ಕಾಡ್ಗಿಚ್ಚಿನ ಬಗ್ಗೆ ಜನಜಾಗೃತಿ ಮೂಡಿಸಿ forest

ಕಾಡ್ಗಿಚ್ಚಿನ ಬಗ್ಗೆ ಜನಜಾಗೃತಿ ಮೂಡಿಸಿ forest
ಕಾಡ್ಗಿಚ್ಚಿನ ಬಗ್ಗೆ ಜನಜಾಗೃತಿ ಮೂಡಿಸಿ forest
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂದಿಂದ ವಲಯ ಅರಣ್ಯಾಧಿಕಾರಿ ಶ್ರೀಲ್ಮಗೆ ಮನವಿ
  • ಅತಿಸ್ಮೂ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಾಡು ರಸಿ
ಬಂಗಾರಪೇಟೆ: ಬೇಸಿಗೆಯಲ್ಲಿ ಕಾಡ್ಗಿಚ್ಚಿನ ಬಗ್ಗೆ ಜನರಲ್ಲಿ ಕರಪತ್ರದ ಮೂಲಕ ಜಾಗೃತಿ ಮೂಡಿಸಿ ಅತಿಸ್ಮೂ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಾಡು ರಣೆ ಮಾಡಬೇಕು. ಪ್ರಾಣಿ, ಪಗಳಿಗೆ ನೀರು ಮತ್ತು ಆಹಾರ ಒದಗಿಸುವಂತೆ ಕ್ರಮಹಿಸಬೇಕು ಎಂದು ರೈತ ಸಂದಿಂದ ವಲಯ ಅರಣ್ಯಾಧಿಕಾರಿ ಶ್ರೀಲ್ಮ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.forest
ಕಾಡ್ಗಿಚ್ಚಿನಿಂದಾಗುವ ಹಾನಿಗಳು, ವನ್ಯಜಿವಿಗಳ ನಾಶ , ನೂರಾರು ಪ್ರಾಣಿ, ಪಗಳು ವಾಸಸ್ಥಾನ ಕಳೆದುಕೊಂಡು ಸಜೀವ ದಹನವಾಗುತ್ತವೆ. ಪರಿಸರ ಮಾಲಿನ್ಯ, ದಟ್ಟವಾದ ಹೊಗೆಯಿಂದ ತಾಪಮಾನ ಏರುತ್ತದೆ. ಸಸ್ಯ ಸಂಪತ್ತು, ಅಮೂಲ್ಯ ಔಷಧೀಯ ಗಿಡಮೂಲಿಕೆಗಳು ಮತ್ತು ಮರಗಳು ನಾಶವಾಗುತ್ತವೆ. ಜತೆಗೆ ನೀರಿನ ಬವಣೆ ಕಾಡುತ್ತದೆ. ಕಾಡು ನಾಶವಾದರೆ ಮಳೆ ಕಡಿಮೆಯಾಗಿ ಅಂತರ್ಜಲ ಕುಸಿಯುತ್ತದೆ. ಇದರ ಬಗ್ಗೆ ಅರಣ್ಯ ಇಲಾಖೆ ಜಾಗೃತಿ ವಹಿಸಬೇಕು ಎಂದು ರಾಜ್ಯ ರೈತ ಸಂದ ಉಪಾಧ್ಯ ಕೆ.ನಾರಾಯಣಗೌಡ ಒತ್ತಾಯಿಸಿದರು.
ತಾಲೂಕು ಅಧ್ಯ ಕದರಿನತ್ತ ಆಫ್ರೀಜಿರಾವ್​ ಮಾತನಾಡಿ, ವರ್ಷದಿಂದ ಕಷ್ಟಪಟ್ಟು ಬೆಳೆದಿರುವ ರಾಗಿ ಭತ್ತ, ಜೋಳ, ಟೊಮ್ಯಾಟೊ ಮತ್ತಿತರ ವಾಣಿಜ್ಯ ಬೆಳೆಗಳನ್ನು ಆನೆಗಳ ಹಾವಳಿಂದ ರೈತರು ಕಳೆದುಕೊಳ್ಳುತ್ತಾರೆ. ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬೆಲೆ ಸಮೀೆ ಮಾಡಲು ವಿಶೇಷ ತಂಡ ರಚನೆ ಮಾಡಿ ಎಕರೆಗೆ 5 ಲ ರೂ. ಪರಿಹಾರ ವಿತರಣೆ ಮಾಡಬೇಕು, ಹದಗೆಟ್ಟಿರುವ ಸೋಲಾರ್​ ವ್ಯವಸ್ಥೆ ಸರಿಪಡಿಸಬೇಕು ಎಂದು ತಿಳಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ವಲಯ ಅರಣ್ಯಾಧಿಕಾರಿ ಶ್ರೀಲ್ಮ, ಬೇಸಿಗೆಯಲ್ಲಿ ಕಾಡ್ಗಿಚ್ಚಿನ ಬಗ್ಗೆ ಕರಪತ್ರದ ಮುಖಾಂತರ ಜಾಗೃತಿ ಮೂಡಿಸಿ, ಪ್ರಾಣಿ, ಪಗಳಿಗೆ ಆಹಾರ ನೀಡುವ ಭರವಸೆ ನೀಡಿದರು.
ಜಿಲ್ಲಾಧ್ಯ ಈಕಂಬಳ್ಳಿ ಮಂಜುನಾಥ, ಗೋವಿಂದಪ್ಪ ಲ್ಮಣ್​, ಸಂತೋಷ್​, ಗಿರೀಶ್​, ತಿಮ್ಮಣ್ಣ, ಶೈಲಜಾ, ರತ್ನಮ್ಮ ನಯನಾ, ಪವಿತ್ರಾ, ವೆಂಕಟಮ್ಮ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net