ನಡುರಸ್ತೆಯಲ್ಲೇ ನಿಂತ ಮಳೆನೀರು! / VIJAYAPUR

ವಿಜಯಪುರ ಇಂದಿರಾನಗರ ರಸ್ತೆಯಲ್ಲಿ ಮಳೆ ನೀರು ನಿಂತಿರುವುದು.
ವಿಜಯಪುರ ಇಂದಿರಾನಗರ ರಸ್ತೆಯಲ್ಲಿ ಮಳೆ ನೀರು ನಿಂತಿರುವುದು.
Published on

ವಿಜಯಪುರ :

ಪಟ್ಟಣದ ಜಿ.ಎಂ.ಸರ್ಕಲ್​ನಿಂದ ಯಲುವಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಇಂದಿರಾನಗರ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮಳೆ ನೀರು ನಡುರಸ್ತೆಯಲ್ಲೇ ನಿಲ್ಲುವ ಕಾರಣ ಸುಗಮಸಂಚಾರಕ್ಕೆ ಜನ ನಿತ್ಯ ಪರದಾಡುತ್ತಿದ್ದಾರೆ.

ರಸ್ತೆಯ ಡಾಂಬರು ಕಿತ್ತು ಹೋಗಿ ಗುಂಡಿಗಳು ಬಿದ್ದಿವೆ. ಮಳೆ ನೀರು, ಗುಂಡಿಗಳಲ್ಲಿ ನಿಂತು ಇಡೀ ರಸ್ತೆ ಕೆರೆಯಂತಾಗಿದೆ. ಮಳೆ ಬಂದರೆ ಸಾಕು, ರಸ್ತೆ ಸಂಪೂರ್ಣ ಜಲಾವೃತಗೊಳ್ಳುತ್ತದೆ. ಗುಂಡಿಯಲ್ಲಿ ಎಷ್ಟು ಆಳ ನೀರಿದೆ ಎಂದು ಗೊತ್ತಾಗದೇ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗುತ್ತಿದ್ದು, ವಾಹನ ಸವಾರರು, ಪಾದಚಾರಿಗಳು, ವೃದ್ಧರು ಓಡಾಡಲು ಹರಸಾಹಸ ಪಡುತ್ತಿದ್ದಾರೆ.

ಈ ಭಾಗದಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳಿಯ ರಾವೇಂದ್ರ, ಪಿಳ್ಳಮ್ಮ ಹಾಗೂ ಇತರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮನೆಮುಂದೆಯೇ ನೀರು ನಿಂತು, ಕಸ, ಕೆಸರು ತುಂಬಿ ದುರ್ನಾತ ಬರುತ್ತಿದೆ. ಸೊಳ್ಳೆಗಳ ಕಾಟವೂ ಹೆಚ್ಚಾಗಿ ರೋಗ ಭೀತಿ ಶುರುವಾಗಿದೆ. ಕೂಡಲೇ ರಸ್ತೆಗೆ ಡಾಂಬರೀಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

"

ಇಂದಿರಾನಗರದ ರಸ್ತೆ ಮಾತ್ರವಲ್ಲದೆ ಚರಂಡಿ ವ್ಯವಸ್ಥೆ ಸಹ ವೈಜ್ಞಾನಿಕವಾಗಿ ಇಲ್ಲ. ಕೊಳಚೆ ನೀರು ನಿಂತಲ್ಲೇ ನಿಂತು, ದುರ್ನಾತ ಬಿಡುತ್ತಿದೆ. ಒಳಚರಂಡಿಗಳು ತುಂಬಿ ರಸ್ತೆ ಮೇಲೆ ಹರಿಯುತ್ತವೆ. ಇದರಿಂದ ರಸ್ತೆಗಳು ಬೇಗನೆ ಹಾಳಾಗುತ್ತಿವೆ. ಸಂಬಂಧಪಟ್ಟವರು ಗಮನಹರಿಸಬೇಕು.

— > ಎಸ್​.ರವಿಕಲಾ ಜಿಲ್ಲಾ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯೆ

ರಸ್ತೆಯನ್ನು ನಗರೋತ್ಥಾನ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಪಟ್ಟಣವಾಸಿಗಳು ಮನೆಗಳಲ್ಲಿನ ಕಸವನ್ನು ಚರಂಡಿಗೆ ಸುರಿಯಬಾರದು. ಪುರಸಭೆಯಿಂದ ಬರುವ ವಾಹನಗಳಿಗೆ ನೀಡಬೇಕು.> ಶೇಖರ್​ ರೆಡ್ಡಿಪರಿಸರ ಇಂಜಿನಿಯರ್​ ಪುರಸಭೆ, ವಿಜಯಪುರ\ರಸ್ತೆಯನ್ನು ನಗರೋತ್ಥಾನ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಪಟ್ಟಣವಾಸಿಗಳು ಮನೆಗಳಲ್ಲಿನ ಕಸವನ್ನು ಚರಂಡಿಗೆ ಸುರಿಯಬಾರದು. ಪುರಸಭೆಯಿಂದ ಬರುವ ವಾಹನಗಳಿಗೆ ನೀಡಬೇಕು.

— > ಶೇಖರ್​ ರೆಡ್ಡಿ ಪರಿಸರ ಇಂಜಿನಿಯರ್​ ಪುರಸಭೆ, ವಿಜಯಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net