ಸಾರ್ವಜನಿಕರಿಗೆ ನಿಂದನೆ, ಸಸಿ ನೆಡುವ ಶಿಕ್ಷೆ ನೀಡಿದ ಕೋರ್ಟ್

ಚಿಕ್ಕೋಡಿ ನ್ಯಾಯಾಲಯ ಆವರಣದಲ್ಲಿ ಸಸಿ ನೆಡುತ್ತಿರುವ ಅನಿಲ ಪೂಜಾರಿ.
ಚಿಕ್ಕೋಡಿ ನ್ಯಾಯಾಲಯ ಆವರಣದಲ್ಲಿ ಸಸಿ ನೆಡುತ್ತಿರುವ ಅನಿಲ ಪೂಜಾರಿ.
Published on

ಚಿಕ್ಕೋಡಿ (ಬೆಳಗಾವಿ): ತಾಲೂಕಿನ ಯಕ್ಸಂಬಾ ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವಿಸಿ ಸಾರ್ವಜನಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಅನಿಲ ಪೂಜಾರಿಗೆ ಚಿಕ್ಕೋಡಿ ಪ್ರಥಮ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎ್ಸಿ ನ್ಯಾಯಾಲಯ ಸಸಿ ನೆಡುವ ವಿನೂತನ ಶಿಕ್ಷೆ ವಿಧಿಸಿ ಈಚೆಗೆ ತೀರ್ಪು ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಜಹೀರ್ ಅತನೂರ ಅವರು, ಅಪರಾಧಿಗೆ 1 ಸಾವಿರ ರೂ. ದಂಡದ ಜತೆಗೆ ಸದಲಗಾ ಪೊಲೀಸ್ ಠಾಣೆ ಆವರಣ ಮತ್ತು ಚಿಕ್ಕೋಡಿ ನ್ಯಾಯಾಲಯ ಆವರಣದಲ್ಲಿ ತಲಾ 25 ಸಸಿ ನೆಡಲು ಆದೇಶಿಸಿದ್ದಾರೆ. ಸಸಿ ನೆಡಲು ವಿಲವಾದರೆ 30 ದಿನಗಳ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದೂ ಎಚ್ಚರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net