ರಕ್ಷಾಬಂಧನ ಪ್ರೀತಿ, ವಿಶ್ವಾಸ ಹಾಗೂ ಸಹೋದರತ್ವದ ಪವಿತ್ರ ಬಂಧನ: ಎ.ಕೆ. ರಾಮೇಶ್ವರ

,
,
Published on
ಕಲಬುರಗಿ: ರಕ್ಷಾಬಂಧನವು ಸಹೋದರ–ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಹಾಗೂ ಸಹೋದರತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವ ಪವಿತ್ರ ಹಬ್ಬವಾಗಿದೆ ಎಂದು ಹಿರಿಯ ಸಾಹಿತಿ ಎ.ಕೆ. ರಾಮೇಶ್ವರ ಹೇಳಿದರು.
ನಗರದ ಎಂ.ಎನ್. ದೇಸಾಯಿ ಡಿಗ್ರಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಕ್ಷಾಬಂಧನವು ಕೇವಲ ರಾಖಿ ಕಟ್ಟುವ ಆಚರಣೆಯಲ್ಲ. ಪರಸ್ಪರ ಗೌರವ, ಪ್ರೀತಿ, ನಂಬಿಕೆ ಹಾಗೂ ರಕ್ಷಣೆಯ ಸಂಕೇತವಾಗಿದೆ. ಇಂತಹ ಸಾಂಸ್ಕೃತಿಕ ಆಚರಣೆಗಳು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದರು.
ಈ ಸಂದರ್ಭದಲ್ಲಿ ಕುಮಾರಿ ಮಾಲಾ ದನ್ನೂರ್, ಸಂಸ್ಥೆಯ ಅಧ್ಯಕ್ಷ ಸಂದೀಪ್ ದೇಸಾಯಿ, ಕಾರ್ಯದರ್ಶಿಗಳಾದ ಜಗನ್ನಾಥ್ ನಾಗೂರ,ಗುಲ್ಬರ್ಗ ವಿದ್ಯುತ್ ಪ್ರಸರಣಾ ನಿಗಮದ ಎ.ಇ. ವಿಜಯಲಕ್ಷ್ಮಿ, ಸಂದೀಪ್ ದೇಸಾಯಿ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗದವರು ಮಂಜುನಾಥ್ ಬನ್ನೂರ್, ನಾಗರಾಜ್ ಪಟ್ಟಣಕರ್, ಶಿವಶರಣಪ್ಪ ಪೂಜಾರಿ, ಗಣಪತಿ ಪೂಜಾರಿ, ದೇವಿಂದ್ರಪ್ಪ ಸಜ್ಜನ್, ರಾಧಿಕಾ ಗುತ್ತೇದಾರ್, ಗುರುಬಾಯಿ ವಾಡಿ, ಶ್ರೀದೇವಿ ಹಿರೇಮಠ, ಅಂಬಿಕಾ ಪಟ್ಟನೆ,ಸುಪ್ರಿಯ ಪಾಟೀಲ್, ಪೂಜಾ ಹೊನ್ನಾಳಿ, ಜ್ಯೋತಿ ಹಂಗರಗಿ,ಸುರೇಖಾ ಎಸ್, ಗೀತಾ ಇಂಗಿನ, ಶಿಲ್ಪ ಚೆಟ್ಟಿ, ನವಿತಾ. ಭೂಮಿಕ ದೊಡ್ಡಮನಿ, ಲಕ್ಷ್ಮಿ ಗೋಳಕಾರ್ , ಕಾಶಿಬಾಯಿ ವಾಗ್ಗೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net