ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನ ನ್ಯಾಯ ಒದಗಿಸಿದ್ದಾರೆ. ಡಾ.ಅಂಬೇಡ್ಕರ್ ಸಂವಿಧಾನದ ಮೇಲೆ ಕಾಂಗ್ರೆಸ್‌ಗೆ ನಂಬಿಕೆ ಇದ್ದರೆ ಎಲ್ಲರಿಗೂ ಸಮಾನ ನ್ಯಾಯ ಮತ್ತು ನೀತಿ ಕಲ್ಪಿಸಲಿ. ಅದನ್ನು ಬಿಟ್ಟು ದೇಶಭಕ್ತರ ಸಂಘಟನೆಗೆ ನಿಷೇಧ ಹೇರುವುದು, ನೋಂದಣಿ ಮಾಡಿಸುವುದು, ಪಥ ಸಂಚಲನಕ್ಕೆ ನಿರ್ಬಂಧ ಹೇರುವಂಥ ನೀತಿ ಕೈ ಬಿಡಲಿ. ನಿಮಗೆ ತಾಕತ್ ಇದ್ದರೆ ದೇಶದಲ್ಲಿದ್ದುಕೊಂಡೇ ದೇಶದ ಅನ್ನ, ನೀರು, ಗಾಳಿ ಸೇವಿಸಿ ದೇಶದ ಮೇಲೆಯೇ ಬಾಂಬ್ ಎಸೆಯುವ, ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡುವ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.