ಜಾತಿ, ಧರ್ಮ ಮೀರಿ ಆಚರಿಸುವ ಹಬ್ಬವೆ ರಕ್ಷಾ ಬಂಧನ

ಮಾಗಡಿ ಪಟ್ಟಣದ ಶ್ರೀ ಸರಸ್ವತಿ ವಿದ್ಯಾಮಂದಿರ, ಮಂಗಳ ವಿದ್ಯಾಕೇಂದ್ರದ ಶಿಕ್ಷಕರು,ವಿದ್ಯಾರ್ಥಿಗಳು ಗಾಂಧಿನಗರದ ಬಳಿ ರಸ್ತೆ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರಿಗೆ ರಾಖಿ ಕಟ್ಟಿದರು. ಮಾದೇಶ್, ಮುನಿರಾಜು, ವೀಣಾ ಭಟ್, ಗೀತಾ, ದರ್ಶನ್, ಮೂರ್ತಿ ಇತರರು ಇದ್ದರು.
ಮಾಗಡಿ ಪಟ್ಟಣದ ಶ್ರೀ ಸರಸ್ವತಿ ವಿದ್ಯಾಮಂದಿರ, ಮಂಗಳ ವಿದ್ಯಾಕೇಂದ್ರದ ಶಿಕ್ಷಕರು,ವಿದ್ಯಾರ್ಥಿಗಳು ಗಾಂಧಿನಗರದ ಬಳಿ ರಸ್ತೆ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರಿಗೆ ರಾಖಿ ಕಟ್ಟಿದರು. ಮಾದೇಶ್, ಮುನಿರಾಜು, ವೀಣಾ ಭಟ್, ಗೀತಾ, ದರ್ಶನ್, ಮೂರ್ತಿ ಇತರರು ಇದ್ದರು.
Published on

ಭಾರತ ವೈವಿಧ್ಯಮಯ ಸಂಸ್ಕೃತಿಯಲ್ಲಿ ವಸುಧೈವ ಕುಟುಂಬಕಂ ಎಂಬ ತತ್ವದಡಿ ಇಡೀ ಜಗತ್ತನ್ನೇ ಒಂದಾಗಿ ಕಾಣುವ ಸಂಪ್ರದಾಯ ನಮ್ಮದು ಎಂದು ಶ್ರೀಸರಸ್ವತಿ ವಿದ್ಯಾಮಂದಿರ,ಮಂಗಳ ವಿದ್ಯಾಕೇಂದ್ರ ಶಾಲಾ ಅಧ್ಯಕ್ಷ ಬಲರಾಮಣ್ಣ ತಿಳಿಸಿದರು.

ಪಟ್ಟಣದ ಶ್ರೀ ಸರಸ್ವತಿ ವಿದ್ಯಾಮಂದಿರ ಹಾಗೂ ಮಂಗಳ ವಿದ್ಯಾಕೇಂದ್ರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು.ರಕ್ಷಾಬಂಧನ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಸಾಮಾಜಿಕ, ಪೌರಾಣಿಕ ಹಾಗೂ ಐತಿಹಾಸಿಕ ಪ್ರಾಮುಖ್ಯತೆ ಹೊಂದಿದೆ. ಜಾತಿ ಮತ್ತು ಧರ್ಮವನ್ನು ಮೀರಿ ಆಚರಿಸುವ ಹಬ್ಬವೆ ರಕ್ಷಾ ಬಂಧನ ಎಂದು ಹೇಳಿದರು.
ಕಾರ್ಯದರ್ಶಿ ಗೌರೀಶ್ ಮಾತನಾಡಿ, ಬದಲಾಗುತ್ತಿರುವ ಮಾನವೀಯ ಮೌಲ್ಯಗಳ ನಡುವೆ ರಕ್ಷಾಬಂಧನ ಜಾತಿ, ಮತ, ಭಾಷೆ ಹಾಗೂ ಧರ್ಮಗಳ ಗಡಿ ಮೀರಿ ದೇಶದಲ್ಲಿ ಸೌಹಾರ್ದತೆ ಹಾಗೂ ಒಗ್ಗಟ್ಟನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯೋಧರು, ದೇಶದ ಪ್ರಗತಿಗೆ ಶ್ರಮಿಸುವ ಶ್ರಮಿಕರು, ಸಮಾಜದ ಪ್ರತಿಯೊಬ್ಬರಿಗೂ ರಕ್ಷಣೆಯ ಭಾವನೆ ಮೂಡಿಸುವುದು ಹಬ್ಬದ ಮುಖ್ಯ ಉದ್ದೇಶ ಎಂದರು.
ಶಿಕ್ಷಕಿ ವೀಣಾ ಭಟ್ ಮಾತನಾಡಿ, ರಕ್ಷಾ ಬಂಧನ ಕೇವಲ ಸಹೋದರ, ಸಹೋದರಿಯರ ನಡುವಿನ ಹಬ್ಬವಲ್ಲ, ಅದು ಪರಸ್ಪರ ಗೌರವ, ಪ್ರೀತಿ,ರಕ್ಷಣೆಯ ಸಂಕೇತ ಎಂದರು.
ಮುಖ್ಯಶಿಕ್ಷಕ ಎಚ್.ಜೆ. ಮಾದೇಶ್, ಶಿಕ್ಷಕ ಮುನಿರಾಜು, ವೀಣಾ ಭಟ್, ಗೀತಾ, ದರ್ಶನ್, ಮೂರ್ತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net