ಜಿಲ್ಲೆಯಲ್ಲಿ ಮಳೆಯ ಆರ್ಭಟ

Rain in the district
Rain in the district
Published on
ತುಮಕೂರು: ಬಹುದಿನ ನಂತರ ಜಿಲ್ಲೆಯಲ್ಲಿ ಮಳೆಯ ಆರ್ಭಟವಾಗಿದ್ದು, ಶನಿವಾರ ತಡರಾತ್ರಿಯವರೆಗೂ ಬಹುತೇಕ ಕಡೆ ಮಳೆ ಸುರಿದಿದೆ. ಹುಳಿಯಾರು, ತಿಪಟೂರು, ಕೆ.ಬಿ.ಕ್ರಾಸ್​, ಗುಬ್ಬಿ ಸೇರಿದಂತೆ ಎಲ್ಲೆಡೆಯೂ ಧಾರಾಕಾರ ಮಳೆಯಾಗಿದೆ. ತುಮಕೂರು ನಗರದ ಸದಾಶಿವನಗರ, ಕೋತಿತೋಪು, ಆರ್​.ಟಿ.ನಗರದಲ್ಲಿ ಆಳುದ್ದದ ನೀರು ನಿಂತಿದ್ದು, ಜನರು ಓಡಾಡಲು ಪರದಾಡಿದ್ದಾರೆ. ಪಾಲಿಕೆ ಆಯುಕ್ತೆ ಅಶ್ವಿಜ ಆವರೇ ಖುದ್ದು ಕಾರ್ಯಾಚರಣೆಗೆ ಇಳಿದು ಸುಗುಮವಾಗಿ ನೀರು ಹರಿಯುವ ವ್ಯವಸ್ಥೆ ಮಾಡಿದ್ದಾರೆ. ಕುಪ್ಪೂರು ಗ್ರಾಮದಲ್ಲಿ ಅಂಗನವಾಡಿ ಮೇಲೆ ಮರ ಬಿದ್ದಿದೆ. ದಿಢೀರ್​ ಮಳೆಗೆ ನಗರದೆಲ್ಲೆಡೆ ಜನಜೀವನ, ಸಂಚಾರ ಅಸ್ತವ್ಯಸ್ತವಾದ ಹಿನ್ನೆಲೆಯಲ್ಲಿ ಪಾಲಿಕೆ ಕಚೇರಿಗೆ ದೂರುಗಳು ಹರಿದುಬಂದಿವೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net