ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂನಲ್ಲಿ ಗುಣಮಟ್ಟದ ಶಿಕ್ಷಣ / SULIBELE
ಹೊಸಕೋಟೆ ತಾಲೂಕಿನ ಕಂಬಳೀಪುರದ ರಾಜೀವ್ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ ಟೆಕ್ನಾಲಜಿ ಸಂಸ್ಥೆಯ ಆವರಣದಲ್ಲಿ ಕೆೆಟೇರಿಯಾವನ್ನು (ಕ್ಯಾಂಟೀನ್) ನಿರ್ದೇಶಕ ಹರೀಶ್ ಹಿರಾನಿ, ಮುಖ್ಯಸ್ಥ ರೋಹಿತ್ ಬಸ್ವಾಲ್ ಉದ್ಘಾಟಿಸಿದರು. ರೂಪಾ ಮಂಜುನಾಥ್, ಚಂದ್ರಕಾಂತ್, ಅರ್ಜುನ್ ದೇವ್ ಇದ್ದರು.
Published on:
Copied
Follow Us
ಸೂಲಿಬೆಲೆ : ಇಂಧನ ವಲಯದಲ್ಲಿ ಹೆಚ್ಚಿನ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ರಾಜ್ಯದಲ್ಲಿ ರಾಜೀವ್ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ ಟೆಕ್ನಾಲಜಿ ಕ್ಯಾಂಪಸ್ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸ್ಥೆ ನಿರ್ದೇಶಕ ಹರೀಶ್ ಹಿರಾನಿ ಹೇಳಿದರು.
ಹೊಸಕೋಟೆ ತಾಲೂಕಿನ ಕಂಬಳೀಪುರ ಬಳಿಯ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂನ ಬೆಂಗಳೂರು ಕ್ಯಾಂಪಸ್ನಲ್ಲಿ ಅಭಿವೃದ್ಧಿಪಡಿಸಿದ ಹೊರಾಂಗಣ ಕ್ರೀಡಾ ಸಂಕೀರ್ಣ ಮತ್ತು ಕ್ಯಾಂಪಸ್ ಕೆೆಟೇರಿಯಾ (ಕ್ಯಾಂಟೀನ್) ಉದ್ಘಾಟಿಸಿ ಮಾತನಾಡಿದರು.
ರಾಜೀವ್ ಗಾಂಧಿ ಪೆಟ್ರೋಲಿಯಂ ತಂತ್ರಜ್ಞಾನ ಸಂಸ್ಥೆ ಈಗ ದ ಎನರ್ಜಿ ಇನ್ಸ್ಟಿಟ್ಯೂಟ್ ಎಂದು ಕರೆಯಲ್ಪಡುತ್ತದೆ. ಈ ಸಂಸ್ಥೆ 2018ರಿಂದ ಕಾರ್ಯನಿರ್ವಹಿಸುತ್ತಿದ್ದು, ಸಂಶೋಧನೆ, ಇಂಧನ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ಬೆಂಗಳೂರಿನಲ್ಲಿ ಇಂಧನ ವಲಯಕ್ಕೆ ಸಂಬಂಧಿಸಿದ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದೆ. ಗುಣಮಟ್ಟದ ಶಿಕ್ಷಣದ ಜತೆಗೆ ದೈಹಿಕ ಸದೃಢತೆ ಕ್ರೀಡಾ ಮನೋಭಾವ ಮತ್ತು ವ್ಯಕ್ತಿತ್ವ ವಿಕಸನದ ಮಹತ್ವಕ್ಕೆ ಆದ್ಯತೆ ನೀಡುತ್ತದೆ ಎಂದರು.
ನೂತನ ವ್ಯಾಪಕ ಶ್ರೇಣಿಯು ಹೊರಾಂಗಣ ಕ್ರೀಡೆಗಳು ಮತ್ತು ಮನರಂಜನಾ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ, ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳಲು ಅಧುನಿಕ ಮೂಲ ಸೌಕರ್ಯ ಒಳಗೊಂಡಿದೆ. ಹೊರಾಂಗಣ ಕ್ರೀಡಾ ಸಂಕೀರ್ಣದಲ್ಲಿ ಕ್ರಿಕೆಟ್, ಥ್ರೋಬಾಲ್, ವಾಲಿಬಾಲ್ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ಇದೇ ಕ್ಯಾಂಪಸ್ನಲ್ಲಿ ಕೆೆಟೇರಿಯ ಇರುವುದರಿಂದ ಮಳಿಗೆಯಲ್ಲಿ ಪೌಷ್ಟಿಕ ಆಹಾರದ ಜತೆಗೆ ಸ್ಟೇಷನರಿಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಸಂಸ್ಥೆಯ ಮುಖ್ಯಸ್ಥ ರೋಹಿತ್ ಬನ್ಸಾಲ್, ಹಿರಿಯ ಉಪನ್ಯಾಸಕಿ ರೂಪಾ ಮಂಜುನಾಥ್, ಚಂದ್ರಕಾಂತ್, ಅರ್ಜುನ್ದೇವ್, ಶಿವಶಂಕರಿಸುಂದರ್, ಪಲ್ಲವಿ, ದೇವಸನ್, ಸಿಬ್ಬಂದಿ ಸಂಜಯಕುಮಾರ್, ಮಹಾಬಲೇಶ್ವರಶೆಟ್ಟಿ, ರಘು, ಅಶೀಪ್, ವಂಶಿಕೃಷ್ಣ, ನಿಹಾಲ್, ದಯಾನಂದ್ ಶೆಟ್ಟಿ, ಕಮಲ್ ಸಿಂಗ್, ಶಶಾಂಕ್, ದೀಪಕ್ ಇದ್ದರು.
ಹೊಸ ಕ್ಯಾಂಪಸ್ನಲ್ಲಿ ಕೆೆಟೇರಿಯವು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಆರಾಮದಾಯಕ ಆಧುನಿಕ ಸೌಲಭ್ಯಗಳೊಂದಿಗೆ ಪೌಷ್ಟಿಕ ಆಹಾರ, ಸಂವಹನ ವಿಶ್ರಾಂತಿ, ಸಮುದಾಯ ತೊಡಗಿಸಿಕೊಳ್ಳುವ ಸ್ಥಳವಾಗಿದೆ.