ಕೀಳು ಮನಸ್ಥಿತಿಯವರಿಂದ ಶುದ್ಧೀಕರಣ

ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆ ಶುದ್ಧೀಕರಿಸಿರುವುದು ಮತ್ತು ರಾಹುಲï ಗಾಂಽ ವಿರುದ್ಧ ಉದ್ದೇಶಪೂರ್ವಕ ಎ-ï‌ಐಆರ್ ದಾಖಲಿಸಿದ ಉತ್ತರಾಖಂಡ ಸರ್ಕಾರದ ಕ್ರಮ ಖಂಡಿಸಿ ಶನಿವಾರ ಗಾಂಽ ವೃತ್ತದಲ್ಲಿ ಜಿ¯್ಲÁ ಕಾಂಗ್ರೆಸ್‌ನಿAದ ಪ್ರತಿಭಟನೆ ನಡೆಸಲಾಯಿತು. ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪುರ, ಮರೆಪ್ಪ ಬಿಳ್ಹಾರ ಇತರರಿದ್ದರು.
ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆ ಶುದ್ಧೀಕರಿಸಿರುವುದು ಮತ್ತು ರಾಹುಲï ಗಾಂಽ ವಿರುದ್ಧ ಉದ್ದೇಶಪೂರ್ವಕ ಎ-ï‌ಐಆರ್ ದಾಖಲಿಸಿದ ಉತ್ತರಾಖಂಡ ಸರ್ಕಾರದ ಕ್ರಮ ಖಂಡಿಸಿ ಶನಿವಾರ ಗಾಂಽ ವೃತ್ತದಲ್ಲಿ ಜಿ¯್ಲÁ ಕಾಂಗ್ರೆಸ್‌ನಿAದ ಪ್ರತಿಭಟನೆ ನಡೆಸಲಾಯಿತು. ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪುರ, ಮರೆಪ್ಪ ಬಿಳ್ಹಾರ ಇತರರಿದ್ದರು.
Published on
ಯಾದಗಿರಿ: ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆ ಶುದ್ಧೀಕರಣ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲï ಗಾಂಽ ವಿರುದ್ಧ ಎಫ್ಐಆರ್ ದಾಖಲಿಸಿದ ಉತ್ತರಾಖಂಡ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಶನಿವಾರ ಇಲ್ಲಿನ ಗಾಂಽ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಕಳೆದ ತಿಂಗಳ ಆ.೮ರಂದು ಉತ್ತರಾಖಂಡದ ಹಲದ್ವಾನಿ ರಾಮಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಸಭಾ ವಿರೋಧ ಪಕ್ಷದ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆಯನ್ನು ಮನುವಾದದ ಮನಸ್ಥಿತಿಯವರು ಶುದ್ಧೀಕರಣ ಮಾಡಿದ್ದು ಮತ್ತು ಈ ಘಟನೆಯನ್ನು ತೀವ್ರವಾಗಿ ವಿರೋಧಿಸಿದ ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್‌ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಅವರು ಖಂಡಿಸಿದರು.
ದೇಶಕ್ಕೆ ಸ್ವಾತಂತ್ರ‍್ಯ ಬಂದು ೮೦ ವರ್ಷಗಳಾದರೂ ಇನ್ನೂ ಜಾತಿ ವ್ಯವಸ್ಥೆ ಜೀವಂತವಿದೆ ಎಂಬುವುದಕ್ಕೆ ಈ ಘಟನೆಯೇ ಸಾಕ್ಷಿ. ಪ್ರಜಾಪ್ರಭತ್ವ ರಾಷ್ಟçದಲ್ಲಿ ಇಂತಹ ಘಟನೆಗಳಿಗೆ ಅವಕಾಶವಿಲ್ಲ. ಆದರೂ ಕೀಳು ಮನಸ್ಥಿತಿಯವರು ಇದನ್ನು ಮಾಡಿದ್ದಾರೆ. ಅಂತಹವರ ವಿರುದ್ಧ ಕ್ರಮ ಜರುಗಿಸಬೇಕಾದ ಸರ್ಕಾರ, ಇದನ್ನು ವಿರೋಽಸಿ ರಾಹುಲ್ ಗಾಂಧಿ ಅವರ ಮೇಲೆ ದೂರು ದಾಖಲಿಸಿದ್ದು ಸಂವಿಧಾನ ವಿರೋಽ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸರೆಡ್ಡಿ ಪಾಟೀಲ್ ಅನಪುರ ಮಾತನಾಡಿ, ಈ ಘಟನೆಯನ್ನು ದೇಶದ ಸಮಸ್ತ ಪ್ರಜ್ಞಾವಂತವರು ಖಂಡಿಸಿದ್ದಾರೆ. ಆದರೂ ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದರು. ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮರೆಪ್ಪ ಬಿಳ್ಹಾರ ಮಾತನಾಡಿ, ರಾಹುಲ್ ಗಾಂಽ ಅವರ ವಿರುದ್ಧ ಹಾಕಲಾಗಿರುವ ಎ-ï‌ಐಆರ್ ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ, ಪಕ್ಷದ ಮುಖಂಡರಾದ ಆದರ್ಶ ಯಲ್ಲಪ್ಪ, ಪರಶುರಾಂ ಚವ್ಹಾಣ, ಶಿವಕುಮಾರ ಹುಲಕಲ್, ನಾಗಣಗೌಡ ಹಳಿಗೇರಾ, ಶಿವರಾಜ ಬಾವೂರ, ಸುರೇಶಗೌಡ, ಶರಣು ಪಡಶೇಟ್ಟಿ, ಸುರೇಶ ಮಡ್ಡಿ, ಸಾಬಣ್ಣ ಕೆಂಗೂರಿ, ರಾಜಮೈನೊದ್ದಿನ್, ಶಿವು ಕೊಲಿವಾಡ, ಮಹೇಶ ಕೊಲೂರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net