ಬಹುಮಾನ ವಿತರಣೆ : ಕೆ.ಜಿ.ಶ್ರೀನಿವಾಸಪುರ, ಕಣೇಗೌಡನಹಳ್ಳಿ, ಗಂಗಾಧರನಪಾಳ್ಯ, ವೀರನಂಜೀಪುರ, ಓಬನಾಯಕನಹಳ್ಳಿ, ಗಂಡರಗೊಳಿಪುರ, ಹುರುಳಿಹಳ್ಳಿ ಗ್ರಾಮದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಿದ್ದು, ಪ್ರತಿ ಗ್ರಾಮದಲ್ಲೂ ಪ್ರಥಮ, ದ್ವೀತಿಯ ಹಾಗೂ ತೃತೀಯ ಬಹುಮಾನ ನೀಡಲಾಯಿತು. ಭಾಗವಹಿಸಿದ್ದ 600ಕ್ಕೂ ಹೆಚ್ಚು ಮಂದಿ ಮಹಿಳೆಯರಿಗೆ ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಯಿತು.