ಬಾಕಿ ಇರುವ 463 ಕೋಟಿ ರೂ. ಆಸ್ತಿ ತೆರಿಗೆ ವಸೂಲಿ ಮಾಡಿ

 ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ
ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ
Published on
ಬೆಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಾಕಿ ಇರುವ ಆಸ್ತಿ ತೆರಿಗೆ 463 ಕೋಟಿ ರೂ. ಅನ್ನು ಶೀಘ್ರವೇ ವಸೂಲಿ ಮಾಡಬೇಕೆಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ರಾಜ್ಯದ 13 ನಗರ ಪಾಲಿಕೆಗಳ ಪ್ರಗತಿ ಪರಿಶೀಲನೆಯನ್ನು ಯತೀಂದ್ರ ನಡೆಸಿದರು. ನಗರಗಳಲ್ಲಿ ಪೌರ ಕಾರ್ಮಿಕರ ಕೊರತೆ ಇದ್ದು, 2011ರ ಜನಗಣತಿ ಆಧಾರದ ಮೇಲೆ ಪೌರ ಕಾರ್ಮಿಕರ ನಿಯೋಜಿಸಲಾಗಿದೆ. ವಾಸ್ತವವಾಗಿ ಈಗಿರುವ ಅಂದಾಜು ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರ ನೇಮಕ ಮಾಡಿಕೊಳ್ಳಬೇಕೆಂದು ಸಚಿವರು ತಿಳಿಸಿದರು.
15ನೇ ಹಣಕಾಸು ಅನುದಾನದಲ್ಲಿ ಈ ವರೆಗೂ ಖರ್ಚಾಗದೆ ಉಳಿದಿರುವ ಅನುದಾನವನ್ನು ಖರ್ಚು ಮಾಡಿ ನಗರದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. 13 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 97 ಇಂದಿರಾ ಕ್ಯಾಂಟಿನ್ ಮಂಜೂರು ಆಗಿವೆ. ಅದರಲ್ಲಿ 93 ಚಾಲ್ತಿಯಲ್ಲಿ ಇದ್ದು, ಮಂಗಳೂರಿನಲ್ಲಿ 2, ಬೀದರ್‌ನಲ್ಲಿ 2 ಬಾಕಿ ಇವೆ. ಶೀಘ್ರ ಆರಂಭಿಸಬೇಕು. ಆಹಾರದ ಗುಣ ಮಟ್ಟದ ಬಗ್ಗೆ ಆಗಾಗ್ಗೆ ಪರಿಶೀಲಿಸಬೇಕೆಂದು ಸೂಚನೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net