರ್ಯರು, ಹೊಸಳ್ಳಿ ಶ್ರೀ ಸಿದ್ಧಲಿಂಗ ಶಿವಾಚಾರ್ಯರು, ಐನಾಪುರ ಪೂಜ್ಯ ಶ್ರೀ ಉಪಮನ್ಯ ಶಿವಾಚಾರ್ಯರು, ಚಂದನಕೇರಾ ಪೂಜ್ಯ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಸೋನಾಲಗಿರಿ ಪೂಜ್ಯ ಶ್ರೀ ಪರ್ವತಲಿಂಗ ಪರಮೇಶ್ವರ ಮಹಾರಾಜರು ಉಪಸ್ಥಿತರಿದದರು.
ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ, ಜೆಡಿಎಸ್​ ರಾಜ್ಯ ಕಾರ್ಯಧ್ಯ ದೊಡ್ಡಪ್ಪಗೌಡ ಪಾಟೀಲ್​ ನರಿಬೋಳ, ಶಿವಶರಣಪ್ಪ ಸೀರಿ, ಪ್ರಮುಖರಾದ ಮಲ್ಲಿನಾಥ ಪಾಟೀಲ್​, ಶಿವರಾಜ ಪಾಟೀಲ್​, ರಾಮಚಂದ್ರ ಜಾಧವ್​, ಮಲ್ಲಿಕಾರ್ಜುನ ಪಾಟೀಲ್​ ಹುಳಗೇರಿ, ರೇವಶೆಟ್ಟಿ ಪಾಟೀಲ್​, ಮಲ್ಲಿಕಾರ್ಜುನ ಗಾಜರೆ, ಶರಣು ಪಾಟೀಲ್​ ಮೊತಕಪಲ್ಲಿ, ಇಮ್ತಿಯಾಜ್​ ಅಲಿ, ರಾಜು ಜಾಧವ್​, ದತ್ತಾತ್ರೇಯ ರಾಯಗೋಳ, ವೀರಣ್ಣ ಗಂಗಾಣಿ, ರೇವಣಸಿದ್ದ ಬಡಾ ಸೇರಿದಂತೆ ಅನೇಕರಿದ್ದರು. ವಿವೇಕ ಸ್ವಾಮಿ ನಿರೂಪಿಸಿ,ವಂದನಾರ್ಪಣೆ ಮಾಡಿದರು. ಗ್ರಾಮದಲ್ಲಿ ಬಾಳೆಹೊನ್ನೂರು ಶೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಯಿತು.
"

ಭಾರತದಲ್ಲಿ ಜಾತಿ ಆಧಾರಿತ ಸಹಾಯಧನ, ಮೀಸಲಾತಿ ಜಾರಿಗೆಯಲ್ಲಿದೆ. ಕೇವಲ ಮೇಲ್ವರ್ಗದಲ್ಲಿ ಶ್ರೀಮಂತರಿದ್ದಾರೆ ಎಂಬುದು ತಪ್ಪು . ಕೆಲ ವರ್ಗಗಳಲ್ಲಿಯೂ ಶ್ರೀಮಂತರಿದ್ದಾರೆ. ಎಲ್ಲಾ ವರ್ಗಗಳಲ್ಲಿಯೂ ಬಡಜನರಿದ್ದಾರೆ ಹೀಗಾಗಿ ಎಲ್ಲಾ ವರ್ಗಗಳಲ್ಲಿನ ಆರ್ಥಿಕ ಸ್ಥಿತಿಗತಿ ಆಧರಿಸಿ ಸಹಾಯಧನ, ಮೀಸಲಾತಿ ನೀಡಿದರೆ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ.

— ಜಗದ್ಗುರು ಶ್ರೀ ವೀರ ಸೋಮೇಶ್ವರ ಶಿವಾಚಾರ್ಯರು ಬಾಳೆಹೊನ್ನೂರು


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net