ತಿಂಡ್ಲುನಲ್ಲಿ ರಾಶಿಪೂಜೆ ಸಂಭ್ರಮ Ragi

ಆನೇಕಲ್ Ragi ತಾಲೂಕಿನ ಮುಗಳೂರು ಗ್ರಾಪಂ ವ್ಯಾಪ್ತಿಯ ತಿಂಡ್ಲು ಗ್ರಾಮದ ನಿವಾಸಿ ಟಿ.ವಿ. ಶ್ರೀನಿವಾಸಯ್ಯ ಕುಟುಂಬದ ಸದಸ್ಯರು ಬೆಳೆದ ರಾಗಿಯ ರಾಶಿಪೂಜೆ ನೆರವೇರಿಸಲಾಯಿತು.
ಆನೇಕಲ್ Ragi ತಾಲೂಕಿನ ಮುಗಳೂರು ಗ್ರಾಪಂ ವ್ಯಾಪ್ತಿಯ ತಿಂಡ್ಲು ಗ್ರಾಮದ ನಿವಾಸಿ ಟಿ.ವಿ. ಶ್ರೀನಿವಾಸಯ್ಯ ಕುಟುಂಬದ ಸದಸ್ಯರು ಬೆಳೆದ ರಾಗಿಯ ರಾಶಿಪೂಜೆ ನೆರವೇರಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ರೈತ ಟಿ.ವಿ. ಶ್ರೀನಿವಾಸಯ್ಯಕುಟುಂಬದವರು ಬೆಳೆದ 350 ಕ್ವಿಂಟಾಲ್ ರಾಗಿ
ಸರ್ಜಾಪುರ: ಒಂದು ಕಾಲದಲ್ಲಿ ಆನೇಕಲ್ ಎಂದರೆ ರಾಗಿನಾಡು (ರಾಗಿಯ ಕಣಜ) ಎಂದೇ ಪ್ರಸಿದ್ಧಿಯಾಗಿತ್ತು. ಆಗ ರಾಗಿಯನ್ನು ಅತಿ ಹೆಚ್ಚಾಗಿ ಬೆಳೆಯುತ್ತಿದ್ದ ತಾಲೂಕು ಇದಾಗಿತ್ತು. ಆದರೆ, ಇತ್ತೀಚೆಗೆ ನಗರೀಕರಣವಾಗುತ್ತಿದ್ದಂತೆ ಕೃಷಿ ಭೂಮಿಯೆಲ್ಲ ಬಹುಮಹಡಿ ಕಟ್ಟಡಗಳಿಂದಾಗಿ, ದೊಡ್ಡ ಬಡಾವಣೆಗಳಾಗಿ ವಾರ್ಪಾಡಾಗುತ್ತಿವೆ.
ಅತ್ತಿಬೆಲೆ, ಬೊಮ್ಮಸಂದ್ರ, ಜಿಗಣಿ, ವೀರಸಂದ್ರ ಹೆಸರಿನಲ್ಲಿ 4 ಕೈಗಾರಿಕಾ ಪ್ರದೇಶಗಳು ನಿರ್ವಾಣವಾಗಿವೆ. ಸೂರ್ಯಸಿಟಿ ಒಂದು, ಎರಡು, ಮೂರು ಮತ್ತು ನಾಲ್ಕು ಹಂತಗಳಾಗಿವೆ. ಒಟ್ಟಾರೆಯಾಗಿ ಕೃಷಿಗೆ ಯೋಗ್ಯವಾಗಿದ್ದ ಶೇ.60 ಭೂಮಿ ಈಗಾಗಲೇ ಅಭಿವೃದ್ಧಿ ಹೆಸರಿನಲ್ಲಿ ಬಳಕೆಯಾಗಿದೆ. ಉಳಿದಿರುವ ಭೂಮಿಯಲ್ಲಿ ರೈತರು ರಾಗಿ, ಭತ್ತ, ಹಣ್ಣು, ಹೂವು ಮತ್ತು ತರಕಾರಿ ಸೇರಿದಂತೆ ಆಹಾರ ಪದಾರ್ಥಗಳ ಬೆಳೆ Ragi ಬೆಳೆದು ಬದುಕುತ್ತಿದ್ದಾರೆ.
ಹೀಗಾಗಿ ಆನೇಕಲ್ ತಾಲೂಕಿನಲ್ಲಿ ರೈತರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಆದರೆ, ಇದೇ ತಾಲೂಕಿನ ಮುಗಳೂರು ಗ್ರಾಪಂ ವ್ಯಾಪ್ತಿಯ ತಿಂಡ್ಲು ಗ್ರಾಮದ ನಿವಾಸಿ ಟಿ.ವಿ. ಶ್ರೀನಿವಾಸಯ್ಯಕುಟುಂಬದವರು ಸುವಾರು 30 ಎಕರೆ ಜಮೀನಿನಲ್ಲಿ ಸುವಾರು 350 ಕ್ವಿಂಟಾಲ್‌ಗೂ ಹೆಚ್ಚು ರಾಗಿಬೆಳೆದು ತಾಲೂಕಿಗೆ ವಾದರಿ ರೈತ ಎನಿಸಿಕೊಂಡಿದ್ದಾರೆ.
ಇನ್ನು ಭಾನುವಾರ ತಿಂಡ್ಲು ಗ್ರಾಮಸ್ಥರೆಲ್ಲರೂ ಒಟ್ಟಾಗಿ ಸೇರಿ ರಾಗಿ ರಾಶಿಗೆ ವಿಶೇಷ ಪೂಜೆ ಸಲ್ಲಿಸಿದರು. ರಾಶಿ ಪೂಜೆಗೆ ರಂಗೋಲಿ ಹಾಕಲಾಗಿತ್ತು. ಬೆಳೆ ಬೆಳೆಯಲು ಬಳಸಿದ ಉಪಕರಣಗಳಿಗೂ ಪೂಜೆ ಸಲ್ಲಿಸಲಾಯಿತು.
ಹಾಗೆಯೇ ಎತ್ತು, ಟ್ರ್ಯಾಕ್ಟರ್‌ಗಳನ್ನು ಸಿಂಗರಿಸಲಾಗಿತ್ತು. ರಾಗಿ ರಾಶಿ ಪೂಜೆಗೆ ಬಂದ ಎಲ್ಲರಿಗೂ ಮುದ್ದೆ ಸಾರು ಊಟ ಬಡಿಸಲಾಯಿತು. ಜತೆಗೆ ಕೋಲಾಟ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶಾಸಕ ಬಿ.ಶಿವಣ್ಣ. ವಾಜಿ ಶಾಸಕ ಮಸಾಲೆ ಜಯರಾಮಣ್ಣ. ಮುಖಂಡರಾದ ತಿಂಡ್ಲು ಸ್ವಾತೇಗೌಡ, ನಾಗರಾಜ್, ಎನ್. ರಾಮಯ್ಯ ಕುಟುಂಬದವರು ಹಾಗೂ ಟಿ.ವಿ. ಶ್ರೀನಿವಾಸಯ್ಯ ಕುಟುಂಬದವರು ಮತ್ತು ರೈತರು ಹಾಗೂ ತಿಂಡ್ಲು ಗ್ರಾಮದ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net