ಜು.4ರಂದು ಮಡಿಕೇರಿ ಕೆಳಗಿನ ಗೌಡ ಸಮಾಜದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ. ಬೆಂಗಳೂರಿನ ರೋಟರಿ ಜಿಲ್ಲೆ 3191ರ ಮಾಜಿ ಸಹಾಯಕ ಪ್ರಾಂತಪಾಲ ಪ್ರಕಾಶ್ ಬೆಳವಾಡಿ ಪ್ರದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಹಾಯಕ ಪ್ರಾಂತಪಾಲ ಎಚ್.ಎಸ್.ವಸಂತ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಬಿ.ಕೆ.ಕಾರ್ಯಪ್ಪ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಪ್ರಕಟಣೆ ತಿಳಿಸಿದೆ.