ಬೂದಿಕೋಟೆ: ಬಂಗಾರಪೇಟೆ ತಾಲೂಕು ಗುಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಹೊಸಹಳ್ಳಿ ಕ್ರಾಸ್ನಲ್ಲಿರುವ ಶ್ರೀ bhajan ಆಂಜನೇಯಸ್ವಾಮಿ ದೇವಸ್ಥಾನದಲ್ಲಿ 28ನೇ ವರ್ಷದ ರಾಮಕೋಟಿ ಭಜನೆ ನೇರವೇರಿತು.
ಭಕ್ತರು ನಿರಂತರವಾಗಿ ರಾಮನಾಮ ಜಪ ಮತ್ತು ಭಜನೆಗಳಲ್ಲಿ ಭಾಗವಹಿಸಿದ್ದು, ದೇವಸ್ಥಾನದಲ್ಲಿ ಭಕ್ತಿಮಯ ವಾತಾವರಣ ನಿಮಾರ್ಣವಾಗಿತ್ತು.
ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಶ್ರೀ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಯುವಕರು ಹಾಗೂ ಮಹಿಳೆಯರು ಭಜನಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ವಿಶೇಷವಾಗಿತ್ತು. ದೇವಾಸ್ಥನಲ್ಲಿ ಪ್ರಸಾದ ವಿನಿಯೋಗ ನಡೆಯಿತು.