ಸಮಾನತೆ ಎತ್ತಿಹಿಡಿದ ರಾಮಧ್ಯಾನ ಚರಿತೆ

ಯಾದಗಿರಿಯ ಡಾನ್ ಬಾಸ್ಕೋ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ  ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಮರಲಿಂಗಪ್ಪ ದಾಳಿ, -Áದರ್ ವಿವೇಕ್, -Áದರ್ ಥಾಮಸ್, ಮಹೇಶ ಪತ್ತಾರ ಇತರರಿದ್ದರು.
ಯಾದಗಿರಿಯ ಡಾನ್ ಬಾಸ್ಕೋ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಮರಲಿಂಗಪ್ಪ ದಾಳಿ, -Áದರ್ ವಿವೇಕ್, -Áದರ್ ಥಾಮಸ್, ಮಹೇಶ ಪತ್ತಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಧ್ಯಾಪಕ ಮರಲಿಂಗಪ್ಪ ದಾಳಿ ಅಭಿಮತ
  • ಯಾದಗಿರಿಯಲ್ಲಿ ವಿಶೇಷ ಉಪನ್ಯಾಸ ಕರ‍್ಯಕ್ರಮ
ಯಾದಗಿರಿ : ಕನಕದಾಸರ ರಾಮಧ್ಯಾನ ಚರಿತೆಯನ್ನು ಸಮಾನತೆಯ ಆಶಯ ಎತ್ತಿಹಿಡಿಯುವ ಕನ್ನಡದ ಮೊದಲ ವೈಚಾರಿಕ ಬಂಡಾಯದ ಕೃತಿಗಳಲ್ಲಿ ಇದು ಒಂದು ಎಂದು ಗುರುತಿಸಲಾಗಿದೆ ಎಂದು ರಾಜ್ಯಶಾಸö ಪ್ರಾಧ್ಯಾಪಕ ಮರಲಿಂಗಪ್ಪ ದಾಳಿ ಹೇಳಿದರು.
ಇಲ್ಲಿನ ಡಾನ್ ಬಾಸ್ಕೋ ಪದವಿ ಮಹಾವಿದ್ಯಾಲಯದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಽಕಾರ ಮತ್ತು ಜ್ಯೋತಿರ್ಗಮಯ ಸೇವಾ ಸಂಸ್ಥೆಯಿAದ ಶನಿವಾರ ಕನಕದಾಸರ ರಾಮಧ್ಯಾನ ಚರಿತೆ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕೃತಿಯ ಬಂಡಾಯದ ಸ್ವರೂಪ ಹೇಗೇ ಇರಲಿ, ಅದು ಕನ್ನಡ ವೈಚಾರಿಕ ಪರಂಪರೆಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ ಎಂದರು.
ಕನಕದಾಸರ ಕೃತಿಗಳಲ್ಲಿರುವ ವೈಚಾರಿಕತೆ, ಧಾರ್ಮಿಕ ವಿಡಂಬನೆಯ ಕಾರಣದಿಂದಲೇ ಅವರ ಕೃತಿಗಳಿಗೆ ಸಾರ್ವಕಾಲಿಕ ಮನ್ನಣೆ, ನಿರಂತರತೆ ಒದಗಿಬಂದಿದೆ. ಅದರಲ್ಲೂ ಮುಖ್ಯವಾಗಿ ಅವರ ಕುಲವಿರೋಽ ಆಶಯದ ಕೀರ್ತನೆಗಳು ಹಾಗೂ ರಾಮಧ್ಯಾನ ಚರಿತೆ ಕೃತಿಗಳು ಕನಕದಾಸರ ವೈಚಾರಿಕ ಪ್ರಣಾಲಿಕೆಯ ಪ್ರಮುಖ ಆಶಯಗಳಾಗಿವೆ ಎಂದು ಹೇಳಿದರು.
ಪ್ರಾಚಾರ್ಯ -Áದರ್ ವಿವೇಕ್ ಮಾತನಾಡಿ, ಕನಕದಾಸರ ಸಂದೇಶ ಇಂದಿನ ಸಮಾಜಕ್ಕೂ ಪ್ರಸ್ತುತವಾಗಿದ್ದು, ಅವರ ಆದರ್ಶ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಮಾರ್ಗದರ್ಶಿಯಾಗಿವೆ ಎಂದರು. ಜ್ಯೋತಿರ್ಗಮಯ ಸೇವಾ ಸಂಸ್ಥೆ ಅಧ್ಯಕ್ಷ ಮಹೇಶ್ ಪತ್ತಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಡಳಿತಾಽಕಾರಿ ಪಾಧರ್ ಮಿತುನ್, ಕನ್ನಡ ಉಪನ್ಯಾಸಕ ಜಯಪಾಳ್, ಉಪನ್ಯಾಸಕ ಮರಲಿಂಗಪ್ಪ ದಾಳಿ, ಯುವ ಸಾಹಿತಿ ಸಾಯಬಣ್ಣ ಪೂಜಾರಿ ಸೇರಿ ಇತರರಿದ್ದರು. ಶಿಕ್ಷಕ ಸಲೀಂ ಪಾಶಾ ನಿರೂಪಿಸಿ ವಂದಿಸಿದರು. ಯುವ ಕಲಾವಿದೆ ಭಾಗ್ಯ ದೇವದುರ್ಗಾ ಕನಕ ದಾಸರ ಜೀವನ ಚರಿತ್ರೆ ಕುರಿತು ಪ್ರಬಂಧ ಮಂಡಿಸಿದರು.
"

ಕನಕದಾಸರು ತಮ್ಮ ಕೃತಿಗಳ ಮೂಲಕ ಸಮಾನತೆ, ಮಾನವೀಯತೆ, ಭಕ್ತಿ ಮತ್ತು ನೈತಿಕ ಮೌಲ್ಯವನ್ನು ಜನಸಾಮಾನ್ಯರಿಗೆ ಸರಳವಾಗಿ ತಲುಪಿಸಿದ್ದಾರೆ. ರಾಮಧ್ಯಾನ ಚರಿತ್ರೆ ಕೇವಲ ಧಾರ್ಮಿಕ ಕೃತಿಯಲ್ಲ , ಅದು ಆದರ್ಶ ಜೀವನ, ಸತ್ಯ, ಧರ್ಮ ಮತ್ತು ಮೌಲ್ಯಗಳ ಸಂದೇಶವನ್ನು ಸಾರುವ ಶ್ರೇಷ್ಠ ಕೃತಿಯಾಗಿದೆ.| -Áದರ್ ಥಾಮಸ್ಪ್ರಾಚಾಯ, ಡಾನ್ ಬಾಸ್ಕೋ ಪದವಿ ಕಾಲೇಜು ಯಾದಗಿರಿ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net