ಕೊಟ್ಟೂರು: ಉದ್ಯೋಗ ಖಾತ್ರಿ ಕೆಲಸಕ್ಕೆ ಕೂಲಿ ಕಾರ್ಮಿಕರು ಹಾಜರಾಗುವಂತೆ ಕಾಳಾಪುರ ಗ್ರಾಪಂನಿಂದ ಸೋಮವಾರ ಜಾಗೃತಿ ಮೂಡಿಸಲಾಯಿತು. .ಎನ್.ಎಂ.ಆರ್. ನೋಂದಣಿ ಪ್ರಾರಂಭವಾಗಿದ್ದು, ಉದ್ಯೋಗ ಖಾತ್ರಿಯ ಹೊಸ ನಿಯಮಗಳಿಂದಾಗಿ ಕೆಲವರು ಕಾರ್ಯನಿರ್ವಹಿಸಲು ಆಸಕ್ತಿ ತೋರುತ್ತಿಲ್ಲ. .ಹೀಗಾಗಿ ಬಹುತೇಕ ಕೂಲಿ ಕಾರ್ಮಿಕರ ಜಾಬ್ ಕಾರ್ಡ್ ನೋಂದಣಿಯಾಗಿಲ್ಲ. ಕೂಲಿ ಕಾರ್ಮಿಕರು ನೇರವಾಗಿ ಪಿಡಿಒ, ಗ್ರಾಪಂ ಸಿಬ್ಬಂದಿ ಭೇಟಿ ಮಾಡಿ, ಜಾಬ್ ಕಾರ್ಡ್ ನೋಂದಣಿ ಮಾಡಿಸಿಕೊಳ್ಳಬೇಕು. .ಈ ಮೂಲಕ ಕೂಲಿ ಕೆಲಸಕ್ಕೆ ಹಾಜರಾಗಬೇಕೆಂದು ಡಂಗೂರ ಸಾರಲಾಯಿತು. ಗ್ರಾಪಂ ನಡೆಸಿದ ಜಾಗೃತಿಯಿಂದಾಗಿ 120ಕ್ಕೂ ಅಧಿಕ ಕೂಲಿ ಕಾರ್ಮಿಕರು ಎನ್.ಎಂ.ಆರ್. ನೋಂದಣಿ ಮಾಡಿಸಿಕೊಂಡರು.