RAPE: ಅಪ್ರಾಪ್ತೆ ಮೇಲೆ ಯುವಕರಿಂದ ಅತ್ಯಾಚಾರ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಲಕ್ಷ್ಮೇಶ್ವರ: ಟ್ಯೂಷನ್ ಹೋಗಿದ್ದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ತಾಲೂಕಿನ ಗ್ರಾಮವೊಂದರಲ್ಲಿ ಶನಿವಾರ ಜರುಗಿದ್ದು, ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಲೂಕಿನ ಗ್ರಾಮವೊಂದರ ಬಾಲಕಿ ಶನಿವಾರ ಟ್ಯೂಷನ್‌ಗೆ ಹೋಗಿದ್ದ ಸಂದರ್ಭದಲ್ಲಿ ಅದೇ ಗ್ರಾಮದ ಇಬ್ಬರು ಯುವಕರು ಗ್ರಾಮದ ಪೋಸ್ಟ್ ಆಫೀಸ್ ಹತ್ತಿರ ಬಾಲಕಿಗೆ ನಿಮ್ಮ ಅಣ್ಣ ಕರೆಯುತ್ತಿದ್ದಾನೆ ಬಾ ಎಂದು ವಾಹನದಲ್ಲಿ ಒತ್ತಾಯ ಪೂರ್ವಕವಾಗಿ ಹತ್ತಿಸಿಕೊಂಡು ಮಾರ್ಗ ಮಧ್ಯೆ ವಾಹನ ನಿಲ್ಲಿಸಿ ವಾಹನದಲ್ಲಿಯೇ ಒತ್ತಾಯ ಪೂರ್ವಕವಾಗಿ ಬಲಾತ್ಕಾರ ಮಾಡಿರುವುದಾಗಿ ಬಾಲಕಿಯ ತಾಯಿಯ ಅಕ್ಕ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಲ್ಲಾಭಕ್ತಿ ಕೊಪ್ಪದ, ಆಸೀಫ್ ನದಾಫ್ ಬಂಧಿತರು. ಅಲ್ಲಾಭಕ್ತಿ ಕೊಪ್ಪದ ಬಲಾತ್ಕಾರ ಮಾಡಿದ್ದು, ಆಸೀಫ್ ನಧಾಪ ಸಹಾಯಕನಾಗಿ ವಾಹನ ಚಲಾವಣೆ ಮಾಡುತ್ತಿದ್ದ. ಬಲಾತ್ಕಾರ ಮಾಡಿ ಯಾರಿಗೂ ಹೇಳದಂತೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಪಿಎಸ್‌ಐ ನಾಗರಾಜ ಗಡದ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದೂರಿನನ್ವಯ ಅಪಹರಣ, ಅತ್ಯಾಚಾರ, ಕ್ರಿಮಿನಲ್ ಬೆದರಿಕೆ, ಒತ್ತಾಯಪೂರ್ವಕ ಬಲಾತ್ಕಾರ ಇತ್ಯಾದಿ ಕೇಸ್‌ಗಳನ್ನು ದಾಖಲಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net