ತೋಂಟದಾರ್ಯ ಜಾತ್ರೆಯಲ್ಲಿನ ಗಾಯಾಳುಗಳಿಗೆ 25 ಲಕ್ಷ ಪರಿಹಾರ ನೀಡಬೇಕು: ರಾಜು ಖಾನಪ್ಪನವರ

ಗದಗ ತೋಂಟದಾರ್ಯ ಮಠದಲ್ಲಿ ಜರುಗಿದ ಅವಡದಲ್ಲಿನ ಗಾಯಾಳುಗಳಿಗೆ ಪರಿಹಾರ ಮೊತ್ತ ನೀಡಬೇಕು ಎಂದು ಒತ್ತಾಯಿಸಿ ರಾಜು ಖಾನಪ್ಪನ್ನವರ ಸುದ್ದಿಗೋಷ್ಠಿ ನಡೆಸಿದರು. ರಾವೇಂದ್ರ ಪರಾಪೂರ, ಮಹೇಶ ರೋಖಡೆ, ಪಿ. ಎಸ್​. ಕಾಳೆ, ವಿಶ್ವನಾಥ ಶಿರಿ, ಗೀತಾ ನವಲಗುಂದ, ಸುಮನ್​ ನವಲಗುಂದ, ಕುಮಾರ ನಡಗೇರಿ, ಸತೀಶ್​ ಕುಂಬಾರ, ರಮೇಶ್​ ನವಲಗುಂದ, ಮಂಜು ನವಲಗುಂದ, ಶಂಕರ್​ ಗಬ್ಬೂರ, ವಿಜಯ ದಲಬಂಜನ್​, ಕಿರಣ ಕಬಾಡಿ ಸೇರಿದಂತೆ ಹಲವರು ಇದ್ದರು.
ಗದಗ ತೋಂಟದಾರ್ಯ ಮಠದಲ್ಲಿ ಜರುಗಿದ ಅವಡದಲ್ಲಿನ ಗಾಯಾಳುಗಳಿಗೆ ಪರಿಹಾರ ಮೊತ್ತ ನೀಡಬೇಕು ಎಂದು ಒತ್ತಾಯಿಸಿ ರಾಜು ಖಾನಪ್ಪನ್ನವರ ಸುದ್ದಿಗೋಷ್ಠಿ ನಡೆಸಿದರು. ರಾವೇಂದ್ರ ಪರಾಪೂರ, ಮಹೇಶ ರೋಖಡೆ, ಪಿ. ಎಸ್​. ಕಾಳೆ, ವಿಶ್ವನಾಥ ಶಿರಿ, ಗೀತಾ ನವಲಗುಂದ, ಸುಮನ್​ ನವಲಗುಂದ, ಕುಮಾರ ನಡಗೇರಿ, ಸತೀಶ್​ ಕುಂಬಾರ, ರಮೇಶ್​ ನವಲಗುಂದ, ಮಂಜು ನವಲಗುಂದ, ಶಂಕರ್​ ಗಬ್ಬೂರ, ವಿಜಯ ದಲಬಂಜನ್​, ಕಿರಣ ಕಬಾಡಿ ಸೇರಿದಂತೆ ಹಲವರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ತೋಂಟದಾರ್ಯ ಮಠದ ಜಾತ್ರೆಯಲ್ಲಿ ಡ್ಯಾನ್ಸಿಂಗ್​ ಜೋಕಾಲಿ ಮುರಿದ್ದು ಬಿದ್ದು 22 ಜನರಿಗೆ ಗಾಯಗಳಾಗಿತ್ತು. ಅವರೆಲ್ಲರಿಗೂ ಮೂರು ದಿನದೊಳಗೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡಸಿ ಮಾತನಾಡಿದ ಅವರು, ಮೆ. 2ರಂದು ರಾತ್ರಿ ತೋಂಟದಾರ್ಯ ಮಠದ ಜಾತ್ರೆಯಲ್ಲಿ ಮನರಂಜನೆಗಾಗಿ ಹಾಕಿದ್ದ ಡ್ಯಾನ್ಸಿಂಗ್​ ಜೋಕಾಲಿ ಬಿದ್ದು 22 ಜನರಿಗೆ ಗಂಭೀರ ಗಾಯವಾಗಿ ಅದರಲ್ಲಿ ಒರ್ವನ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೇ ಗಾಯಾಳುಗಳ ಜೊತೆ ಹಾಗೂ ವಿವಿಧ ಹಿಂದೂಪರ ಸಂಟನೆಗಳ ಜೊತೆಗೂಡಿ ಮಠದ ಗದ್ದುಗೆಯ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಒರ್ವ 18 ವರ್ಷದ ಹುಡುಗನ ಸೊಂಟ ಮುರಿದಿದೆ. 6 ವರ್ಷದ ಬಾಲಕನ ತಲೆಗೆ ಪೆಟ್ಟು ಬಿದ್ದಿದೆ. ಇವರೆಲ್ಲರನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆದರೆ, ಆಸ್ಪತ್ರೆಯಲ್ಲಿ ಸಂರ್ಪೂಣ ನಿರ್ಲಕ್ಷ ಮಾಡಲಾಗುತ್ತಿದೆ. ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಸ್ಕಾ$ನಿಂಗ ಮಾಡಲು 2500 ರೂ. ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದರು.
ಪೊಲೀಸ್​ ಇಲಾಖೆ ಸಿಬ್ಬಂದಿ ಟನೆ ನಡೆದ ದಿನದಂದೆ -8 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿದ್ದಾರೆ. ಎಸ್ಪಿ ಅವರು ಈ ಬಗ್ಗೆ ಗಮನ ಹರಿಸಬೇಕು. ಟನೆ ನಡೆದು ಮೂರ್ನಾಲ್ಕು ದಿನ ಕಳೆದರೂ ಅನಾಹುತಕ್ಕೆ ಕಾರಣವಾದ ವಸ್ತುಗಳನ್ನು ಇದುವರೆಗೂ ಸೀಜ್​ ಮಾಡಿಲ್ಲ. ನೇರವಾಗಿ ಎಸ್ಪಿ ಅವರು ಮಧ್ಯೆ ಪ್ರವೇಶಿಸಿ ಡ್ಯಾನ್ಸಿಂಗ್​ ಜೋಕಾಲಿ ಸೀಜ್​ ಮಾಡಬೇಕು. ಇಲ್ಲದಿದ್ದರೆ ಪೊಲೀಸ್​ ಇಲಾಖೆ ವಿರುದ್ದ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದರು.
ಸಾಂವಿಧಾನಿಕ ಹೋರಾಟಕ್ಕೆ ಬೆಲೆ ಇಲ್ಲದಂತಾಗಿದ್ದು, ಈ ಹಿನ್ನಲೆಯಲ್ಲಿ ತೋಂಟದಾರ್ಯ ಮಠದ ಜಾತ್ರೆಯ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಪೊಲೀಸ್​ ಇಲಾಖೆ, ಟೆಂಡರದಾರರು, ಜಿಲ್ಲಾಡಳಿತ, ನಗರಸಭೆಯನ್ನು ಪ್ರಕರಣದಲ್ಲಿ ಪಾಟಿರ್ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ರಾವೇಂದ್ರ ಪರಾಪೂರ, ಮಹೇಶ ರೋಖಡೆ, ಪಿ. ಎಸ್​. ಕಾಳೆ, ವಿಶ್ವನಾಥ ಶಿರಿ, ಗೀತಾ ನವಲಗುಂದ, ಸುಮನ್​ ನವಲಗುಂದ, ಕುಮಾರ ನಡಗೇರಿ, ಸತೀಶ್​ ಕುಂಬಾರ, ರಮೇಶ್​ ನವಲಗುಂದ, ಮಂಜು ನವಲಗುಂದ, ಶಂಕರ್​ ಗಬ್ಬೂರ, ವಿಜಯ ದಲಬಂಜನ್​, ಕಿರಣ ಕಬಾಡಿ ಸೇರಿದಂತೆ ಹಲವರು ಇದ್ದರು.
ಕೋಟ್​:
ಡ್ಯಾನ್ಸಿಂಗ್​ ಜೋಕಾಲಿ ಕಳಚಿ ಬಿದ್ದು 22 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಈ ಹಿನ್ನಲೆಯಲ್ಲಿ ಸಮಿತಿಯ ಅಧ್ಯಕ್ಷ ವಿನಾಯಕ ಮಾನ್ವಿ ಸೇರಿದಂತೆ ಆರೆಳು ಜನರ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲಾಗಿದೆ. ಆದರೆ, ಸಮಿತಿಯ ಎಲ್ಲ ಪದಾಧಿಕಾರಿಗಳ ವಿರುದ್ದ ಪ್ರಕರಣ ದಾಖಲಾಗಬೇಕು. ಅಮಾಯಕರಾದ ವಿನಾಯಕ ಮಾನ್ವಿ ಅವರನ್ನೇ ಹೊಣೆ ಮಾಡುವುದು ಸರಿಯಲ್ಲ.
ರಾಜು ಖಾನಪ್ಪನವರ, ಸಂಚಾಲಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net