ಚನ್ನಪಟ್ಟಣ ಅಭ್ಯುದಯ ಸಹಕಾರ ಬ್ಯಾಂಕ್​ಗೆ ರೇಖಾ ಅಧ್ಯೆ

Rekha Adhyay to Channapatna Abhyudaya Cooperative Bank
Rekha Adhyay to Channapatna Abhyudaya Cooperative Bank
Published on

ಚನ್ನಪಟ್ಟಣ:

ಅಭ್ಯುದಯ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್​ನ ನೂತನ ಅಧ್ಯರಾಗಿ ಜೆಡಿಎಸ್​ ಬೆಂಬಲಿತ ನಿರ್ದೇಶಕಿ ರೇಖಾ ಉಮಾಶಂಕರ್​ ಅವಿರೋಧ ಆಯ್ಕೆಯಾದರು.

ಗೀತಾಂಜಲಿ ಅಭಿಲಾಷ್​ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತಾದರೂ ರೇಖಾ ಉಮಾಶಂಕರ್​ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಅಭಿವೃದ್ಧಿ ಅಧಿಕಾರಿ ಅಂಜನ್​ ಮೂರ್ತಿ ಅವಿರೋಧ ಆಯ್ಕೆ ೂಷಿಸಿದರು.
ನೂತನ ಅಧ್ಯೆ ರೇಖಾ ಉಮಾಶಂಕರ್​ ಮಾತನಾಡಿ, ಜಿಲ್ಲೆಯ ಏಕೈಕ ಮಹಿಳಾ ಸಹಕಾರ ಬ್ಯಾಂಕ್​ ಇದಾಗಿದ್ದು, ಎಲ್ಲರ ಸಹಕಾರದಿಂದ ಬ್ಯಾಂಕ್​ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಎಲ್ಲ ನಿರ್ದೇಶಕರ ಸಲಹೆ ಮತ್ತು ಸಹಕಾರದಿಂದ ಬ್ಯಾಂಕ್​ಅನ್ನು ಮನ್ನಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೋಯ್ಯಲಾಗುವುದು ಎಂದು ಭರವಸೆ ನಿಡಿದರು.
ಜೆಡಿಎಸ್​ ಜಿಲ್ಲಾಧ್ಯ ಎಚ್​.ಸಿ ಜಯಮುತ್ತು, ತಾಲೂಕು ಅಧ್ಯ ಗೋವಿಂದಹಳ್ಳಿ ನಾಗರಾಜು, ಪಿಎಲ್​ಡಿ ಬ್ಯಾಂಕ್​ ಅಧ್ಯ ಡಿ.ಎಂ.ಕುಮಾರ್​, ಮುಖಂಡರಾದ ನಿಡಗೋಡಿ ಬಾಬು, ಮಾಕಳಿ ಶಿವಣ್ಣ, ಯಾಲಕ್ಕಿಗೌಡ, ಎಂ.ಎನ್​.ರಾಜಶೇಖರ್​, ಮಳೂರುಪಟ್ಟಣ ರವಿ, ಬಿಳಿಯಪ್ಪ, ಮಲ್ಲಂಗೆರೆ ನಾಗರಾಜು, ಸುಬ್ಬೇಗೌಡ, ಯೋಗಲಿಂಗು, ಗಂಗೇದೊಡ್ಡಿ ನಿಂಗೇಗೌಡ, ಬೋರೆಗೌಡ, ಸುಮುಖ್​, ಲೋಕೇಶ್​, ಕೃಷ್ಣೆಗೌಡ, ಪವನ್​, ಮಧುಕರ್​, ಆತ್ಮಾನಂದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net