ರಾಸಲೀಲೆ ವಿಡಿಯೋ ವಿವಾದ; ಕೆ. ರಾಮಚಂದ್ರ ರಾವ್ ಮೊದಲ ಪ್ರತಿಕ್ರಿಯೆ: ಇದು ಸುಳ್ಳು, ಇದರ ಬಗ್ಗೆ ತನಿಖೆಯಾಗಬೇಕು ಎಂದ ಡಿಜಿಪಿ | Ramachandra Rao

ರಾಸಲೀಲೆ ವಿಡಿಯೋ ವಿವಾದ; ಕೆ. ರಾಮಚಂದ್ರ ರಾವ್ ಮೊದಲ ಪ್ರತಿಕ್ರಿಯೆ: ಇದು ಸುಳ್ಳು, ಇದರ ಬಗ್ಗೆ ತನಿಖೆಯಾಗಬೇಕು ಎಂದ ಡಿಜಿಪಿ
ರಾಸಲೀಲೆ ವಿಡಿಯೋ ವಿವಾದ; ಕೆ. ರಾಮಚಂದ್ರ ರಾವ್ ಮೊದಲ ಪ್ರತಿಕ್ರಿಯೆ: ಇದು ಸುಳ್ಳು, ಇದರ ಬಗ್ಗೆ ತನಿಖೆಯಾಗಬೇಕು ಎಂದ ಡಿಜಿಪಿ
Published on
ಬೆಂಗಳೂರು: ಸಮವಸ್ತ್ರ ತೊಟ್ಟು ಕಚೇರಿಯಲ್ಲಿ ಕಾರ್ಯನಿರತರಾಗಿದ್ದ ವೇಳೆ ಮಹಿಳೆಯರೊಂದಿಗೆ ರಾಸಲೀಲೆಯ ವಿಡಿಯೋಗೆ ಪ್ರತಿಕ್ರಿಯಿಸಿರುವ ಡಿಜಿಪಿ  ಕೆ. ರಾಮಚಂದ್ರ ರಾವ್(Ramachandra Rao), ಈ ವಿಡೀಯೊ ನನಗೆ ಶಾಂಕಿಂಗ್​ ಆಗಿದೆ. ಈ ವಿಷಯವಾಗಿ ನಾನು ವಕೀಲರೊಂದಿಗೆ ಮಾತನಾಡುತ್ತೇನೆ. ಈ ಆರೋಪದ ವಿರುದ್ಧ ಕೇಸ್​ ದಾಖಲೆ ಮಾಡುತ್ತೇವೆ ಎಂದು ಹೇಳಿದ್ದಾರೆ. 
ಈ ಆರೋಪದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಜಿಪಿ ರಾಮ್​ರಾವ್​, ಇದು ಹಳೆಯದು, ಇದು ಸುಳ್ಳು, ಇದರ ಬಗ್ಗೆ ತನಿಖೆಯಾಗಬೇಕು. ಈ ವಿಡೀಯೊ ನನಗೆ ಶಾಂಕಿಂಗ್​ ಆಗಿದೆ. ಈ ವಿಷಯವಾಗಿ ನಾನು ವಕೀಲರೊಂದಿಗೆ ಮಾತನಾಡುತ್ತೇನೆ. ಈ ಆರೋಪದ ವಿರುದ್ಧ ಕೇಸ್​ ದಾಖಲೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಈ ಕಾಲದಲ್ಲಿ ಏನಾದರು ಮಾಡಬಹುದು. ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದರ ಬಗ್ಗೆ ನನಗೆ ಯಾವುದೇ ಐಡಿಯಾ ಇಲ್ಲ ಎಂದು ಡಿಜಿಪಿ ಪ್ರತಿಕ್ರಿಯಿಸಿದ್ದಾರೆ.

ನಡೆದಿದ್ದೇನು..?

ವೈರಲ್ ಆಗಿರುವ ವಿಡಿಯೋಗಳಲ್ಲಿ ರಾಮಚಂದ್ರ ರಾವ್ ಅವರು ತಮ್ಮ ಕಚೇರಿಯಲ್ಲೇ ಕುಳಿತು, ಸಮವಸ್ತ್ರದಲ್ಲಿರುವಾಗಲೇ ಹಲವು ಮಹಿಳೆಯೊಬ್ಬರೊಂದಿಗೆ  ಸರಸವಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋಗಳನ್ನು ಒಂದೆರಡು ವರ್ಷಗಳ ಹಿದೆ ರೆಕಾರ್ಡ್​ ಮಾಡಿರಬಹುದೆಂದು ಹೇಳಲಾಗಿದೆ. ಆದರೆ  ವಿಡಿಯೋದಲ್ಲಿರುವ ಮಹಿಳೆ ಯಾರು? ಓರ್ವ ಮಹಿಳೆಯಾ?  ಅಥವಾ ಹಲವು ಮಹಿಳೆಯರಾ ಎಂಬುದು ಗೊತ್ತಾಗಿಲ್ಲ. ಈ ವಿಡಿಯೋಗಳನ್ನು ಯಾರು ಚಿತ್ರೀಕರಿಸಿದ್ದಾರೆ? ಇದರ ಉದ್ದೇಶ ಏನು? ಈಗ ಈ ವಿಡಿಯೋಗಳನ್ನು ಬಹಿರಂಗ ಪಡಿಸಿದ್ಯಾಕೆ ಎಂಬುದು ನಿಗೂಢವಾಗಿದೆ.  
ಸಮವಸ್ತ್ರದ ಘನತೆ ಮರೆತು, ಕಚೇರಿಯಲ್ಲೇ ಇಂತಹ ಕೃತ್ಯವೆಸಗಿರುವುದು ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ರಾಜ್ಯ ಸರ್ಕಾರವು ತಕ್ಷಣವೇ ತನಿಖೆಗೆ ಸೂಚಿಸಿದೆ. ಗೃಹ ಇಲಾಖೆಯು ಈ ಬಗ್ಗೆ ವರದಿ ಕೇಳಿದೆ.
ಖಾಸಗಿವಾಹಿನಿ ಜೊತೆ ಮಾತನಾಡಿದ ಕೆ ರಾಮಚಂದ್ರ ರಾವ್​​,  ನಾನು ಕೂಡ ಇಂದು ಆ ವಿಡಿಯೋವನ್ನು ನೋಡಿದ್ದೇನೆ. ಅದು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ ಅಥವಾ ಎಡಿಟ್ ಮಾಡಿರುವ  ವಿಡಿಯೋ ಆಗಿದೆ. ಅಲ್ಲಿರುವ ಮಹಿಳೆಯರು ಯಾರು? ಎಂದು ನನಗೆ ಗೊತ್ತಿಲ್ಲ. ನನ್ನ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ಹಚ್ಚಲು.. ಯಾರೋ ವಿರೋಧಿಗಳು ಈ ರೀತಿಯ ಷಡ್ಯಂತ್ರ ರೂಪಿಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಯಾರು ಈ ಕೆ. ರಾಮಚಂದ್ರ ರಾವ್?

ಕೆ. ರಾಮಚಂದ್ರ ರಾವ್ ಅವರು ಕರ್ನಾಟಕ ಕೇಡರ್‌ನ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದು, ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಇವರು ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ (MD) ಸೇವೆ ಸಲ್ಲಿಸಿದ್ದರು. 2023ರಲ್ಲಿ ಇವರಿಗೆ ಡಿಜಿಪಿ (DGP) ಶ್ರೇಣಿಗೆ ಬಡ್ತಿ ನೀಡಲಾಯಿತು. ಆ ಸಮಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಎಂಡಿಯಾಗಿ ಕಾರ್ಯನಿರ್ವಹಿಸಿದ್ದರು. ತದನಂತರ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿ ನೇಮಕಗೊಂಡಿದ್ದರು.
2025ರ ಮಾರ್ಚ್ ತಿಂಗಳಲ್ಲಿ ಇವರ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿತ್ತು. ಇವರ ಮಲಮಗಳು ರನ್ಯಾ ರಾವ್ ಅವರು ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ರಾಮಚಂದ್ರ ರಾವ್ ಅವರು ತಮ್ಮ ಅಧಿಕಾರ ಮತ್ತು ಪೊಲೀಸ್ ಸವಲತ್ತುಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ದೂರು ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ತನಿಖೆಯ ದೃಷ್ಟಿಯಿಂದ 2025ರ ಮಾರ್ಚ್‌ನಲ್ಲಿ ಇವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ಆದೇಶ ಹೊರಡಿಸಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net