ಆಹಾರ ಸುರಕ್ಷತಾ ವಿಭಾಗದಲ್ಲಿ ನೇಮಕಾತಿ

Food safety department
Food safety department
Published on

ಪ್ರಮುಖ ಮುಖ್ಯಾಂಶಗಳು

  • * ಕೆಇಎ ಮೂಲಕ 84 ಹುದ್ದೆಗಳ ಭರ್ತಿಗೆ ಅನುಮತಿ
ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗದಲ್ಲಿ ಖಾಲಿ ಇರುವ ವಿವಿಧ ವೃಂದದ 84 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಹುದ್ದೆ ಭರ್ತಿ ಮಾಡಲು ಸೂಚಿಸಲಾಗಿದೆ 7 ಅಂಕಿತಾಧಿಕಾರಿ ಹುದ್ದೆ (ಉಳಿಕೆ ಮೂಲ ವೃಂದ-5, ಕಲ್ಯಾಣ ಕರ್ನಾಟಕ -2), 59 ಆಹಾರ ಸುರಕ್ಷತಾಧಿಕಾರಿ ಹುದ್ದೆಗಳು (ಉಳಿಕೆ ಮೂಲ ವೃಂದ-40, ಕ.ಕರ್ನಾಟಕ -19) ಮತ್ತು 18 ಹಿರಿಯ ಆಹಾರ ವಿಶ್ಲೇಷಕ ಹುದ್ದೆಗಳು (ಉಳಿಕೆ ಮೂಲ ವೃಂದ-15, ಕ.ಕರ್ನಾಟಕ -3) ಸೇರಿವೆ. ಈಗಾಗಲೇ ಕಲ್ಯಾಣ ಕರ್ನಾಟಕ ವೃಂದದ 22 ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ ಜು.8ರಂದು ಹೊರಡಿಸಲಾಗಿದ್ದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಆರೋಗ್ಯ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶದಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net