ದಾಖಲಾತಿ ಹೆಚ್ಚಳಕ್ಕೆ ಗುಣಮಟ್ಟದ ಶಿಕ್ಷಣ ಅವಶ್ಯ

Quality education is essential to increase enrollment
Quality education is essential to increase enrollment
Published on
ಪಾವಗಡ: ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದು ಕಾರ್ಮಿಕ ಇಲಾಖೆ ಮಾಜಿ ಸಚಿವ ವೆಂಕಟರಮಣಪ್ಪ ಹೇಳಿದರು.
ತಾಲೂಕಿನ ಸಾಕ್ಷರ ಗ್ರಾಮ ಕೆ.ರಾಮಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಕೆ.ರಾಮಪುರ ಶಾಲೆಯಲ್ಲಿ ಪ್ರತಿವರ್ಷ ಶಾಲಾ ದಾಖಲಾತಿ ಹೆಚ್ಚುತ್ತಿದೆ, ಇದು ಖಾಸಗಿ ಶಾಲಾ ಮುಕ್ತ ಗ್ರಾಮವಾಗಿ ಕರ್ನಾಟಕದಲ್ಲೇ ಮಾದರಿ ಶಾಲೆಯಾಗಿ ಇತರ ಶಾಲೆಗಳಿಗೆ ಪ್ರೇರಣೆಯಾಗಿದೆ. ಇಲ್ಲಿನ ಶಿಕ್ಷಕರು, ಗ್ರಾಮಸ್ಥರು, ಶಾಲಾಭಿವೃದ್ಧಿ, ಗ್ರಾಪಂ ಸದಸ್ಯರು ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿದ್ದಾರೆ ಎಂದರು.
ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ಮಾಧವರೆಡ್ಡಿ ಮಾತನಾಡಿ, ಇದೇ ಗ್ರಾಮ ಸಾಕ್ಷರತಾ ಆಂದೋಲನ ಕಾರ್ಯಕ್ರಮದಲ್ಲಿ ಯಶಸ್ಸು ಕಂಡು ರಾಜ್ಯದಲ್ಲೇ ಮೊಟ್ಟ ಮೊದಲ ಸಾಕ್ಷರ ಗ್ರಾಮ ಎಂಬ ಹೆಸರು ಪಡೆದಿದೆ, ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಹಿನ್ನೆಲೆ ಪ್ರತಿ ವರ್ಷ ದಾಖಲಾತಿ ಹೆಚ್ಚುತ್ತಿದೆ ಎಂದರು.
ಬಿಇಒ ರೇಣುಕಮ್ಮ ಮಾತನಾಡಿ, ಮಗುವಿನ ಶಿಕ್ಷಣ ಉತ್ತಮ ಕಡೆ ಸಾಗಬೇಕೆಂದರೆ ಶಿಕ್ಷಣ ಇಲಾಖೆ, ಶಿಕ್ಷಕರು ಮತ್ತು ಪಾಲಕರ ಪಾತ್ರ ಬಹುಮುಖ್ಯವಾಗಿದೆ ಎಂದರು. ಬಿಆರ್​ಸಿ ವೆಂಕಟೇಶ್​ ಮತ್ತು ಸಿಆರ್​ಪಿ ಚಂದ್ರಶೇಖರರೆಡ್ಡಿ ಮಾತನಾಡಿದರು.
ಎಸ್​ಡಿಎಂಸಿ ಅಧ್ಯಕ್ಷ ನಾಗೇಶ್​, ಉಪಾಧ್ಯಕ್ಷ ಅಲ್ಕೂರಪ್ಪ, ಮುಖಂಡರಾದ ನಾಗರಾಜು, ಎ.ನರಸಿಂಹ್ಮಮೂರ್ತಿ, ಅಂಜಿನಾಯಕ, ಶಂಕರಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net