ವಾಚಕರು, ಯುವಕವಿಗಳು, ಪ್ರೋತ್ಸಾಹಿಸುವ ಸಾಹಿತಿಗಳನ್ನು ಹೊರತುಪಡಿಸಿದರೆ ಕವಿಗೋಷ್ಠಿ ಆಯೋಜಿಸಿದ್ದ ಆವರಣದಲ್ಲಿ ಖಾಲಿ ಕುರ್ಚಿಗಳೇ ಪ್ರೇಕ್ಷಕರಂತಿದ್ದವು. ಯುವಕವಿಗಳು ಒಡಲಾಳದ ನೋವು, ತೊಳಲಾಟ, ಜಿಲ್ಲೆಯ ಸಂಪತ್ತು, ದೌರ್ಜನ್ಯ, ದಬ್ಬಾಳಿಕೆ, ಸ್ತ್ರೀ ಸಂವೇದನೆ ಸೇರಿ ವಿವಿಧ ವಿಷಯದ ಕುರಿತು ವಿಭಿನ್ನವಾಗಿ ಕವಿತೆ ವಾಚನವನ್ನೇನೂ ಮಾಡಿದರು. ಆದರೆ, ಕೇಳುವ ಯುವಕರು, ಆಸಕ್ತರ ಅಭಾವ ಯುವಕರಲ್ಲಿನ ಕ್ರಿಯಾಶೀಲತೆ ಕುಂಟಿತಕ್ಕೆ ಕನ್ನಡಿಯಂತಿತ್ತು.