ರೈತರು ಹೆಚ್ಚಿನದಾಗಿ ಹೈನುಗಾರಿಕೆಯಿಂದ ಲಾಭದಾಯಕ ಆದಾಯ ಗಳಿಸಬಹುದಾಗಿದೆ. ಕೆಲ ರೈತರು ಖಾಸಗಿ ಡೇರಿಗಳಿಗೆ ಹಾಲು ಪೂರೈಸುತ್ತಿದ್ದಾರೆ. ಇದರಿಂದ ತುಮಕೂರು ಹಾಲು ಒಕ್ಕೂಟದಿಂದ ಬರುವ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಡೇರಿಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ರೈತರಿಗೆ ತುಮುಲ್ ನಿಂದ ದೊರೆಯುವ ಸಾಲ ಸೌಲಭ್ಯಗಳನ್ನು ತಿಳಿಸಬೇಕಿದೆ. ಕರ್ನಾಟಕ ಸರ್ಕಾರ ರೈತರಿಗೆ ಮತ್ತು ಕುಟುಂಬದ ಆರೋಗ್ಯದ ದೃಷ್ಟಿಯಿಂದ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಮರು ಜಾರಿಗೆ ತಂದಿದ್ದು, ಎಸ್ಸಿ ಮತ್ತು ಎಸ್ಟಿ ರೈತರಿಗೆ ಉಚಿತವಾಗಿ ಹಾಗೂ ಸಾಮಾನ್ಯ ವರ್ಗದವರಿಗೆ 400 ರೂ.ಗಳಿಗೆ ನೋಂದಣಿಗೆ ಅವಕಾಶವಿದ್ದು, ಜ.30 ರೊಳಗೆ ತಮ್ಮ ಸಮೀಪದ ಡೇರಿ, ಸಹಕಾರ ಸಂಘಗಳಲ್ಲಿ ನೋಂದಾಯಿಸಿಕೊಳ್ಳುವಂತೆ ಕರೆ ನೀಡಿದರು. ತುಮಕೂರು ಹಾಲು ಒಕ್ಕೂಟದಿಂದ ರೈತ ಹಾಗೂ ಹಸು ಮರಣಕ್ಕೆ 16 ರೈತ ಪಲಾನುಭವಿಗಳಿಗೆ ಪರಿಹಾರದ ಚೆಕ್ ವಿತರಿಸಲಾಯಿತು.