ಅಹಮದಾಬಾದ್: ರೆಡ್‌ಬಾಲ್ ಟೂರ್ನಿಯ ಅದ್ಭುತ ´ಫಾರ್ಮ್ ಮುಂದುವರಿಸಿರುವ ಎಡಗೈ ಬ್ಯಾಟರ್ ರವಿಚಂದ್ರನ್ ಸ್ಮರಣ್ (67 ರನ್, 41 ಎಸೆತ, 7 ಬೌಂಡರಿ, 2 ಸಿಕ್ಸರ್) ಅರ್ಧಶತಕ ಹಾಗೂ ಅಂತಿಮ ಓವರ್‌ನಲ್ಲಿ ಪ್ರವೀಣ್ ದುಬೆ (38 *ರನ್, 24 ಎಸೆತ, 4 ಬೌಂಡರಿ, 1 ಸಿಕ್ಸರ್) ಸಾಹಸದ ನೆರವಿನಿಂದ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ ಉತ್ತರಾಖಂಡ ಎದುರು 5 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿ, ಶುಭಾರಂಭ ಕಂಡಿದೆ.