ದೋರನಹಳ್ಳಿಯಲ್ಲಿ ಪಿಯು ಪ್ರವೇಶ ಆರಂಭ

ದೋರನಹಳ್ಳಿಗೆ ಪಿಯು ಕಾಲೇಜು ಮಂಜೂರಾಗಿದ್ದರಿಂದ ಈಗಾಗಲೇ ಪಿಯು ಪ್ರವೇಶ ಹಿನ್ನೆಲೆಯಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ್​, ಡಿಡಿಪಿಐ ಚನ್ನಬಸಪ್ಪ ಮುದೋಳ್​, ಡಿಡಿಪಿಯು ಪಂಡಿತರಾವ ರಾಠೋಡ್​, ಬಿಇಒ ಹಣಮಂತ್ರಾಯ ಸೋಮಾಪುರ ಭೇಟಿ ನೀಡಿ ಪರಿಶೀಲಿಸಿದರು. ಸಿಒ ಸಿದ್ರಾಮೇಶ್ವರ ಶಖಾಪುರ, ಮಾನಪ್ಪ ಹುಲಸೂರ, ಹಳ್ಳೆಪ್ಪ ಹುಡೇದ್​,  ಅಬ್ದುಲ್​ ಬಾಷಾ ಅರ್ಜುಣಗಿ ಇತರರಿದ್ದರು.
ದೋರನಹಳ್ಳಿಗೆ ಪಿಯು ಕಾಲೇಜು ಮಂಜೂರಾಗಿದ್ದರಿಂದ ಈಗಾಗಲೇ ಪಿಯು ಪ್ರವೇಶ ಹಿನ್ನೆಲೆಯಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ್​, ಡಿಡಿಪಿಐ ಚನ್ನಬಸಪ್ಪ ಮುದೋಳ್​, ಡಿಡಿಪಿಯು ಪಂಡಿತರಾವ ರಾಠೋಡ್​, ಬಿಇಒ ಹಣಮಂತ್ರಾಯ ಸೋಮಾಪುರ ಭೇಟಿ ನೀಡಿ ಪರಿಶೀಲಿಸಿದರು. ಸಿಒ ಸಿದ್ರಾಮೇಶ್ವರ ಶಖಾಪುರ, ಮಾನಪ್ಪ ಹುಲಸೂರ, ಹಳ್ಳೆಪ್ಪ ಹುಡೇದ್​, ಅಬ್ದುಲ್​ ಬಾಷಾ ಅರ್ಜುಣಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಸಕ್ತ ಸಾಲಿನಿಂದಲೇ ಪಿಯುವ ವಾಣಿಜ್ಯ ಪ್ರವೇಶ
  • ಎಂಪಿಎಸ್​ ಶಾಲೆಯಲ್ಲಿ ಕಾಲೇಜು
ದೋರನಹಳ್ಳಿ: ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ ಪಿಯು ವಾಣಿಜ್ಯ ಕೋರ್ಸ್​ಗೆ ಪ್ರವೇಶ ಆರಂಭಿಸಿ ನಂತರ ತರಗತಿ ಎಲ್ಲಿ ನಡೆಸಬೇಕೆನ್ನುವ ಕುರಿತು ನಿರ್ಧರಿಸಲಾಗುವುದು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಹೇಳಿದರು.
ಪಟ್ಟಣಕ್ಕೆ ಶಿಣ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ಭೇಟಿ ನೀಡಿದ ಅವರು, ಸರ್ಕಾರಿ ಪ್ರೌಢಶಾಲೆ ಮತ್ತು ಪಿಎಂಶ್ರೀ ಎಂಪಿಎಸ್​ ಶಾಲೆಗೆ ಭೇಟಿ ನೀಡಿ ನೂತನ ಸರ್ಕಾರಿ ಪಿಯು ಕಾಲೇಜು ಆರಂಭಕ್ಕೆ ಕೋಣೆಗಳ ವೀಣೆ ಮಾಡಿದರು.
ನಂತರ ಮಾತನಾಡಿದ ಅವರು, ದೋರನಹಳ್ಳಿ ಪಟ್ಟಣಕ್ಕೆ ಪಿಯು ಕಾಲೇಜಿನ ಅಗತ್ಯವಿತ್ತು. ಈಗ ಸರ್ಕಾರದಿಂದ ಅನುಮೋದಿಸಿ ತರಲಾಗಿದ್ದು ಕಟ್ಟಡದ ಕೊರತೆ ಇದೆ. ಸದ್ಯ ಪ್ರೌಢಶಾಲೆಯಲ್ಲಿ ಪಿಯು ಪ್ರವೇಶ ಆರಂಭಿಸಿ ನಂತರ ತರಗತಿಗಳನ್ನು ಎಂಪಿಎಸ್​ ಅಥವಾ ಪ್ರೌಢಶಾಲೆಯಲ್ಲಿ ನಡೆಸುವ ಕುರಿತು ಅನುಕೂಲಕರ ವಾತಾವರಣ ನೋಡಿ ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಅನುದಾನ ತಂದು ಆದಷ್ಟು ಬೇಗ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಡಿಡಿಪಿಯು ಪಂಡಿತರಾವ ರಾಠೋಡ್​ ಮಾತನಾಡಿ, ಪ್ರಸಕ್ತ ಸಾಲಿನಿಂದ ಪಿಯು ಪ್ರವೇಶ ಆರಂಭವಾಗಿದ್ದು ವಾಣಿಜ್ಯ ಕೋರ್ಸ್​ಗೆ ಮಾತ್ರ ಪ್ರವೇಶ ಪಡೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಪಸ್ತಾವನೆ ಸಲ್ಲಿಸಿ ಕಲಾ ಮತ್ತು ವಿಜ್ಞಾನ ಪ್ರವೇಶಕ್ಕೆ ಮನವಿ ಮಾಡಲಾಗುವುದು ಎಂದರು. ಡಿಡಿಪಿಐ ಚನ್ನಬಸಪ್ಪ ಮುದೋಳ್​ ಮಾತನಾಡಿ, ಪ್ರೌಢಶಾಲೆ ಮತ್ತು ಎಂಪಿಎಸ್​ ಶಾಲೆಯಲ್ಲಿ ಪೂರಕ ವಾತಾವರಣ ನೋಡಿ ತರಗತಿ ಆರಂಭಿಸಲಾಗುತ್ತದೆ ಎಂದು ಹೇಳಿದರು.
ಪ್ರಾಚಾರ್ಯ ರುದ್ರಗೌಡ ಪಾಟೀಲ್​ ಮಾತನಾಡಿದರು. ನಂತರ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ ಸಿಒ ಮತ್ತು ಸಿಬ್ಬಂದಿ ಕಾರ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಅಕೌಂಟೆಂಟ್​ ಅನಿಲ್​ ಕುಮಾರ, ಮುಖಂಡರಾದ ಮಾನಪ್ಪ ಹುಲಸೂರ್​, ಅಬ್ದುಲ್​ ಬಾಷಾ ಅರ್ಜುಣಗಿ, ಹಳ್ಳೆಪ್ಪ ಹುಡೇದ್​, ಗಪೂರಸಾಬ್​ ಗೋಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net