ಕಿಕ್ಕೇರಿ ಡೇರಿಗೆ ರಮೇಶ್ ಅಧ್ಯಕ್ಷ

ಕಿಕ್ಕೇರಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕೆ.ಟಿ.ರಮೇಶ್ ಅವಿರೋಧವಾಗಿ ಆಯ್ಕೆಯಾದರು. ಸುರೇಶ್, ನಾಗೇಶ್, ಪುಟ್ಟೇಗೌಡ, ನಿರ್ದೇಶಕರು ಇದ್ದರು.
ಕಿಕ್ಕೇರಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕೆ.ಟಿ.ರಮೇಶ್ ಅವಿರೋಧವಾಗಿ ಆಯ್ಕೆಯಾದರು. ಸುರೇಶ್, ನಾಗೇಶ್, ಪುಟ್ಟೇಗೌಡ, ನಿರ್ದೇಶಕರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಾಲು ಉತ್ಪಾದಕರ ಸಹಕಾರ ಸಂಘ
  • ಅಧ್ಯಕ್ಷರಾಗಿ ಕೆ.ಟಿ.ರಮೇಶ್ ಅವಿರೋಧವಾಗಿ ಆಯ್ಕೆ

ಕಿಕ್ಕೇರಿ: ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಟಿ.ರಮೇಶ್ ಅವಿರೋಧವಾಗಿ ಆಯ್ಕೆಯಾದರು.

ಮಂಜೇಗೌಡರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ರಮೇಶ್ ಹೊರತುಪಡಿಸಿ ಬೇರಾರೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ನಡೆಯಿತು.
ನೂತನ ಅಧ್ಯಕ್ಷ ಕೆ.ಟಿ.ರಮೇಶ್ ಮಾತನಾಡಿ, ಸಂಘ ಹಾಗೂ ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧ ಇದೆ. ನನ್ನ ತಂದೆ ತಿಮ್ಮೇಗೌಡ ಡೇರಿಗೆ ಮೂರು ಬಾರಿ ಅಧ್ಯಕ್ಷರಾಗಿದ್ದರು. ಡೇರಿಗೆ ಸ್ವಂತ ಕಟ್ಟಡ ನಿರ್ಮಾಣ ತಂದೆ ಅವಧಿಯಲ್ಲೇ ಆಗಿದೆ. ಡೇರಿ ಅಧ್ಯಕ್ಷನಾಗಿ ಎರಡನೇ ಬಾರಿ ಆಯ್ಕೆಯಾಗಿದ್ದು, ಕೆಪಿಸಿಸಿ ಸದಸ್ಯ ಸುರೇಶ್ ಹಾಗೂ ಸದಸ್ಯರ ಸಹಕಾರ ಮರೆಯಲಾರೆ. ನಾನು ಈ ಹಿಂದೆ ಅಧ್ಯಕ್ಷನಾಗಿದ್ದ ವೇಳೆ ಡೇರಿ ಬಿಎಂಸಿ ಘಟಕ ಸ್ಥಾಪನೆ ಮಾಡಲಾಗಿದ್ದು, ಮನ್‌ಮುಲ್‌ನಿಂದ ಬರುವ ಎಲ್ಲ ಸೌಲಭ್ಯಗಳನ್ನು ತ್ವರಿತವಾಗಿ ಹಾಲು ವಿತರಕರಿಗೆ ಸಿಗುವಂತೆ ಮಾಡಲು ಶ್ರಮಿಸಲಾಗುವುದು ಎಂದರು.
ಡೇರಿಯಲ್ಲಿ 368 ಷೇರುದಾರರಿದ್ದು, ನಿತ್ಯ ಸುಮಾರು 1650ಲೀ. ಹಾಲು ಸಂಗ್ರಹಣೆ ಆಗುತ್ತಿದೆ. ಗುಣಮಟ್ಟ, ರಿಯಾಯಿತಿ ದರದಲ್ಲಿ ಸಿಗುವ ಫೀಡ್ಸ್ ಅನ್ನು ರೈತರು ಖರೀದಿಸಬೇಕು ಎಂದು ಮನವಿ ಮಾಡಿದರು.
ಕೆಪಿಸಿಸಿ ಸದಸ್ಯ ಸುರೇಶ್ ಮಾತನಾಡಿ, ಸಂಘದ ಅಭಿವೃದ್ಧಿ, ಹಾಲು ಉತ್ಪಾದಕರ ಹಿತಾಸಕ್ತಿಯತ್ತ ಗಮನಹರಿಸುವುದು ಅವಶ್ಯಕ. ಹಾಲು ಉತ್ಪಾದಕರು ಸಂಘದ ಜೀವಾಳ. ವಿತರಕರಿಗೆ ಬೋನಸ್, ಗುಣಮಟ್ಟದ ಹಾಲಿಗೆ ಉತ್ತಮ ದರ ನೀಡಿ ಸ್ಥಿರ ಆದಾಯ ಲಭಿಸುವಂತೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ನೂತನ ಅಧ್ಯಕ್ಷರನ್ನು ಅಭಿಮಾನಿಗಳು ಅಭಿನಂದಿಸಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಂಘದ ಉಪಾಧ್ಯಕ್ಷ ವಾಸು, ನಿರ್ದೇಶಕರಾದ ಪುಟ್ಟಣ್ಣಯ್ಯ, ಮಂಜೇಗೌಡ, ಪರಮೇಶ್, ಮೋಹನ್, ಮೀನಾಕ್ಷಿ, ಹೇಮಾ, ಪೂರ್ಣಿಮಾ, ಪಲ್ಲವಿ, ನಾಗರಾಜ ಶೆಟ್ಟಿ, ಕಾರ್ಯದರ್ಶಿ ನಾಗೇಶ್, ಮುಖಂಡರಾದ ರಮೇಶ್, ಮಹದೇವು, ಪುಟ್ಟೇಗೌಡ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net