ಸರ್ಕಾರಿ ಶಾಲೆಗಳಲ್ಲಿದೆ ಗುಣಮಟ್ಟದ ಶಿಕ್ಷಣ / VIJAYAPUR

ವಿಜಯಪುರದ ಸರ್ಕಾರಿ ಮಾದರಿ ಹೆಣ್ಣುಮಕ್ಕಳ ಪಾಠಶಾಲೆ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ದಾಖಲಾತಿ ಆಂದೋಲನದ ಮೆರವಣಿಗೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಶೈಕ್ಷಣಿಕ ವಿಭಾಗದ ಸಂಯೋಜನಾಧಿಕಾರಿ ಕೇಶವಮೂರ್ತಿ, ಮುಖ್ಯಶಿಕ್ಷಕ ಮನೋಹರ್​, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ವಿಜಯಪುರದ ಸರ್ಕಾರಿ ಮಾದರಿ ಹೆಣ್ಣುಮಕ್ಕಳ ಪಾಠಶಾಲೆ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ದಾಖಲಾತಿ ಆಂದೋಲನದ ಮೆರವಣಿಗೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಶೈಕ್ಷಣಿಕ ವಿಭಾಗದ ಸಂಯೋಜನಾಧಿಕಾರಿ ಕೇಶವಮೂರ್ತಿ, ಮುಖ್ಯಶಿಕ್ಷಕ ಮನೋಹರ್​, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
Published on
ವಿಜಯಪುರ : ಸರ್ಕಾರಿ ಶಾಲೆಗಳು ಸಕಲ ಸೌಲಭ್ಯಗಳನ್ನು ಹೊಂದಿದ್ದು, ಗುಣಮಟ್ಟದ ಶಿಕ್ಷಣ ಮತ್ತು ಪೌಷ್ಟಿಕ ಆಹಾರದೊಂದಿಗೆ ಖಾಸಗಿ ಶಾಲೆಗಳಿಗೆ ಸಮನಾಗಿ ನಿಂತಿವೆ ಎಂದು ಸರ್ಕಾರಿ ಮಾದರಿ ಹೆಣ್ಣುಮಕ್ಕಳ ಪಾಠಶಾಲೆ ಮುಖ್ಯಶಿಕ್ಷಕ ಮನೋಹರ್​ ತಿಳಿಸಿದರು.
ಪಟ್ಟಣದ ಸರ್ಕಾರಿ ಮಾದರಿ ಹೆಣ್ಣುಮಕ್ಕಳ ಪಾಠಶಾಲೆವತಿಯಿಂದ ಹಮ್ಮಿಕೊಂಡಿದ್ದ ಶಾಲಾ ದಾಖಲಾತಿ ಆಂದೋಲನದ ಮೆರವಣಿಗೆಯಲ್ಲಿ ಮಾತನಾಡಿದರು. ಪಠ್ಯಪುಸ್ತಕಗಳ ಜತೆಗೆ ನೋಟ್​ ಪುಸ್ತಕ, ಟ್ರ್ಯಾಕ್​ ಸೂಟ್​, ಶೂ ಮತ್ತು ಉಚಿತವಾಗಿ ಕರಾಟೆ ತರಬೇತಿ ನೀಡಲಾಗುತ್ತಿದೆ. ಪ್ರತಿದಿನ ಬೆಳಗಿನ ಉಪಹಾರ, ಮಧ್ಯಾಹ್ನದ ಬಿಸಿಯೂಟದೊಂದಿಗೆ ಬಾಳೆಹಣ್ಣು, ಮೊಟ್ಟೆ ಮತ್ತು ಹಾಲನ್ನು ಒದಗಿಸಲಾಗುತ್ತಿದೆ ಎಂದರು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸಹಯೋಗದೊಂದಿಗೆ ನೂತನ ಕಟ್ಟಡಗಳು, ಕಂಪ್ಯೂಟರ್​ ಲ್ಯಾಬ್​ ಹಾಗೂ ಅತ್ಯಾಧುನಿಕ ಗ್ರಂಥಾಲಯದ ಸೌಲಭ್ಯ ಶಾಲೆಯಲ್ಲಿದೆ ಎಂದು ಮಾಹಿತಿ ನೀಡಿದರು. ಶಾಲೆಯಲ್ಲಿ 500 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಹೆಚ್ಚುತ್ತಿರುವ ದಾಖಲಾತಿಗೆ ಅನುಗುಣವಾಗಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ನುರಿತ ಹೆಚ್ಚುವರಿ ಶಿಕ್ಷಕರ ನಿಯೋಜನೆಯೂ ಆಗಿದೆ ಎಂದರು.
ಈಗಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಒಬ್ಬ ಮಗುವನ್ನಾದರೂ ಸರ್ಕಾರಿ ಶಾಲೆಗೆ ಸೇರಿಸಲು ಪ್ರೇರೇಪಿಸಿದರೆ, ನಮ್ಮ ಶಾಲೆ ಇತರರಿಗೆ ಮಾದರಿಯಾಗಿ ಮುಂದುವರಿಯಲಿದೆ ಎಂದು ಹೇಳಿದರು.
ವಿದ್ಯಾರ್ಥಿನಿಯರು ಮತ್ತು ಶಿಕ್ಷಕರು ಶಾಲಾ ದಾಖಲಾತಿಯ ಕುರಿತಾದ ಆಕರ್ಷಕ ಬಿತ್ತಿಪತ್ರಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಶೈಕ್ಷಣಿಕ ವಿಭಾಗದ ಸಂಯೋಜನಾಧಿಕಾರಿ ಕೇಶವಮೂರ್ತಿ, ಎಸ್​ಡಿಎಂಸಿ ಅಧ್ಯೆ ರಾಧಾ, ಸಮಿತಿ ಸದಸ್ಯರುಹಾಗೂ ಶಾಲಾ ಶಿಕ್ಷಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net