ಬೃಹತ್ ಸಂಗ್ರಹ : ಗ್ರಾಹಕರ ಆಧುನಿಕ ಶೈಲಿ ಹಾಗೂ ಸಾಂಪ್ರದಾಯಿಕತೆಗೆ ಒತ್ತು ನೀಡಿ ಸಿದ್ಧಪಡಿಸಲಾಗಿರುವ ಪ್ರೀಮಿಯಂ ಹತ್ತಿ ಬಟ್ಟೆಗಳ ಬೃಹತ್ ಸಂಗ್ರಹ ಇಲ್ಲಿದೆ. ಮುಖ್ಯವಾಗಿ ಪುರುಷರಿಗಾಗಿ ಬಾರ್ಡರ್, ಸುಕ್ಕುರಹಿತ, ಸುಗಂಧಿತ ಪಂಚೆಗಳು, ಎಂಬ್ರಾಯ್ಡರಿ, ಮಯಿಲ್ ಕಣ್, ಪಂಚಕಚ್ಚಂ ಹಾಗೂ ಆಕರ್ಷಕ ರೇಷ್ಮೆ ಪಂಚೆಗಳು ಇಲ್ಲಿ ಲಭ್ಯವಿವೆ. ಇದಲ್ಲದೆ ಹತ್ತಿ ಶರ್ಟ್ಗಳು, ಲೆನಿನ್, ಡಿಸೈನರ್ ಹಾಗೂ ರೇಷ್ಮೆ ಶರ್ಟ್ಗಳು ಮಾತ್ರವಲ್ಲದೆ, ಪಂಚೆ&ಶರ್ಟ್ಗಳ ಮ್ಯಾಚಿಂಗ್ ಕಾಂಬಿನೇಷನ್ಗಳು ವಿವಿಧ ಬಣ್ಣಗಳಲ್ಲಿ ಲಭ್ಯವಿವೆ. ಪುರುಷರ ಉಡುಪುಗಳಷ್ಟೇ ಅಲ್ಲದೆ ಮಹಿಳೆಯರಿಗಾಗಿ ಹತ್ತಿ ಮತ್ತು ರೇಷ್ಮೆ ಸೀರೆಗಳು ಹಾಗೂ ದೈನಂದಿನ ಉಡುಪುಗಳು ಇಲ್ಲಿ ದೊರೆಯುತ್ತವೆ. ಒಳ ಉಡುಪುಗಳು, ಬೆಲ್ಟ್, ಕರವಸ್ತ್ರ, ಸಾಕ್ಸ್ ಮತ್ತು ಟವಲ್ ಸೇರಿ ಕುಟುಂಬಕ್ಕೆ ಬೇಕಾದ ವಸ್ತ್ರವಿನ್ಯಾಸಗಳು ಒಂದೇ ಸೂರಿನಡಿ ಲಭ್ಯವಿದ್ದು, ಸಾರ್ವಜನಿಕರು ಇದರ ಸೌಲಭ್ಯ ಪಡೆದುಕೊಳ್ಳಬಹುದು.