ಸಿಂಧನೂರಿನಲ್ಲಿ ತಹಸಿಲ್ ಕಚೇರಿ ಶಿರಸ್ತೇದಾರ್ ಶಿವಾನಂದಗೆ ಸಿಪಿಐ(ಎಂಎಲ್) ಲಿಬರೇಷನ್ ಮನವಿ ಸಲ್ಲಿಸಿತು. ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಭಗತ್‌ಸಿಂಗ್ ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ, ಕಂಠೆಪ್ಪ ರೈತನಗರಕ್ಯಾಂಪ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮೃತಳ ಕುಟುಂಬಕ್ಕೆ ಪರಿಹಾರ ನೀಡಿ
ಶಿರಸ್ತೇದಾರ್‌ಗೆ ಸಿಪಿಐ(ಎಂಎಲ್) ಲಿಬರೇಷನ್ ಮನವಿ
ಸಿಂಧನೂರು: ದ್ವಿತೀಯ ಪಿಯು ವಿದ್ಯಾರ್ಥಿನಿ ಭೂಮಿಕಾ ಸಾವಿನ ಪ್ರಕರಣ ತನಿಖೆಗೊಳಪಡಿಸಬೇಕು. ಮೃತಳ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿ ಸಿಪಿಐ(ಎಂಎಲ್) ಲಿಬರೇಷನ್ ವತಿಯಿಂದ ಸೋಮವಾರ ತಹಸಿಲ್ ಕಚೇರಿ ಶಿರಸ್ತೇದಾರ್ ಶಿವಾನಂದಗೆ ಮನವಿ ಸಲ್ಲಿಸಲಾಯಿತು.
ಇಲ್ಲಿನ ಸಾರ್ವಜನಿಕ ಗ್ರಂಥಾಲಯ ಹಿಂಭಾಗದಲ್ಲಿರುವ ಎ.ವಿ.ಎಸ್. ಬ್ರಿಲಿಯಂಟ್ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಭೂಮಿಕಾ ವೀರರಾಜು ಅರಗಿನಮರ ಕ್ಯಾಂಪ್ ನಿವಾಸಿಯಾಗಿದ್ದು, ಕಾಲೇಜಿನ ಮುಂಭಾಗದಲ್ಲಿಯೇ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.
ವಿದ್ಯಾರ್ಥಿಗಳು ಹಾಗೂ ಪಾಲಕರ ಸಮುದಾಯದಲ್ಲಿ ಭಯ, ಆತಂಕಕ್ಕೆ ಘಟನೆ ಕಾರಣವಾಗಿದೆ. ದುರ್ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ಶಾಲಾ-ಕಾಲೇಜಿಗೆ ಬರುವ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಭಯಪಡುವಂತಾಗಿದೆ.
ವಿದ್ಯಾರ್ಥಿನಿ ಸಾವಿನ ಘಟನೆ ಪಾರದರ್ಶಕವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಇಂಥ ದುರ್ಘಟನೆಗಳು ಮರುಕಳಿಸದಂತೆ ಜಿಲ್ಲಾ, ತಾಲೂಕು ಆಡಳಿತ, ಸಂಚಾರ ಠಾಣೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮುಖಂಡರಾದ ನಿಂಗಪ್ಪ ಸುಲ್ತಾನಪುರ, ತಿಮ್ಮಣ್ಣ ಸುಲ್ತಾನಪುರ,ಪ್ರವೀಣ್, ಅಮರೇಶ ಇದ್ದರು.