ಸಾರ್ವಜನಿಕರ ಶೌಚಗೃಹ ಬಳಕೆಗೆ ಲಭ್ಯ

ಹನೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿನ ಪುರುಷರ ಶೌಚಗೃಹ ಬಳಕೆಗೆ ಲಭ್ಯವಾಗಿರುವುದು.
ಹನೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿನ ಪುರುಷರ ಶೌಚಗೃಹ ಬಳಕೆಗೆ ಲಭ್ಯವಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿನ ಪುರುಷರ ಶೌಚಗೃಹ
  • ಸಾರ್ವಜನಿಕರ ಬಳಕೆಗೆ ಲಭ್ಯ
ಹನೂರು: ನೀರಿನ ಸಮಸ್ಯೆಯಿಂದಾಗಿ 2 ದಿನಗಳಿಂದ ಬಾಗಿಲು ಮುಚ್ಚಿದ್ದ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿನ ಪುರುಷರ ಶೌಚಗೃಹ ಸೋಮವಾರ ಸಾರ್ವಜನಿಕರ ಬಳಕೆಗೆ ಲಭ್ಯವಾಗಿದೆ.
ನೀರೆತ್ತುವ ಮೋಟಾರ್ ದುರಸ್ತಿಗೊಂಡಿರುವ ಪರಿಣಾಮ ಬಾಗಿಲು ಮುಚ್ಚಿತ್ತು. ಇದರಿಂದ ಸಾರ್ವಜನಿಕರು ಬಯಲಿನ ಮೊರೆ ಹಾಗೂ ಸಮೀಪದ ಖಾಸಗಿ ಬಸ್ ನಿಲ್ದಾಣದಲ್ಲಿನ ಶೌಚಗೃಹಕ್ಕೆ ತೆರಳುವಂತಾಗಿದ್ದು, ಸಮಸ್ಯೆಯಾಗಿತ್ತು. ಮಣ್ಣೆತ್ತಿನ ಅಮಾವಾಸ್ಯೆಗೆ ಮ.ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸುವುದರಿಂದ ಈ ಶೌಚಗೃಹವನ್ನು ಬಳಕೆಗೆ ನೀಡುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿತ್ತು.
ಈ ಬಗ್ಗೆ ಜು.13ರ ವಿಜಯವಾಣಿ ಸಂಚಿಕೆಯಲ್ಲಿ ‘ಬಸ್‌ಸ್ಟ್ಯಾಂಡ್ ಶೌಚಗೃಹಕ್ಕೆ ಬೀಗ ಜನರ ಪರದಾಟ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಸಾರಿಗೆ ಇಲಾಖೆಯ ಅಧಿಕಾರಿಗಳು ಸೋಮವಾರ ಪರ್ಯಾಯ ವ್ಯವಸ್ಥೆಯ ಮೂಲಕ ನೀರಿನ ಸೌಕರ್ಯವನ್ನು ಕಲ್ಪಿಸಿ ಶೌಚಗೃಹವನ್ನು ಸಾರ್ವಜನಿಕರ ಬಳಕೆ ನೀಡಿದರು. ದುರಸ್ತಿಗೊಂಡಿರುವ ಮೋಡಾರ್ ರಿಪೇರಿಗೆ ಕಳಿಸಲಾಗಿದ್ದು, ಶೀಘ್ರವೇ ಕೂಡಲೇ ಅಳವಡಿಸಲಾಗುವುದು ಎಂದು ಸಂಚಾರಿ ನಿಯಂತ್ರಣಾಧಿಕಾರಿ ರಘು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net