ಹಸಿದವರಿಗೆ ಅನ್ನ ನೀಡುವುದೇ ಧರ್ಮ

ಶಹಾಬಾದ್​ನಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ನ್ಯಾಯವಾದಿ ಶೇಖ್​ ಖ್ವಮೋದ್ದಿನ್​ ಜುನೇದಿ ಸಾಹೇಬ್​ ಮಾತನಾಡಿದರು. ಅನ್ವರ್​ ಚಪಾಟ್ಲೆ, ಡಾ.ಎಂ.ಎ.ರಶೀದ್​, ಮರಿಯಪ್ಪ ಹಳ್ಳಿ, ಡಾ.ಫಾರೂಕ್​ ಮಣ್ಣೂರ ಇತರರಿದ್ದರು.
ಶಹಾಬಾದ್​ನಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ನ್ಯಾಯವಾದಿ ಶೇಖ್​ ಖ್ವಮೋದ್ದಿನ್​ ಜುನೇದಿ ಸಾಹೇಬ್​ ಮಾತನಾಡಿದರು. ಅನ್ವರ್​ ಚಪಾಟ್ಲೆ, ಡಾ.ಎಂ.ಎ.ರಶೀದ್​, ಮರಿಯಪ್ಪ ಹಳ್ಳಿ, ಡಾ.ಫಾರೂಕ್​ ಮಣ್ಣೂರ ಇತರರಿದ್ದರು.
Published on
ಶಹಾಬಾದ್​: ಹಸಿದವರಿಗೆ ಅನ್ನ ನೀಡುವುದು, ಕೆಳಗೆ ಬಿದ್ದವರನ್ನು ಮೇಲಕ್ಕೆತ್ತುವುದು ನಿಜವಾದ ಧರ್ಮವಾಗಿದೆ. ಪ್ರವಾದಿ ಮುಹಮ್ಮದರು ಅದನ್ನು ಮನಕುಲಕ್ಕೆ ಬೋಧಿಸಿದ್ದಾರೆ ಎಂದು ನ್ಯಾಯವಾದಿ ಶೇಖ್​ ಖ್ವಮೋದ್ದಿನ್​ ಜುನೇದಿ ಸಾಹೇಬ್​ (ವಾಹಜ್​ ಬಾಬಾ) ಹೇಳಿದರು. ನಗರದಲ್ಲಿ ಶರೀಯತ್​ ಸಮಿತಿಯಿಂದ ಬುಧವಾರ ಆಯೋಜಿಸಿದ್ದ ಈದ್​ ಎ ಮಿಲಾದ್​ ಉನ್​ ನಬಿ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲರೂ ತಂದೆ&ತಾಯಿ ಹಾಗೂ ಹೆಣ್ಣು ಮಕ್ಕಳನ್ನು ಗೌರವಿಸಬೇಕು. ದಯೆ, ಕರುಣೆ, ಸತ್ಯ, ಪ್ರೀತಿ, ಮಾನವೀಯತೆಯನ್ನು ಅನುಸರಿಸಿದಾಗ ಮಾತ್ರ ನಿಜವಾದ ಮುಸ್ಲಿಮರಾಗಲು ಸಾಧ್ಯ ಎಂದರು. ಶರೀಯತ್​ ಸಮಿತಿ ಅಧ್ಯಕ್ಷ ಅನ್ವರ್​ ಚಪಾಟ್ಲೆ ಅಧ್ಯಕ್ಷತೆ ವಹಿಸಿದ್ದರು. ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್​, ಜಾಮೀಯಾ ಮಸೀದಿ ಸಮಿತಿ ಅಧ್ಯಕ್ಷ ಮಹ್ಮದ್​ ಮತೀನ್​ ಸೇಠ, ಪ್ರಮುಖರಾದ ಡಾ.ಫಾರೂಕ್​ ಮಣ್ಣೂರ, ಮರಿಯಪ್ಪ ಹಳ್ಳಿ, ಶಂಕರಗೌಡ ಪಾಟೀಲ್​, ಪರಶುರಾಮ ವನಂಜಕರ್​, ಡಾ.ಅಶೋಕ ಜಿಂಗಾಡೆ, ಸೂರ್ಯಕಾಂತ ಕೋಬಾಳ, ಮೃತ್ಯುಂಜಯ ಸ್ವಾಮಿ ಹಿರೇಮಠ, ಪುರುಷೋತ್ತಮ ಮಂತ್ರಿ, ಸುರೇಶ ನಾಯಕ, ರಮೇಶ ಭಟ್ಟ, ನಾಗೇಂದ್ರ ನಾಟೀಕಾರ, ಶರಣು ಪಗಲಾಪುರ, ಮಹಿಬೂಬ್​ ಪಟೇಲ, ಡಾ.ಅಹ್ಮದ್​ ಪಟೇಲ್​, ಸುಲೇಮಾನ್​ ಕೋಲಾರಕರ್​, ಅಕ್ಬರ್​ ಚೀಟ್​, ಮಹ್ಮದ್​ ಮಸ್ತಾನ್​ ಇತರರಿದ್ಗದರು. ಮಸೀದಿ ಚೌಕ್​ನಿಂದ ಜಾಮೀಯಾ ಮಸೀದಿವರೆಗೆ ಮೆರವಣಿಗೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net