ರಾಯಚೂರು ಉತ್ಸವ: ಎರಡನೇ ಸಿದ್ಧತಾ ಸಭೆ - ನಿರ್ಲಕ್ಷ್ಯ ವಹಿಸುವುದು ಕಂಡುಬಂದರೆ ಸೂಕ್ತ ಕ್ರಮ ಎಚ್ಚರಿಕೆ

ರಾಯಚೂರಿನ ಜಿಲ್ಲಾಧಿಕಾರಿಗಳ ಭವನದಲ್ಲಿ ಗುರುವಾರ ಜಿಲ್ಲಾಧಿಕಾರಿ ನಿತೀಶ್ ಕೆ., ಅಧ್ಯಕ್ಷತೆಯಲ್ಲಿ  ರಾಯಚೂರು ಉತ್ಸವದ ಎರಡನೇ ಸಿದ್ಧತಾ ಸಭೆ ನಡೆಯಿತು. ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ, ಎಡಿಸಿ ಶಿವಾನಂದ ಇದ್ದರು.
ರಾಯಚೂರಿನ ಜಿಲ್ಲಾಧಿಕಾರಿಗಳ ಭವನದಲ್ಲಿ ಗುರುವಾರ ಜಿಲ್ಲಾಧಿಕಾರಿ ನಿತೀಶ್ ಕೆ., ಅಧ್ಯಕ್ಷತೆಯಲ್ಲಿ ರಾಯಚೂರು ಉತ್ಸವದ ಎರಡನೇ ಸಿದ್ಧತಾ ಸಭೆ ನಡೆಯಿತು. ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ, ಎಡಿಸಿ ಶಿವಾನಂದ ಇದ್ದರು.
Published on
ರಾಯಚೂರು ರಾಯಚೂರು ಉತ್ಸವ ಸಮಿತಿಯಲ್ಲಿನ ಎಲ್ಲ ಅಧಿಕಾರಿಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು. ಯಾರು ಸಹ ನಿರ್ಲಕ್ಷ್ಯ ಮಾಡಬಾರದು. ಸಮಿತಿವಾರು ಸೂಚಿಸಿದ ಎಲ್ಲ ಕಾರ್ಯಗಳು ಸಕಾಲಕ್ಕೆ ಪೂರ್ಣವಾಗಬೇಕು.ಯಾರಾದರು ನಿರ್ಲಕ್ಷ್ಯ ವಹಿಸುವುದು ಕಂಡು ಬಂದಲ್ಲಿ ಸೂಕ್ತ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ನಿತೀಶ್ ಕೆ. ಸಂಬಂಧಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಭವನದಲ್ಲಿ ಗುರುವಾರ ರಾಯಚೂರು ಉತ್ಸವದ ಎರಡನೇ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜ.29 ರಿಂದ 31 ರವರೆಗೆ ನಿಗದಿಯಾದ ರಾಯಚೂರು ಉತ್ಸವ ತಯಾರಿ ಸಭೆಯಲ್ಲಿ, ಮೊದಲನೇ ಸಭೆಯ ನಂತರ ಇದುವರೆಗೆ ನಡೆದ ಸಿದ್ಧತೆಯ ಬಗ್ಗೆ ಮತ್ತು ಆಯಾ ಸಮಿತಿಗಳು ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು. ಉತ್ಸವದ ಆಹ್ವಾನ ಪತ್ರಿಕೆ, ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಬ್ಯಾನರ್ ಎಲ್ಲವೂ ಸಕಾಲಕ್ಕೆ ಸಿದ್ಧವಾಗಬೇಕು.
ವಿಶೇಷವಾಗಿ ಮೂಲಭೂತ ಸೌಲಭ್ಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸಮಿತಿಯು ವಿಶೇಷ ಕಾಳಜಿ ವಹಿಸಿ ವೇದಿಕೆ ನಿರ್ಮಾಣ, ತಾತ್ಕಾಲಿನ ಬಸ್ ನಿಲ್ದಾಣ, ಸಹಾಯವಾಣಿ ಕೇಂದ್ರಗಳ ಆರಂಭಕ್ಕೆ ಒತ್ತು ಕೊಡಬೇಕು. ಕುಡಿಯುವ ನೀರಿನ ಸರಬರಾಜುಗಾಗಿ ತಾತ್ಕಾಲಿಕವಾಗಿ ಸ್ಥಾವರ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಒತ್ತು ಕೊಡಬೇಕು. ಜನರಿಗೆ ಅನುಕೂಲವಾಗುವಂತೆ ಅಲ್ಲಲ್ಲಿ ತಾತ್ಕಾಲಿಕ ಶೌಚಾಲಯಗಳ ನಿರ್ಮಾಣ, ರಾಯಚೂರು ಹಾಗೂ ರಾಯಚೂರಿಗೆ ಬರುವ ಎಲ್ಲ ರಸ್ತೆಗಳ ದುರಸ್ತಿ ಮತ್ತು ರಸ್ತೆಗಳ ಪಕ್ಕದಲ್ಲಿ ಕೆಂಪು ಮಣ್ಣು ಹಾಗೂ ಜಂಗಲ್ ಕಟಿಂಗ್ ವ್ಯವಸ್ಥೆ ಮಾಡಬೇಕು. ರಾಯಚೂರು ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಈಗಿನಿಂದಲೇ ತಾತ್ಕಾಲಿಕ ಸ್ವಾಗತ ಕೌಂಟರ್ ವ್ಯವಸ್ಥೆ ಮಾಡಬೇಕೆಮದು ಹೇಳಿದರು.
ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ ಮಾತನಾಡಿ, ಉತ್ಸವದ ಮೊದಲ ದಿನ ನಡೆಯುವ ಮೆರವಣಿಗೆಗೆ ಈಗಿನಿಂದಲೇ ಅಚ್ಚುಕಟ್ಟಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿನ ವಿವಿಧ ಸಂಘ ಸಂಸ್ಥೆಗಳ ಎಲ್ಲ ಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು, ಶಿಕ್ಷಕರು, ಸ್ವಸಹಾಯ ಸಂಘದ ಮಹಿಳೆಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ವಸತಿ ನಿಲಯಗಳು ಸೇರಿದಂತೆ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ಜಿಲ್ಲೆಯಲ್ಲಿನ ಸರ್ವ ನಾಗರಿಕರು, ಯುವಜನರು ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ರಾಯಚೂರು ನಗರದಲ್ಲಿನ ಎಲ್ಲ ಸರ್ಕಾರಿ ಕಚೇರಿಗಳ ಆವರಣವನ್ನು ಆಯಾ ಇಲಾಖೆಗಳೇ ನಡೆಸಿ ಅಲ್ಲಿ ಜನವರಿ 26 ರಿಂದ ಉತ್ಸವ ಮುಗಿಯುವವರೆಗೆ ಲೈಟಿಂಗ್ ವ್ಯವಸ್ಥೆ ಮಾಡಿ ಅಲಂಕಾರಕ್ಕೆ ಈಗಿನಿಂದಲೇ ಅಧಿಕಾರಿಗಳು ಯೋಜನೆ ರೂಪಿಸಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ, ಜಿಪಂ ಉಪ ಕಾರ್ಯದರ್ಶಿ ಸಿದ್ದಪ್ಪ ಪೂಜಾರಿ, ಜಿಪಂ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಪಾಲಿಕೆಯ ಸಮಿತಿ ಕಾರ್ಯದರ್ಶಿ ಕೃಷ್ಣ ಶಾವಂತಗೇರಿ, ಪಿಡಿ ಈರಣ್ಣ ಬಿರಾದಾರ, ಪಾಲಿಕೆಯ ಉಪ ಆಯುಕ್ತೆ ಸಂತೋಷರಾಣಿ ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net