ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು, ಹೊರ ರಾಜ್ಯದವರು ಯೋಜನೆಯ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದರೆ ರಾಜ್ಯಕ್ಕೆ ಆರ್ಥಿಕ ನಷ್ಟ ಉಂಟಾಗುತ್ತದೆ. ಇವರನ್ನು ಮರುಸಮೀೆ ಬಳಿಕ ಉಚಿತ ಸೌಲಭ್ಯದಿಂದ ಹೊರಗಿಡಲಾಗುತ್ತದೆ. ವಾರ್ಡನಲ್ಲಿ ದಲಿತ, ಬಡವರೇ ಹೆಚ್ಚಾಗಿದ್ದು, ಯಾರು ಮನೆಗಳಿಗೆ ಇಲ್ಲಿಯವರೆಗೆ ವಿದ್ಯುತ್ ಮೀಟರ್ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲವೋ ಅವರು ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ, ಮೀಟರ್ ಅಳವಡಿಸಿಕೊಟ್ಟು, ಗೃಹಜ್ಯೋತಿ ಸೌಲಭ್ಯ ಒದಗಿಸಲಾಗುವುದು ಎಂದರು.