ಜಿಲ್ಲೆಯತ್ತ ಹೇಮೆ ನೀರನ್ನು ಹರಿಸಿ water

ಸುದ್ದಿಗೊಷ್ಠಿಯಲ್ಲಿ water ತಾಲೂಕು ಪ್ರಧಾನ ಕಾರ್ಯದರ್ಶಿ ವಿದ್ಯಾಸಾಗರ್​, ಪಪಂ ಮಾಜಿ ಸದಸ್ಯರಾದ ಜಿ.ಎನ್​.ಅಣ್ಣಪ್ಪಸ್ವಾಮಿ, ಜಿ.ಆರ್​.ಶಿವಕುಮಾರ್​ ಇದ್ದರು.
ಸುದ್ದಿಗೊಷ್ಠಿಯಲ್ಲಿ water ತಾಲೂಕು ಪ್ರಧಾನ ಕಾರ್ಯದರ್ಶಿ ವಿದ್ಯಾಸಾಗರ್​, ಪಪಂ ಮಾಜಿ ಸದಸ್ಯರಾದ ಜಿ.ಎನ್​.ಅಣ್ಣಪ್ಪಸ್ವಾಮಿ, ಜಿ.ಆರ್​.ಶಿವಕುಮಾರ್​ ಇದ್ದರು.
Published on

ಗುಬ್ಬಿ:

ತಾಲೂಕಿನಾದ್ಯಂತ ಎಲ್ಲ ಕೆರೆಗಳು ನೀರು ಇಲ್ಲದೆ ಬರಿದಾಗಿ ಕುಡಿಯುವ ನೀರಿಗೂ

water

ತತ್ವಾರ ಎದುರಾಗಿದೆ ಎಂದು ಬಿಜೆಪಿ ಮುಖಂಡ ಎಸ್​.ಡಿ.ದಿಲೀಪ್​ ಕುಮಾರ್​ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಬಹುತೇಕ ಎಲ್ಲ ಕೆರೆ&ಕಟ್ಟೆಗಳು ಬತ್ತಿ ಹೋಗಿ ಜನ, ಜಾನುವಾರು ಸೇರಿ ಪಕ್ಷಿ ಸಂಕುಲಕ್ಕೂ ನೀರು ಸಿಗದ ದುಸ್ಥಿತಿ ಎದುರಾಗಿದೆ. ಸದ್ಯದ ಪರಿಸ್ಥಿತಿ ಹೇಮಾವತಿ ಡ್ಯಾಂಗೆ ಒಳಹರಿವು ಹೆಚ್ಚಿದೆ. ತಮಿಳುನಾಡಿನ ಕಣ್ಣು ಬೀಳುವ ಮುನ್ನ ತುಮಕೂರು ಜಿಲ್ಲೆಯತ್ತ ಹೇಮಾವತಿ ನೀರನ್ನು ಹರಿಸುವಂತೆ ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಮುಖಂಡ ಎಚ್​.ಟಿ.ಭೈರಪ್ಪ ಮಾತನಾಡಿ, ಕಳೆದ ಬಾರಿ ಅಧಿಕಾರಿಗಳ ರ್ನಿಲಕ್ಷ$್ಯ ಮತ್ತು ಗುಬ್ಬಿ ಶಾಸಕ ಬೇಜವಾಬ್ದಾರಿ ತನದಿಂದ ಗುಬ್ಬಿ ತಾಲೂಕಿನ ಹಲವು ಕೆರೆಗಳು ಹೇಮಾವತಿ ನೀರಿನಿಂದ ತುಂಬಿರಲಿಲ್ಲ. ಆದರೆ ಈ ಬಾರಿ ಬರಗಾಲ ಎದುರಾಗಿದ್ದು ಕೆರೆಕಟ್ಟೆಗಳು ಬತ್ತಿ ಹೋಗಿ ಸಂಕಷ್ಟ ಎದುರಾಗಿದೆ. ಈ ಕೂಡಲೇ ಅಧಿಕಾರಿಗಳು ಮತ್ತು ಶಾಸಕರು ಸಲಹಾ ಸಮಿತಿಯೊಂದಿಗೆ ಚರ್ಚಿಸಿ ನೀರು ಹರಿಸುವ ಕೆಲಸಕ್ಕೆ ಮುಂದಾಗಬೇಕಿದೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಬಲರಾಮಯ್ಯ ಮಾತನಾಡಿ, ಭಾಜಪ ಮುಖಂಡರು ಮತ್ತು ಪಕ್ಷದ ಪ್ರಮುಖರೆಲ್ಲ ಸೇರಿ ಇಂದು ಹೇಮಾವತಿ ನೀರು ಹರಿಸುವಂತೆ ಒತ್ತಾಯ ಮಾಡುತ್ತಿದ್ದೇವೆ. ಈಗಾಗಲೇ ಗುಬ್ಬಿ ತಾಲೂಕು ಬರಗಾಲಕ್ಕೆ ಸಿಲುಕಿ ಕೆರೆಕಟ್ಟೆಗಳು ಬತ್ತಿ ಹೋಗಿದ್ದು ರೈತರು ಪರದಾಡುವ ಸ್ಥಿತಿ ಬಂದೊದಗಿದೆ. ಜಿಲ್ಲೆಗೆ 24 ಟಿಎಂಸಿ ಗುಬ್ಬಿ ತಾಲೂಕಿನ 18.5 ಎಂಸಿಎಫ್​ಟಿ ಹೇಮಾವತಿ ನೀರಿನ ಪಾಲನ್ನು ತುರ್ತಾಗಿ ಹರಿಸಬೇಕೆಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್​.ಪಂಚಾಕ್ಷರಿ ಮಾತನಾಡಿ, ನೀರಾವರಿ ಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಗಮನಹರಿಸಿ ಜಿಲ್ಲೆಗೆ ಸಿಗಬೇಕಾದ ನೀರಿನ ಪಾಲನ್ನು ಕೊಡಿಸುವ ಕೆಲಸಕ್ಕೆ ಮುಂದಾಗ ಬೇಕಿದೆ ಎಂದರು.
ಮುಖಂಡರಾದ ಎಸ್​.ನಂಜೇಗೌಡ, ಚನ್ನಶೆಟ್ಟಿಹಳ್ಳಿ ಯತೀಶ್​, ಗಂಗಣ್ಣ, ಬಿ.ಲೋಕೇಶ್​, ಕುಮಾರಸ್ವಾಮಿ, ರವಿಕುಮಾರ್​, ತಿರುಮಲೇಶ್​, ಜಿ.ಆರ್​.ಬಸವರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net