ದೇವರಕೆರೆಯಲ್ಲಿ ತೆಪ್ಪೋತ್ಸವ DABASPETE

ಸೋಂಪುರ ಹೋಬಳಿಯ ದೇವರೆಕೆರೆಯಲ್ಲಿ ಅದ್ದೂರಿಯಾಗಿ ತೆಪ್ಪೋತ್ಸವ ನಡೆಸಲಾಯಿತು. ಶಾಸಕ ಶ್ರೀನಿವಾಸ್​, ಮಾಜಿ ಶಾಸಕ ಗೌರಿಶಂಕರ್​,ನೆಲಮಂಗಲ ಎನ್​ಪಿಎ ಸದಸ್ಯ ಅಂಚೆಮನೆ ಪ್ರಕಾಶ್​, ಮುಖಂಡ ಕೆ.ಗೋವಿಂದರಾಜು, ಗ್ರಾಪಂ ಸದಸ್ಯ ದಿನೇಶ್​ ನಾಯಕ, ಮನು ಪ್ರಸಾದ್​, ಗ್ರಾಪಂ ಮಾಜಿ ಅಧ್ಯಕ್ಷ ಎನ್​.ಆರ್​.ಸಿದ್ದರಾಜು, ಲಕ್ಕುರ್​ ಸಿದ್ದರಾಜು, ಯೋಗಾನಂದ, ಹನುಮಂತರಾಜು ಇದ್ದರು.
ಸೋಂಪುರ ಹೋಬಳಿಯ ದೇವರೆಕೆರೆಯಲ್ಲಿ ಅದ್ದೂರಿಯಾಗಿ ತೆಪ್ಪೋತ್ಸವ ನಡೆಸಲಾಯಿತು. ಶಾಸಕ ಶ್ರೀನಿವಾಸ್​, ಮಾಜಿ ಶಾಸಕ ಗೌರಿಶಂಕರ್​,ನೆಲಮಂಗಲ ಎನ್​ಪಿಎ ಸದಸ್ಯ ಅಂಚೆಮನೆ ಪ್ರಕಾಶ್​, ಮುಖಂಡ ಕೆ.ಗೋವಿಂದರಾಜು, ಗ್ರಾಪಂ ಸದಸ್ಯ ದಿನೇಶ್​ ನಾಯಕ, ಮನು ಪ್ರಸಾದ್​, ಗ್ರಾಪಂ ಮಾಜಿ ಅಧ್ಯಕ್ಷ ಎನ್​.ಆರ್​.ಸಿದ್ದರಾಜು, ಲಕ್ಕುರ್​ ಸಿದ್ದರಾಜು, ಯೋಗಾನಂದ, ಹನುಮಂತರಾಜು ಇದ್ದರು.
Published on
ದಾಬಸ್​ಪೇಟೆ : ನೆಲಮಂಗಲ ತಾಲೂಕು ಶಿವಗಂಗೆ ಸಮೀಪದ ದೇವರಕೆರೆಯ ಕೋಡಿ ಹರಿದ ಹಿನ್ನೆಲೆಯಲ್ಲಿ ಮಂಗಳವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ತೆಪ್ಪೋತ್ಸವ ನೆರವೇರಿಸಲಾಯಿತು.
ಕೆಂಪಮ್ಮದೇವಿ ಮತ್ತು ಹೊನ್ನಮ್ಮದೇವಿ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ತೆಪ್ಪದಲ್ಲಿ ಆದಿಶಕ್ತಿ ಹೊನ್ನಮ್ಮದೇವಿ ಮತ್ತು ಕೆಂಪಮ್ಮದೇವಿಯ ಮೂರ್ತಿಗಳ ಮೆರವಣಿಯನ್ನು ಭಕ್ತರು ಕಣ್ತುಂಬಿಕೊಂಡು ಇಷ್ಟಾರ್ಥ ಸಿದ್ದಿಗೆ ಪ್ರಾರ್ಥನೆ ಸಲ್ಲಿಸಿದರು. ತೆಪ್ಪೋತ್ಸವ ಹಿನ್ನೆಲೆಯಲ್ಲಿ ಸಾವಿರಾರು ಮಹಿಳೆಯರಿಗೆ ಬಾಗಿನ ನೀಡಲಾಯಿತು. ಇದೇ ವೇಳೆ ಸಾವಿರಾರು ಜನರಿಗೆ ಹೊದಿಕೆ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಯಿತು.
ಪೂಜಾ ಕಾರ್ಯದಲ್ಲಿ ನೆಲಮಂಗಲ ಮತ್ತು ತುಮಕೂರು ಕ್ಷೇತ್ರದ ಹಲವು ರಾಜಕೀಯ ಮುಖಂಡರು ಸೇರಿ ಸಾರ್ವಜನಿಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಶಾಸಕ ಶ್ರೀನಿವಾಸ್​, ಮಾಜಿ ಶಾಸಕ ಗೌರಿಶಂಕರ್​ ಸೇರಿ ಹಲವು ಮುಖಂಡರು ತೆಪ್ಪದಲ್ಲಿ ಕುಳಿತು ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು. ನಂಬಿಕೆ ಮುಂದುವರಿಯಲಿ: ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ ಇರುವ ದೇವರಕೆರೆಗೆ ಭಕ್ತಿ ಭಾವ ಮೂಡಿಸುವ ಶಕ್ತಿ ಇದೆ. ಇಂದಿಗೂ ಕೆರೆಯ ಬಗ್ಗೆ ಜನರು ಇಟ್ಟಿರುವ ನಂಬಿಕೆ ಅಗಾಧವಾಗಿದೆ. ಇದು ಹೀಗೆಯೇ ಮುಂದುವರೆಯಲಿ ಎಂದು ಶಾಸಕ ಶ್ರೀನಿವಾಸ್​ ಆಶಿಸಿದರು. ಕೆರೆತುಂಬಿ ಕೋಡಿ ಹರಿಯುವುದು ಶುಭಸಂಕೇತ ನಾಡಿನಲ್ಲಿ ಒಳ್ಳೆ ಮಳೆಯಾಗಿ ಸಮೃದ್ಧ ಬೆಳೆಯಾಗಲಿ. ಶಕ್ತಿದೇವತೆಗಳು ಎಲ್ಲರನ್ನು ಹರಿಸಲಿ ಎಂದು ಪ್ರಾರ್ಥನೆ ಮಾಡಿದರು.
ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ : ಕ್ಷೇತ್ರದ ಶಾಸಕ ಶ್ರೀನಿವಾಸ್​ ಸಾವಿರಾರು ಕೋಟಿ ರೂ.ಅನುದಾನದ ಮೂಲಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರ ಶ್ರಮ ಮತ್ತು ಸಾಧನೆಯಿಂದ ಮುಂದೆಯೂ ಜನ ಅವರಿಗೆ ಆಶೀರ್ವಾದ ಮಾಡಬೇಕು ಎಂದು ಮಾಜಿ ಶಾಸಕ ಗೌರಿಶಂಕರ್​ ಮನವಿ ಮಾಡಿದರು. ಎಂಎಲ್​ಸಿ ರವಿ ಮಾತನಾಡಿ, ಕ್ಷೇತ್ರದ ಶಾಸಕ ಶ್ರೀನಿವಾಸ್​ ಮತ್ತು ಮಾಜಿ ಶಾಸಕ ಗೌರಿಶಂಕರ್​ ಇಬ್ಬರೂ ಸಮರ್ಥ ನಾಯಕರಾಗಿದ್ದಾರೆ. ದೇವರಕೆರೆಯ ಬಗ್ಗೆ ಜನರಲ್ಲಿರುವ ನಂಬಿಕೆ ಮತ್ತು ಭಕ್ತಿ ಅಪಾರವಾದದ್ದು ಎಂದು ಗುಣಗಾನ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net