ಸಿಂದಗಿ ನಗರದಲ್ಲಿ ಹಮ್ಮಿಕೊಂಡಿದ್ದ ಮಹಾರಾಣಾ ಪ್ರತಾಪಸಿಂಹ ಜಯಂತ್ಯುತ್ಸವಕ್ಕೆ ಶಾಸಕ ಅಶೋಕ ಮನಗೂಳಿ ಚಾಲನೆ ನೀಡಿದರು. ಶಿವಲಾಲ್ ಸಿಂಗ್ ರಜಪೂತ, ಹೀರಾಸಿಂಗ್ ರಜಪೂತ, ಸಾಯಬಣ್ಣ ಪುರದಾಳ, ಭೀಮು ರೋಡಗಿ, ಸಿದ್ದು ಮಲ್ಲೇದ ಇದ್ದರು.
ಸಿಂದಗಿ: ಮೊಘಲರ ಹುಟ್ಟಡಗಿಸಿದ ರಾಷ್ಟ್ರವೀರ ಮಹಾರಾಣಾ ಪ್ರತಾಪಸಿಂಹರ ಧೈರ್ಯ ಮತ್ತು ಸ್ಥೈರ್ಯಗಳನ್ನು ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ನಗರದ ಹಿರೋಡೇಶ್ವರ ದೇವಸ್ಥಾನದಲ್ಲಿ ಶನಿವಾರ ತಾಲೂಕು ರಜಪೂತ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ಮಹಾರಾಣಾ ಪ್ರತಾಪಸಿಂಹ ಅವರ 489ನೇ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಲವಾರು ವರ್ಷಗಳಿಂದ ರಜಪೂತ ಸಮಾಜದವರು, ಸಮುದಾಯ ಭವನದ ಬೇಡಿಕೆ ಇಡುತ್ತಲೇ ಇದ್ದಾರೆ. ಅವರ ಬೇಡಿಕೆಗೆ ಸ್ಪಂದಿಸುವ ದಿಸೆಯಲ್ಲಿ ರಜಪೂತ ಸಮಾಜದ ಸಮುದಾಯ ಭವನಕ್ಕೆ 25 ಲಕ್ಷ ರೂ. ಶೆಟಿಗೆಮ್ಮ ದೇವಸ್ಥಾನಕ್ಕೆ 5ಲಕ್ಷ ರೂ. ಅನುದಾನ ಒದಗಿಸುವುದರ ಜತೆಗೆ ನಗರದ ಒಂದು ವೃತ್ತಕ್ಕೆ ಮಹಾರಾಣಾ ಪ್ರತಾಪಸಿಂಹ ಅವರ ಹೆಸರು ನಾಮಕರಣ ಮಾಡುವುದಾಗಿ ಭರವಸೆ ನೀಡಿದರು.