ದಿನಪತ್ರಿಕೆ ಓದುವುದರಿಂದ ಹೃದಯವಂತಿಕೆ

ಬಳ್ಳಾರಿ ವಿಎಸ್‌ಕೆ ವಿವಿಯಲ್ಲಿ ಆಯೋಜಿಸಿದ್ದ ‘ನಡೆದಷ್ಟು ದಾರಿ ದೂರ’ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಸಂಪಾದಕ ರವೀಂದ್ರ ಭಟ್ ಉದ್ಘಾಟಿಸಿದರು. ಕುಲಸಚಿವ ಪ್ರೊ.ಲೋಕೇಶ, ಸಿಎ ಪನ್ನರಾಜ್, ಪ್ರೊ.ಶಾಂತಾ ನಾಯ್ಕ್, ಪ್ರಾಧ್ಯಾಪಕ ಡಾ.ಬೇಲೂರು ರಘುನಂದನ್, ಪ್ರೊ.ರಾಬರ್ಟ್ ಜೋಸ್, ಹಣಕಾಸು ಅಧಿಕಾರಿ ಕೆ.ಜಿ.ಸ್ಪೂರ್ತಿ ಇತರರಿದ್ದರು.

Published on
ಬಳ್ಳಾರಿ: ವಿದ್ಯಾರ್ಥಿಗಳು ಪುಸ್ತಕ ಹಾಗೂ ದಿನ ಪತ್ರಿಕೆಗಳನ್ನು ಓದುವುದರಿಂದ "ಹೃದಯವಂತಿಕೆ ಹೆಚ್ಚುತ್ತದೆೆ ಎಂದು ಸಂಪಾದಕ ರವೀಂದ್ರ ಭಟ್ ಹೇಳಿದರು.
ನಗರದ ವಿಎಸ್‌ಕೆ ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಇಂಗ್ಲೀಷ್, ಕನ್ನಡ ಹಾಗೂ ಪ್ರದರ್ಶನ ಕಲೆ ಮತ್ತು ನಾಟಕ ವಿಭಾಗದಿಂದ ಆಯೋಜಿಸಿದ್ದ ಪ್ರೊ.ಶಿರಗಾನಹಳ್ಳಿ ಶಾಂತನಾಯ್ಕ ರಚಿಸಿದ ‘ನಡೆದಷ್ಟು ದಾರಿ ದೂರ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳು ಮೊಬೈಲ್, ಟಿವಿ ಹಾವಳಿಯಿಂದ ಪುಸ್ತಕ, ಪತ್ರಿಕೆಗಳನ್ನು ಓದಲು ಹಿಂಜರಿಯುತ್ತಾರೆ. ಪುಸ್ತಕ, ಪತ್ರಿಕೆಯನ್ನು ನೆಪಮಾತ್ರಕ್ಕೆ ಕಣ್ಣಾಡಿಸುವ ಮನಸ್ಥಿತಿ ಹೊಂದಿದ್ದಾರೆ. 
ಸಮಾಜದಲ್ಲಿ ಇಂದು ಹೋರಾಟಗಳು ಸಾಮಾಜಿಕ ಮಾಧ್ಯಮಕ್ಕೆ ಜಾಗೃತವಾಗಿವೆ. ಆದರೆ, ಗ್ರಾಮೀಣ ಪ್ರದೇಶದ ಆಚಾರ, ವಿಚಾರಗಳು ಉಳಿದಿವೆ. ಸಮಾಜದಲ್ಲಿ ನಮಗಿಂತ ಕೆಳಸ್ಥಿತಿಯಲ್ಲಿ ಬದುಕುವವರ ಏಳಿಗೆಗೆ ನಮ್ಮ ಪಾತ್ರ ಎಷ್ಟಿದೆ ಎಂಬುದು ಮುಖ್ಯವಾಗುತ್ತದೆ ಎಂದರು.
ಸಿಎ ಪನ್ನರಾಜ ಮಾತನಾಡಿ, ಕಲ್ಯಾಣ ಕರ್ನಾಟಕದ ಹಿಂದುಳಿದ ಪ್ರದೇಶಗಳಲ್ಲಿ ಶಿಕ್ಷಣ, ಆರ್ಥಿಕ ಅಸಮಾನತೆ ಇದೆ. ನಿಮ್ಮ ಹಕ್ಕುಗಳಿಗೆ ಧ್ವನಿ ಎತ್ತದೆ ಹೋದರೆ ಪ್ರಜಾಪ್ರಭುತ್ವ ಜೀವ ಕಳೆದುಕೊಳ್ಳುತ್ತದೆ.
ಕೆಕೆಆರ್‌ಡಿಬಿ ಹಾಗೂ ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಸ್ಥಾನಮಾನ ನೀಡುವ 371 ಜೆ ಕಲಂನಲ್ಲಿ ಬಳ್ಳಾರಿ ಹೆಸರನ್ನು ಕೈ ಬಿಟ್ಟಿರುವುದಕ್ಕೆ ಹೋರಾಡಿದ್ದನ್ನು ಸ್ಮರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net