ಗೌರಿಬಿದನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು.ಕಾಲೇಜಿನ ಪ್ರಿನ್ಸಿಪಾಲ ಡಾ.ಎಚ್.ಎಸ್.ವೆಂಕಟಾಚಲಪತಿ, ಡಾ.ವೆಂಕಟೇಶ್, ಸಿಬ್ಬಂದಿ ಕಾರ್ಯದರ್ಶಿ ಜಿ.ಕೆ.ರಮೇಶ್, ಡಾ.ರಾಜಶೇಖರ್ ರೆಡ್ಡಿ, ಆದಿನಾರಾಯಣ ರೆಡ್ಡಿ ಇದ್ದರು.
ಗೌರಿಬಿದನೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸ್ಮರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ವೆಂಕಟಾಚಲಪತಿ ಮಾತನಾಡಿ,ರಾಧಾಕೃಷ್ಣನ್ ದಾರ್ಶನಿಕ ಶಿಕ್ಷಕರಾಗಿದ್ದು, ವೃತ್ತಿ ಶಿಕ್ಷಕ ಸಮುದಾಯಕ್ಕೆ ಸದಾ ಆದರ್ಶ, ಅವರ ಶ್ರದ್ಧೆ ಸರಳತೆ ಪ್ರಾಮಾಣಿಕತೆ ವಿದ್ಯಾರ್ಥಿಗಳಿಗೆ ಅನುಕರಣೆ, ಶಿಕ್ಷಣವೆಂದರೆ ಮಾಹಿತಿಯ ಸಂಗ್ರಹವಲ್ಲ ಭೌತಿಕ ಶಕ್ತಿಯನ್ನು ವಿಕಸನಗೊಳಿಸುವುದು.
ಪ್ರಸ್ತುತ ದಿನದಲ್ಲಿ ವಿದ್ಯಾರ್ಥಿಗಳಲ್ಲಿ ನೈತಿಕ ಮತ್ತು ಜವಾಬ್ದಾರಿಯನ್ನು ಬೆಳೆಸುವ ಶಿಕ್ಷಣ ಅಗತ್ಯ ಎಂದರು.
ಐಕ್ಯೂಎಸ್ಸಿ ಸಂಯೋಜಕ ಡಾ.ವೆಂಕಟೇಶ್, ಸಿಬ್ಬಂದಿ ಕಾರ್ಯದರ್ಶಿ ಜಿ.ಕೆ.ರಮೇಶ್, ಹಿರಿಯ ಪ್ರಾಧ್ಯಾಪಕ ಡಾ.ರಾಜಶೇಖರ್ ರೆಡ್ಡಿ, ಆದಿನಾರಾಯಣ ರೆಡ್ಡಿ ಇದ್ದರು.