ರಿಲಯನ್ಸ್ ಡಿಜಿಟಲ್ ಡಿಸ್ಕೌಂಟ್ ಡೇಸ್ ಅಭಿಯಾನ: ಉತ್ಪನ್ನಗಳ ಮೇಲೆ ವಿವಿಧ ಆಫರ್​​-Reliance Digital

‘ರಿಲಯನ್ಸ್ ಡಿಜಿಟಲ್
‘ರಿಲಯನ್ಸ್ ಡಿಜಿಟಲ್
Published on
ಬೆಂಗಳೂರು: ದೇಶದ ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ಸ್ ರೀಟೇಲರ್ ‘ರಿಲಯನ್ಸ್ ಡಿಜಿಟಲ್’, ಅಕ್ಷಯ ತೃತೀಯಾ ಪ್ರಯುಕ್ತ ‘ಡಿಜಿಟಲ್ ಡಿಸ್ಕೌಂಟ್ ಡೇಸ್’ ಅಭಿಯಾನ ಪರಿಚಯಿಸಿದೆ.
ಪ್ರಮುಖ ಬ್ಯಾಂಕ್ ಕಾರ್ಡ್‌ಗಳ ಮೇಲೆ ಗ್ರಾಹಕರು 26 ಸಾವಿರ ರೂ.ವರೆಗೆ ತ್ವರಿತ ರಿಯಾಯಿತಿ ಅಥವಾ ಪೇಪರ್ ಫೈನಾನ್ಸ್ ಮೇಲೆ 30 ಸಾವಿರ ರೂ.ವರೆಗಿನ ಕ್ಯಾಶ್‌ಬ್ಯಾಕ್ ಆಯ್ಕೆ ಮಾಡಿಕೊಳ್ಳಬಹುದು. 2ನೇ ಉತ್ಪನ್ನದ ಮೇಲೆ ಶೇ.50 ರಿಯಾಯಿತಿ ಸಿಗಲಿದೆ. ಆಡಿಯೋ ಡಿವೈಸ್, ಮೊಬೈಲ್, ಲ್ಯಾಪ್‌ಟಾಪ್ ಮತ್ತು ಆಯ್ದ ಗೃಹೋಪಯೋಗಿ ಸೇರಿ ಇತರ ವಸ್ತುಗಳ ಮೇಲೆ ಆಕರ್ಷಕ ಕೊಡುಗೆ ದೊರೆಯಲಿದೆ.
ಬ್ಲೂಟೂತ್ ಸ್ಪೀಕರ್‌ಗಳು, ನೆಕ್‌ಬ್ಯಾಂಡ್ ಮತ್ತು ವೈರ್‌ಲೆಸ್ ಹೆಡ್‌ಫೋನ್‌ಗಳಂತಹ ಉತ್ಪನ್ನಗಳು ಅರ್ಧದಷ್ಟು ಬೆಲೆಗೆ ಲಭ್ಯವಿದೆ. 1,699 ರೂ.ಬೆಲೆಯ ಆಯ್ದ ಸ್ಪೀಕರ್‌ಗಳು ಅಂದಾಜು 850 ರೂ.ಗೆ ಲಭ್ಯವಿದೆ. 9,999 ರೂ. ಶ್ರೇಣಿಯ ಪ್ರೀಮಿಯಂ ಹೆಡ್‌ಫೋನ್‌ಗಳನ್ನು ‘ಇತರೆ ವಸ್ತುಗಳ ಮೇಲಿನ ಪ್ರಯೋಜನಗಳು’ ಅಡಿ 5 ಸಾವಿರ ರೂ.ಗೆ ಖರೀದಿಸಬಹುದು. ವೈರ್‌ಲೆಸ್ ಮೌಸ್, ಲ್ಯಾಪ್‌ಟಾಪ್, ಪವರ್ ಬ್ಯಾಂಕ್‌ಗಳು ಮತ್ತು ಸ್ಯಾಂಡ್‌ವಿಚ್ ಮೇಕರ್‌ಗಳಂತಹ ಸಣ್ಣ ಅಡುಗೆ ಸಲಕರಣೆಗಳಂತಹ ದೈನಂದಿನ ಅಗತ್ಯ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಸಿಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net