ನೈಜ ಮತದಾರರು ಆತಂಕಪಡುವ ಅಗತ್ಯವಿಲ್ಲ

ಮುಧೋಳದ ಕಾನಿಪ ಕಾರ್ಯಾಲಯದಲ್ಲಿ ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಅವರು ಇನ್ಯೂಮರೇಶನ್  ಫಾರ್ಮ್ ಗಳನ್ನು ಪತ್ರಕರ್ತರಿಗೆ ಸಾಂಕೇತಿಕವಾಗಿ ವಿತರಿಸಿದರು. ಶಿರಸ್ತೇದಾರ್ ಎಸ್.ಕೆ. ಮಟಗಾರ, ಕಾನಿಪ ಅಧ್ಯಕ್ಷ ಬಿ. ರತ್ನಾಕರಶೆಟ್ಟಿ ಮತ್ತಿತರರಿದ್ದಾರೆ.
ಮುಧೋಳದ ಕಾನಿಪ ಕಾರ್ಯಾಲಯದಲ್ಲಿ ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಅವರು ಇನ್ಯೂಮರೇಶನ್ ಫಾರ್ಮ್ ಗಳನ್ನು ಪತ್ರಕರ್ತರಿಗೆ ಸಾಂಕೇತಿಕವಾಗಿ ವಿತರಿಸಿದರು. ಶಿರಸ್ತೇದಾರ್ ಎಸ್.ಕೆ. ಮಟಗಾರ, ಕಾನಿಪ ಅಧ್ಯಕ್ಷ ಬಿ. ರತ್ನಾಕರಶೆಟ್ಟಿ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಸ್ಪಷ್ಟನೆ
  • ಪತ್ರಕರ್ತರಿಗೆ ಇನ್ಯೂಮರೇಶನ್ ಫಾರ್ಮ್ ವಿತರಣೆ
ಮುಧೋಳ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ತಾಲೂಕಿನಲ್ಲಿ ನಡೆಯುತ್ತಿರುವ ಮತದಾರರ ಪರಿಷ್ಕರಣೆ ಹಾಗೂ ಎಸ್‌ಐಆರ್ ಪ್ರಕ್ರಿಯೆಯ ಮ್ಯಾಪಿಂಗ್ ಕಾರ್ಯದಲ್ಲಿ ಮುಧೋಳ ತಾಲೂಕು ರಾಜ್ಯದಲ್ಲೇ 5ನೇ ಸ್ಥಾನದಲ್ಲಿದೆ ಎಂದು ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ ತಿಳಿಸಿದ್ದಾರೆ.
ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಎಲ್ಲವೂ ದಾಖಲಾತಿಗಳೊಂದಿಗೆ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಮತದಾರರು ಯಾವುದೇ ರೀತಿಯ ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಅವರು ಭರವಸೆ ನೀಡಿದರು.
ಶೇ.98.8ರಷ್ಟು ಮ್ಯಾಪಿಂಗ್ ಪೂರ್ಣ: ತಾಲೂಕಿನಲ್ಲಿ ಮತದಾರರ ವಿಶೇಷ ಪರಿಷ್ಕರಣೆ ಕಾರ್ಯ ಭರದಿಂದ ಸಾಗುತ್ತಿದೆ. ಒಟ್ಟು 2,14,364 ಮತದಾರರ ಪೈಕಿ ಈಗಾಗಲೇ 2,10,623 ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದ್ದು, ಶೇ.98.8ರಷ್ಟು ಪ್ರಗತಿ ಸಾಧಿಸಲಾಗಿದೆ. ತಾಂತ್ರಿಕ ಹಾಗೂ ಇತರೆ ಕಾರಣಗಳಿಂದ ಬಾಕಿ ಉಳಿದಿರುವ 3,741 ಮತದಾರರ ಮ್ಯಾಪಿಂಗ್ ಕಾರ್ಯವನ್ನು ಪರಿಶೀಲಿಸಲಾಗುತ್ತಿದೆ ಎಂದು ತಹಸೀಲ್ದಾರ್ ವಿವರಿಸಿದರು.
ಮನೆ ಮನೆಗೆ ಬಿಎಲ್‌ಒ ಭೇಟಿ: ಭಾನುವಾರದವರೆಗೆ ಶೇ. 48.15ರಷ್ಟು (1,03,012) ಎಸ್‌ಐಆರ್ ಫಾರ್ಮ್ ಗಳನ್ನು ವಿತರಿಸಲಾಗಿದ್ದು, 15,161ಫಾರ್ಮ್ ಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಇನ್ನುಳಿದ ಶೇ.52ರಷ್ಟು ಮತದಾರರಿಗೆ ಮುಂದಿನ ಎರಡೂ ಮೂರು ದಿನಗಳಲ್ಲಿ ಫಾರ್ಮ್ ವಿತರಣೆ ಮುಗಿಸಲಾಗುವುದು.
ಎಲ್ಲ ಬಿಎಲ್‌ಒಗಳು ಕಡ್ಡಾಯವಾಗಿ ಮನೆ ಮನೆಗೆ ಭೇಟಿ ನೀಡಿ ಸ್ಥಳಾಂತರ ಹಾಗೂ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ತಾಲೂಕಿನಲ್ಲಿ 212 ಬಿಎಲ್‌ಒಗಳು, ಗ್ರಾಪಂ ಆಡಳಿತಾಧಿಕಾರಿಗಳು, ಪಿಡಿಒಗಳು, ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಹಕಾರದೊಂದಿಗೆ ಈ ಕಾರ್ಯ ನಡೆಯುತ್ತಿದೆ. ನಗರ ಪ್ರದೇಶದ 51 ಮತಗಟ್ಟಿಗಳ ಉಸ್ತುವಾರಿಯನ್ನು ಪೌರಾಯುಕ್ತರು ಮತ್ತು ನಗರಸಭೆ ಸಿಬ್ಬಂದಿ ನೋಡಿಕೊಳ್ಳುತ್ತಿದ್ದಾರೆ ಎಂದರು.
ಕಾನಿಪ ಸಂಘದ ತಾಲೂಕು ಅಧ್ಯಕ್ಷ ಬಿ. ರತ್ನಾಕರಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿರಸ್ತೇದಾರ್ ಎಸ್.ಕೆ. ಮಠಗಾರ, ಕಂದಾಯ ನಿರೀಕ್ಷಕ ಪ್ರಕಾಶ ಕುಂದರಗಿ, ಗ್ರಾಮ ಆಡಳಿತ ಅಧಿಕಾರಿ ಬಸವರಾಜ ಕಂದಗಲ್, ಮಹಾದೇವ ಮಿಸಿ, ಜ್ಯೋತಿಭಾ ಬೋರ, ಶಶಿ ವಾಲಿಕಾರ, ಸತೀಶ ಕಳ್ಳಿಮನಿ ಹಾಗೂ ಕಾನಿಪ ಪದಾಧಿಕಾರಿಗಳು ಉಪಸ್ಥಿತರಿದ್ದರು.
"

ಸಹಾಯವಾಣಿ ಕೇಂದ್ರಗಳ ಸ್ಥಾಪನೆ

ಸಾರ್ವಜನಿಕರ ಅನುಕೂಲಕ್ಕಾಗಿ ನಗರಸಭೆ ಕಚೇರಿ, ತಾಲೂಕು ಆಡಳಿತ ಸೌಧ, ತಾಪಂ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕೃಷಿ ಇಲಾಖೆ ಯ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಗ್ರಾಮೀಣ ಭಾಗದ ಜನರು ಆಯಾ ಗ್ರಾಪಂ ಕಚೇರಿಗಳಲ್ಲೇ ಮಾಹಿತಿ ಪಡೆಯಬಹುದು ಎಂದರು.



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net