ದೇಶಕ್ಕೆ ಸಂಗೊಳ್ಳಿ ರಾಯಣ್ಣ ಕೂಡುಗೆ ಅಪಾರ

ಜೇವರ್ಗಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನ, ವಿವಿಧ ೇತ್ರದ ಹಾಲುಮತ ಮತ್ತು ಸಹೋದರ ಸಮುದಾಯದ 1001 ಸಾಧಕರಿಗೆ ಗೌರವ ಸಮರ್ಪಣಾ ಸಮಾರಂಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್​. ಈಶ್ವರಪ್ಪ ಮಾತನಾಡಿದರು.
ಜೇವರ್ಗಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನ, ವಿವಿಧ ೇತ್ರದ ಹಾಲುಮತ ಮತ್ತು ಸಹೋದರ ಸಮುದಾಯದ 1001 ಸಾಧಕರಿಗೆ ಗೌರವ ಸಮರ್ಪಣಾ ಸಮಾರಂಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್​. ಈಶ್ವರಪ್ಪ ಮಾತನಾಡಿದರು.
Published on
ಜೇವರ್ಗಿ: ಬ್ರಿಟಿಷರ ವಿರುದ್ಧ ಕೆಚ್ಚೆದೆಯ ಹೋರಾಟ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಕೊಡುಗೆ ಅವೀಸ್ಮರಣಿಯವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್​. ಈಶ್ವರಪ್ಪ ಹೇಳಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ವಾಭಿಮಾನಿಗಳ ಸೈನ್ಯ ವತಿಯಿಂದ ಧರ್ಮಸಿಂಗ್​ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ರಾಯಣ್ಣನವರ 195ನೇ ಹುತಾತ್ಮ ದಿನ, ವಿವಿಧ ೇತ್ರದ ಹಾಲುಮತ ಮತ್ತು ಸಹೋದರ ಸಮುದಾಯದ 1001 ಸಾಧಕರಿಗೆ ಗೌರವ ಸಮರ್ಪಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣನವರ ಆದರ್ಶ ಇಂದಿನ ಮತ್ತು ಮುಂದಿನ ಪೀಳಿಗೆಗೂ ಮಾರ್ಗದರ್ಶಿ, ಸ್ಫೂರ್ತಿಯಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಎನ್​.ಧರ್ಮಸಿಂಗ್​ ಈ ಭಾಗಕ್ಕೆ ತಮ್ಮದೇ ಆದ ವಿಶೇಷ ಕೂಡುಗೆ ನೀಡಿದ್ದಾರೆ. ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಅವರು ರಾಜಕಾರಣದಲ್ಲಿ ಅಜಾತಶತ್ರು ಎಂದೇ ಖ್ಯಾತನಾಮರಾಗಿದ್ದರು ಎಂದು ಬಣ್ಣಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್​ ಮಾತನಾಡಿ, ಜೇವರ್ಗಿ ಹಾಗೂ ಯಡ್ರಾಮಿ ತಾಲೂಕು ಸೇರಿ ಈ ಭಾಗದ ಸಮಗ್ರ ಅಭಿವೃದ್ದಿಗಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ. ಶೈಕ್ಷಣಿಕ ಹಾಗೂ ಸಾಮಾಜಿಕ ಪ್ರಗತಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು.
ಸೊನ್ನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ, ಜೇರಟಗಿ ಶ್ರೀ ಮಹಾಂತ ಮಹಾಸ್ವಾಮೀಜಿ, ಯಡ್ರಾಮಿ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ, ಯಲಗೋಡ ಶ್ರೀ ಗುರುಲಿಂಗ ಮಹಾಸ್ವಾಮೀಜಿ, ಅಣಜಗಿ ಶ್ರೀ ಸತ್ಯಾನಂದ ಮುತ್ಯಾ, ಕಲ್ಲಹಂಗರಗಿ ಶ್ರೀ ನಿಂಗಣ್ಣ ಪೂಜಾರಿ, ಶ್ರೀ ಹಯ್ಯಾಳಪ್ಪ ಪೂಜಾರಿ, ಶ್ರೀ ಗುಂಡಣ್ಣ ಪೂಜಾರಿ, ಬಸವಪಟ್ಟಣ ಶ್ರೀ ಮರೆಪ್ಪ ಮುತ್ಯಾ, ಮಾವನೂರ ಶ್ರೀ ಅಮೋಸಿದ್ಧ ಮುತ್ಯಾ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ವಾಭಿಮಾನಿಗಳ ಸೈನ್ಯ ಅಧ್ಯಕ್ಷ ತಮ್ಮಣ್ಣ ಬಾಗೇವಾಡಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್​ ನರಿಬೋಳ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್​ ರದ್ದೇವಾಡಗಿ, ಪ್ರಮುಖರಾದ ಶಾಂತಪ್ಪ ಕೂಡಲಗಿ, ಶೋಭಾ ಬಾಣಿ, ರೇವಣಸಿದ್ದಪ್ಪ ಸಂಕಾಲಿ, ರಾಜಶೇಖರ ಸೀರಿ, ಶೌಕತ್​ ಅಲಿ ಆಲೂರ, ಬೈಲಪ್ಪ ನೆಲೋಗಿ, ವಸಂತ ನರಿಬೋಳ, ಶಂಕರ ಕಟ್ಟಿಸಂಗಾವಿ, ಶರಣಗೌಡ ಸರಡಗಿ, ಸಂತೋಷ ಮಲ್ಲಾಬಾದ, ಈರಣ್ಣ ಬಿದ್ರಾಣಿ, ಸಿದ್ದು ಮಾವನೂರ, ಮಾಳಪ್ಪ ಮತ್ತಕೋಡ, ಬಸವರಾಜ ಬಾಗೇವಾಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net