ಫ್ಯಾಸಿನೊ ಶ್ರೇಣಿಯ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ: 76,500 ರೂ.ನಿಂದ ದರ ಆರಂಭ- Fascino scooter

ಫ್ಯಾಸಿನೊ ಶ್ರೇಣಿಯ ಸ್ಕೂಟರ್
ಫ್ಯಾಸಿನೊ ಶ್ರೇಣಿಯ ಸ್ಕೂಟರ್
Published on
ಬೆಂಗಳೂರು:ಇಂಡಿಯಾ ಯಮಹಾ ಮೋಟಾರ್ ಪ್ರೈ.ಲಿ.,ಹೊಸದಾಗಿ ವಿನ್ಯಾಸ ಮಾಡಿರುವ ‘ಫ್ಯಾಸಿನೊ ಶ್ರೇಣಿಯ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ಗ್ರೇ,ಬ್ಲಾಕ್ ಬಣ್ಣದ ‘ಯಮಹಾ ‘ಫ್ಯಾಸಿನೊ ಎಸ್’ ಸ್ಕೂಟರ್ 95,200 ರೂ, ನೀಲಿ, ಹಸಿರು, ಮ್ಯಾಟ್ ಬ್ಲೂ ಬಣ್ಣದ ‘‘ಫ್ಯಾಸಿನೊ ಡಿಸ್ಕ್’ ಸ್ಕೂಟರ್ 88 ಸಾವಿರ ರೂ.ಮತ್ತು ರೆಡ್, ಮೆಟಾಲಿಕ್ ಬ್ಲಾಕ್, ವೈಟ್ ಬಣ್ಣದ ‘‘ಫ್ಯಾಸಿನೊ ಡ್ರಮ್’ ಸ್ಕೂಟರ್ ದರವು 76,500 ರೂ.ನಿಂದ ಆರಂಭವಾಗಲಿದೆ. ದೇಶದ ಎಲ್ಲ ಯಮಹಾ ಶೋರೂಂಗಳಲ್ಲಿ ಈ ಬೈಕ್ ದೊರೆಯಲಿದೆ.
ಗ್ರಾಹಕರ ಅಭಿಲಾಷೆಗೆ ತಕ್ಕಂತೆ ಈ ಬೈಕ್ ವಿನ್ಯಾಸಪಡಿಸಲಾಗಿದೆ. ಆಧುನಿಕ ಜೀವನಶೈಲಿ ಮತ್ತು ಫ್ಯಾಷನ್ ಆಯ್ಕೆಗಳನ್ನು ಪ್ರತಿಬಿಂಬಿಸಲು ವಿನ್ಯಾಸಗೊಳಿಸಲಾದ ಹೊಸ ಫ್ಯಾಸಿನೊ’ ಯುವ ಪೀಳಿಗೆಯನ್ನು ಸೆಳೆಯಲಿದೆ.ಈ ಸ್ಕೂಟರ್ ಹಿಂದಿಗಿಂತಲೂ ಹೆಚ್ಚು ಟ್ರೆಂಡಿಯಾಗಿದೆ. ಕಾರ್ಯಕ್ಷಮತೆ ಮತ್ತು ದಕ್ಷತೆ ವಿಷಯದಲ್ಲಿ ಫ್ಯಾಸಿನೊ ಆಕರ್ಷಿಸುತ್ತಿದೆ ಎಂದು ಯಮಹಾ ಮೋಟಾರ್ ಇಂಡಿಯಾ ಗ್ರೂಪ್‌ನ ಅಧ್ಯಕ್ಷ ಹಾಜಿಮ್ ಅಯೋಟಾ ಹೇಳುತ್ತಾರೆ.
ಹಲವು ವರ್ಷಗಳಿಂದ ಫ್ಯಾಸಿನೊ ಗ್ರಾಹಕರ ಅಗತ್ಯ ತಕ್ಕಂತೆ ನಿರಂತರವಾಗಿ ಬದಲಾಗುತ್ತಾ ಬಂದಿದೆ. 2015ರಲ್ಲಿ 110 ಸಿಸಿ ಇಂಜಿನ್ ಆಧಾರಿತ ಸ್ಕೂಟರ್ ಬಿಡುಗಡೆ ಮಾಡಲಾಗಿತ್ತು. 2019ರಲ್ಲಿ ಇದನ್ನು ಸುಧಾರಿತ ಕಾರ್ಯಕ್ಷಮತೆಗಾಗಿ ಬಿಎಸ್6 ನಿಯಮಾವಳಿಗೆ ಪೂರಕವಾಗಿ ಫ್ಯುಯೆಲ್ ತಂತ್ರಜ್ಞಾನದೊಂದಿಗೆ 125 ಸಿಸಿಗೆ ಬದಲಾಯಿಸಲಾಯಿತು. 2021ರಲ್ಲಿ ಫ್ಯಾಸಿನೊ ಸ್ಕೂಟರ್‌ನ್ನು ದೊಡ್ಡ ತಾಂತ್ರಿಕದೊಂದಿಗೆ ಬದಲಾವಣೆ ಕಂಡು ಯಮಹಾದ ಮೊದಲ ಹೈಬ್ರಿಡ್ ಸ್ಕೂಟರ್ ಆಯಿತು. ಇದರಲ್ಲಿ ’ಸ್ಮಾರ್ಟ್ ಮೋಟಾರ್ ಜನರೇಟರ್’ (ಎಸ್‌ಎಂಜಿ) ಮತ್ತು ‘ಪವರ್ ಅಸಿಸ್ಟ್’ ತಂತ್ರಜ್ಞಾನ ಪರಿಚಯಿಸಲಾಯಿತು. 2025ರಲ್ಲಿ ಸುಧಾರಿತ ತಂತ್ರಜ್ಞಾನವನ್ನು ಪರಿಚಯಿಸುವ ಮೂಲಕ ಕಾರ್ಯಕ್ಷಮತೆ ಮತ್ತು ಕನೆಕ್ಟಿವಿಟಿ ಸಾಧನಗಳನ್ನು ಮೇಲ್ದರ್ಜೆಗೆ ಏರಿಸಲಾಯಿತು ಎಂದು ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net