ರಾಯಣ್ಣನ ದೇಶಪ್ರೇಮ, ಶೌರ್ಯ ಎಲ್ಲರಿಗೂ ಸ್ಫೂರ್ತಿ

ಚಿಂಚೋಳಿಯಲ್ಲಿ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿಯಲ್ಲಿ ಶಾಸಕ ಡಾ. ಅವಿನಾಶ ಜಾಧವ್​ ಅವರನ್ನು ಸನ್ಮಾನಿಸಲಾಯಿತು. ಹಣಮಂತ ಹಿರೇಮನಿ, ಅಭಿಷೇಕ ಮಲಕನೂರ, ಶಾಮರಾವ ಕೊರವಿ, ರವಿಶಂಕರರೆಡ್ಡಿ ಮುತ್ತಂಗಿ, ಅಬ್ದುಲ್​ ಬಾಸೀದ್​, ಅಮರ ಲೋಡ್ಡನೂರ ಇತರರಿದ್ದರು.

Published on

ಚಿಂಚೋಳಿ: ಕಿತ್ತೂರು ಸಾಮ್ರಾಜ್ಯದ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಕೊನೆ ಉಸಿರಿರುವವರೆಗೆ ಹೋರಾಡಿದ ಸಂಗೊಳ್ಳಿ ರಾಯಣ್ಣಅವರ ತ್ಯಾಗ ಹಾಗೂ ಶೌರ್ಯ ಪ್ರತಿ ಭಾರತೀಯನಿಗೂ ಸ್ಫೂರ್ತಿ ಎಂದು ಶಾಸಕ ಡಾ.ಅವಿನಾಶ ಜಾಧವ್​ ಹೇಳಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ನಿಮಿತ್ತ ಪ್ರತಿಮೆಗೆ ಶನಿವಾರ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ರಾಯಣ್ಣನ ದೇಶಪ್ರೇಮ, ಸ್ವಾಭಿಮಾನ ಮತ್ತು ಶಿಸ್ತಿನ ಜೀವನ ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಗೊಂಡ ಕುರುಬ ಸಮಾಜ ತಾಲೂಕು ಅಧ್ಯಕ್ಷ ಹಣಮಂತ ಹಿರೇಮನಿ, ಪ್ರಮುಖರಾದ ಅಧ್ಯಕ್ಷ ಅಭಿಷೇಕ ಮಲಕನೂರ, ಶಾಮರಾವ ಕೊರವಿ, ರವಿಶಂಕರರೆಡ್ಡಿ ಮುತ್ತಂಗಿ, ಅಬ್ದುಲ್​ ಬಾಸೀದ್​, ಅಮರ ಲೋಡ್ಡನೂರ, ಕೆ.ಎಂ.ಬಾರಿ, ಶ್ರೀಮಂತ ಕಟ್ಟಿಮನಿ, ನಾಗಪ್ಪ ಯಲ್ಮಡಗಿ, ಸಂಜುಕುಮಾರ ರಾಣಾಪುರ, ಲೋಕೇಶ ಶೆಳ್ಳಗಿ, ಶ್ರೀನಿವಾಸ ಚಿಂಚೋಳಿಕರ್​, ಭೀಮಶೆಟ್ಟಿ ಮುರುಡಾ, ಸತೀಶರೆಡ್ಡಿ ತಾಜಲಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net