ಸಹಕಾರ ಕ್ಷೇತ್ರದಿಂದ ಗುಣಮಟ್ಟದ ಸೇವೆ

 ಬೋರಗಾಂವನಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರಕ್ಕೆ ಉತ್ತಮ ಪಾಟೀಲ ಚಾಲನೆ ನೀಡಿದರು. ಅಭಿನಂದನ ಪಾಟೀಲ, ದಿಗಂಬರ ಕಾಂಬಳೆ, ಅಶೋಕ ಬಂಕಾಪುರೆ, ಆರ್.ಟಿ.ಚೌಗುಲಾ ಇತರರಿದ್ದರು.
ಬೋರಗಾಂವನಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರಕ್ಕೆ ಉತ್ತಮ ಪಾಟೀಲ ಚಾಲನೆ ನೀಡಿದರು. ಅಭಿನಂದನ ಪಾಟೀಲ, ದಿಗಂಬರ ಕಾಂಬಳೆ, ಅಶೋಕ ಬಂಕಾಪುರೆ, ಆರ್.ಟಿ.ಚೌಗುಲಾ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಬೋರಗಾಂವ
ಸದೃಢ ಸಮಾಜ ನಿರ್ಮಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಗ್ರಾಮೀಣ ಪ್ರದೇಶದ ನಾಗರಿಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆರೋಗ್ಯ ಸೌಲಭ್ಯ ಒದಗಿಸುವಲ್ಲಿ ಸಹಕಾರ ಕ್ಷೇತ್ರದ ಪಾತ್ರ ಮುಖ್ಯವಾಗಿದೆ ಎಂದು ಯುವ ನಾಯಕ ಉತ್ತಮ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಕೇಂದ್ರ ಸಹಕಾರ ಸಚಿವಾಲಯ ಸ್ಥಾಪನೆಗೊಂಡು 5 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಡಿಸಿಸಿ ಬ್ಯಾಂಕ್, ಅರಿಹಂತ ಉದ್ಯೋಗ ಸಮೂಹ, ಲಠ್ಠೆ ಶಿಕ್ಷಣ ಸಂಸ್ಥೆ, ಆಚಾರ್ಯ ದೇಶಭೂಷಣ ಆಯುರ್ವೇದ ಕಾಲೇಜು ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯ ಹೆಚ್ಚಿಸಲು ಅರಿಹಂತ ಸಂಸ್ಥೆ ಶ್ರಮಿಸುತ್ತಿದೆ. ಆಧುನಿಕ ವೈದ್ಯಕೀಯ ಸೇವೆ, ತಜ್ಞ ವೈದ್ಯರ ಲಭ್ಯತೆ, ಅತ್ಯಾಧುನಿಕ ವೈದ್ಯಕೀಯ ಉಪಕರಣ ಮತ್ತು ಸಾರ್ವಜನಿಕ ಜಾಗೃತಿ ಮೂಲಕ ಆರೋಗ್ಯ ಬಗ್ಗೆ ಮಾಹಿತಿ ಒದಗಿಸಲಾಗುತ್ತಿದೆ. ಸಹಕಾರ ಸಪ್ತಾಹದ ಜತೆಗೆ ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಅರಿಹಂತ ಸಂಸ್ಥೆ ಅಧ್ಯಕ್ಷ ಅಭಿನಂದನ ಪಾಟೀಲ ಮಾತನಾಡಿ, ಯುವಜನರು ಆರೋಗ್ಯ, ಶಿಕ್ಷಣ ಮತ್ತು ಸಹಕಾರ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.
ಶಿಬಿರದಲ್ಲಿ, ಕಣ್ಣಿನ ಪರೀಕ್ಷೆ, ಇಸಿಜಿ, ಮಧುಮೇಹ, ರಕ್ತದೊತ್ತಡ ಸೇರಿದಂತೆ ಎಲ್ಲ ರೀತಿಯ ಆರೋಗ್ಯ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಯಿತು. 520ಕ್ಕೂ ಹೆಚ್ಚು ಜನರು ಶಿಬಿರದ ಲಾಭ ಪಡೆದುಕೊಂಡರು.
ಪಪಂ ಅಧ್ಯಕ್ಷ ದಿಗಂಬರ ಕಾಂಬಳೆ, ಕೃಷಿ ಸಂಘದ ಉಪಾಧ್ಯಕ್ಷ ಸುಮಿತ ರೊಡ್ಡ, ಸಿಇಒ ಆರ್.ಟಿ.ಚೌಗುಲಾ, ಅರಿಹಂತ ಸೊಸೈಟಿ ಸಿಇಒ ಅಶೋಕ ಬಂಕಾಪುರೆ, ಅಶೋಕ ಪಾಟೀಲ, ಮನೋಜಕುಮಾರ ಪಾಟೀಲ, ತಾತ್ಯಾಸಾಹೇಬ ಬಸಣ್ಣವರ, ಶಿವಾಜಿ ತೊಡಕರ, ಅಭಯ ಕರೋಲೆ, ಬಾಳು ಅರಾಜ, ಪ್ರದೀಪ ಮಾಳಿ, ರಾಜೇಂದ್ರ ಐದಮಾಳೆ, ದರ್ಶನ ಪಾಟೀಲ, ಡಾ.ಯುವರಾಜ ಯಡ್ರಾವಿ, ಡಾ.ಪೂಜಾ ಕುಲಕರ್ಣಿ, ಡಾ.ದಾಕ್ಷಾಯಿಣಿ, ಡಾ.ಶಿವಾನಂದ ಕುಂಬಾರ, ಡಾ.ಅಮೋಘ ಡಿ., ಡಾ.ಲಕ್ಷ್ಮೀ ಪಾಟೀಲ, ಡಾ.ಶಬನಂ ದೇಸಾಯಿ, ಡಾ.ಅಶ್ವಿನಿ ನಿರಾಸ, ಡಾ.ಮಣಿಕಾಂತ ಮಾಲೆಗಾಂವ, ಡಾ.ಸಂದೀಪ ಸಡಕೆ, ರಾಕೇಶ ಫಿರಗಣ್ಣವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net