ನಿಯಮಿತ ಕಣ್ಣಿನ ತಪಾಸಣೆ ಅಗತ್ಯ

ಸೋಮವಾರ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಅಧುನಿಕ ಶಸ್ತ್ರಚಿಕಿತ್ಸೆ ಮೂಲಕ ಐಒಎಲ್ ಅಳವಡಿಕೆ ಶಿಬಿರದಲ್ಲಿ ಭಾಗವಹಿಸಿರುವುದು.
ಸೋಮವಾರ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಅಧುನಿಕ ಶಸ್ತ್ರಚಿಕಿತ್ಸೆ ಮೂಲಕ ಐಒಎಲ್ ಅಳವಡಿಕೆ ಶಿಬಿರದಲ್ಲಿ ಭಾಗವಹಿಸಿರುವುದು.
Published on

ಹಲಗೂರು:

ಮನುಷ್ಯನ ಕಣ್ಣುಗಳು ನಮ್ಮ ಜೀವನದ ಅಮೂಲ್ಯ ಸಂಪತ್ತು. ಆದ್ದರಿಂದ ಪ್ರತಿಯೊಬ್ಬರೂ ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ. ಸಂಘ ಸಂಸ್ಥೆಗಳು ಆಯೋಜಿಸುವ ಇಂತಹ ಉಚಿತ ಶಿಬಿರಗಳನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಲಗೂರು ಪಿಎಸ್‌ಐ ಲೋಕೇಶ್ ಸಲಹೆ ನೀಡಿದರು.

ಹಲಗೂರಿನ ಚನ್ನಪಟ್ಟಣ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಹಲಗೂರು, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಮಂಡ್ಯ ಮತ್ತು ಬಿ.ಡಬ್ಲುೃ. ಲಯನ್ಸ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಮತ್ತು ಅಧುನಿಕ ಶಸ್ತ್ರಚಿಕಿತ್ಸೆ ಮೂಲಕ ಐಒಎಲ್ ಅಳವಡಿಕೆ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಣ್ಣಿನ ತಪಾಸಣೆಯಿಂದ ಆರಂಭಿಕ ಹಂತದಲ್ಲೇ ದೃಷ್ಟಿದೋಷ, ಕಣ್ಣಿನ ಪೊರೆ, ಗ್ಲೂಕೋಮಾ ಸೇರಿದಂತೆ ಹಲವು ಕಣ್ಣಿನ ಸಮಸ್ಯೆಗಳನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಬಹುದು. ವಿಶೇಷವಾಗಿ ಹಿರಿಯ ನಾಗರಿಕರು, ಮಧುಮೇಹಿಗಳು, ಶಾಲಾ ಮಕ್ಕಳು ಹಾಗೂ ದೃಷ್ಟಿ ಸಮಸ್ಯೆ ಇರುವವರು ನಿಯಮಿತವಾಗಿ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ಇಂತಹ ಜನೋಪಯೋಗಿ ಸಾರ್ವಜನಿಕರ ಸೇವೆ ಮಾಡುವ ಕ್ಲಬ್ ಕಾರ್ಯ ಶ್ಲಾಘನೀಯ. ಮತ್ತಷ್ಟು ಸೇವಾ ಕಾರ್ಯ ಮಾಡುವ ಅವಕಾಶ ಲಯನ್ಸ್ ಕ್ಲಬ್‌ಗೆ ಸಿಗಲಿ ಎಂದು ಹಾರೈಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಗುಣೇಶ್ ಮಾತನಾಡಿ, ಮನುಷ್ಯನಿಗೆ ಕಣ್ಣು ಅತ್ಯಂತ ಪ್ರಮುಖ ಅಂಗವಾಗಿದೆ. ಕ್ಲಬ್ ವತಿಯಿಂದ ಎರಡು ತಿಂಗಳಿಗೊಮ್ಮೆ ಉಚಿತ ಕಣ್ಣಿನ ತಪಾಸಣಾ ಶಿಬಿರ ಮಾಡಲು ತೀರ್ಮಾನಿಸಿದ್ದು, ಗ್ರಾಮೀಣ ಪ್ರದೇಶದ ಬಡಜನರು, ಸಾರ್ವಜನಿಕರು ಬಳಕೆ ಮಾಡಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಗುಣೇಶ್, ಕಾರ್ಯದರ್ಶಿ ಡಾ.ನಾಗೇಶ್, ಖಜಾಂಚಿ ಎನ್.ಯೋಗೇಶ್, ಸಹ ಕಾರ್ಯದರ್ಶಿ ಡಿ.ವೈ.ನಾಗರಾಜು, ಪದಾಧಿಕಾರಿಗಳಾದ ಎ.ಎಸ್.ದೇವರಾಜು, ಎಚ್.ಆರ್.ಪದ್ಮನಾಭ್, ಎನ್.ಕೆ.ಕುಮಾರ್, ಡಾ.ಷಂಷುದ್ದೀನ್, ಡಿ.ಎಲ್.ಮಾದೇಗೌಡ, ಗುರುಸಿದ್ದು, ಡಾ.ಶಿವಾನಿ, ಸಂಘಟಕ ನಾಗೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net