ಏಕತೆಯ ಸಂಕೇತ ರಾಜ್ಯೋತ್ಸವ Kannada

ಆನೇಕಲ್​ ತಾಲೂಕಿನ ಸರ್ಜಾಪುರ ಗ್ರಾಪಂನಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಮತ್ತು ಆಯುಧ ಪೂಜಾ ಕಾರ್ಯಕ್ರಮದಲ್ಲಿ ಸರ್ಜಾಪುರ ಗ್ರಾಪಂ ಅಧ್ಯಕ್ಷೆ ವೀಣಾ ಮುನಿಯಲ್ಲಪ್ಪ, ಮಾಜಿ ಅಧ್ಯೆ ಮಮತಾ ರಮೇಶ್​, ಕಲಾವತಿ, ಮೂರ್ತಿ ಕುಮಾರ್​, ಮಾಜಿ ಉಪಾಧ್ಯಕ್ಷ Kannada ಎ.ಸತೀಶ್​ ಕುಮಾರ್​ ಇತರರು ಇದ್ದರು.

Published on
ಸರ್ಜಾಪುರ: ಕನ್ನಡ ರಾಜ್ಯೋತ್ಸವವು ನಾಡಿನ ಸಂಸತಿ, Kannada ಗೌರವ ಮತ್ತು ಏಕತೆಯ ಸಂಕೇತವಾಗಿದ್ದು, ಪ್ರತಿಯೊಬ್ಬರಿಗೂ ನಾವು ಕನ್ನಡಿಗರೆಂಬ ಹೆಮ್ಮೆ ಇರಬೇಕು ಎಂದು ಸರ್ಜಾಪುರ ಗ್ರಾಪಂ ಮಾಜಿ ಅಧ್ಯಕ್ಷ ಎಸ್​.ಎಂ.ಶ್ರೀನಿವಾಸ್​ ಹೇಳಿದರು.
ಆನೇಕಲ್​ ತಾಲೂಕಿನ ಸರ್ಜಾಪುರ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಮತ್ತು ಆಯುಧ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಪಂ ಮಟ್ಟದಲ್ಲಿಯೂ ಕನ್ನಡ ಭಾಷೆಯ ಬಳಕೆ ಹೆಚ್ಚಿಸಿದ್ದು, ಜನರಿಗೆ ಉತ್ತಮ ಸೇವೆ ನೀಡುವುದು ನಮ್ಮ ಕರ್ತವ್ಯ. ಸಿಬ್ಬಂದಿಯ ಶ್ರಮದಿಂದ ಸರ್ಜಾಪುರ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.
ಪಂಚಾಯಿತಿಯ ವಾಹನಗಳಿಗೆ ಆಯುಧ ಪೂಜೆ ಸಲ್ಲಿಸಿ ಸಿಬ್ಬಂದಿಗೆ ಸಮವಸ್ತ್ರ ಹಾಗೂ ಕಿಟ್​ ವಿತರಣೆ ಮಾಡಲಾಯಿತು.
ಸದಸ್ಯರಾದ ಅರವಿಂದ್​ ರೆಡ್ಡಿ, ಗಾಯಿತ್ರಿ ಪ್ರಸಾದ್​, ಅನಿಲ್​ ರೆಡ್ಡಿ, ಶಿವಕುಮಾರ್​, ವಿಜಯ್​ ಶೇಖರ್​, ಚಿನ್ನು ರಾಮಸ್ವಾಮಿ, ರೇಣುಕಮ್ಮ, ಲಲಿತಮ್ಮ, ಚಂದ್ರಕಲಾ, ಪಿಡಿಒ ಸುಬಾನ್​ ಖಾನ್​, ಕಾರ್ಯದರ್ಶಿ ನಂಜಾರೆಡ್ಡಿ ಸಿಬ್ಬಂದಿ ಮುನಿರಾಜು, ಅಬ್ಬಯ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net